Password Mistakes : ನೀವೂ ಈ ತಪ್ಪುಗಳನ್ನು ಮಾಡುತ್ತೀರಾ? ಸ್ಟ್ರಾಂಗ್‌ ಪಾಸ್‌ವರ್ಡ್‌ ಸೆಟ್‌ ಮಾಡಲು ಹೀಗೆ ಮಾಡಿ!!

ಸ್ನೇಹಿತರೇ ಇರಲಿ ಅಥವಾ ನಿಮ್ಮ ಸಂಬಂಧಿಕರೇ ಇರಲಿ, ಪಾಸ್‌ವರ್ಡ್‌ (Password Mistakes) ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ವಿಷಯವಲ್ಲ. ನಮ್ಮ ವೈಯಕ್ತಿಕ ಜೀವನವನ್ನು ಮತ್ತು ಹಣಕಾಸು ಮಾಹಿತಿಗಳನ್ನು ಸಂರಕ್ಷಿಸಲು ನಾವು ಪಾಸ್‌ವರ್ಡ್‌ಗಳನ್ನು ಖಾಸಗಿಯಾಗಿ ಇರಿಸುತ್ತೇವೆ. ಉತ್ತಮ ಪಾಸ್‌ವರ್ಡ್‌ ನಿಮ್ಮ ಮತ್ತು ಸೈಬರ್‌ ಕ್ರಿಮಿನಲ್‌ಗಳ ನಡುವೆ ನಿಲ್ಲಬಹುದು. ಹ್ಯಾಕರ್‌ ಮತ್ತು ಪಾಸ್‌ವರ್ಡ್‌ ದಾಳಿಯ ವಿಷಯಕ್ಕೆ ಬಂದಾಗ, ನೀವು ಆಲೋಚಿಸುವುದಕ್ಕಿಂತಲೂ ಹೆಚ್ಚಿನ ಶಕ್ತಿಯನ್ನು ಹೊಂದಿದ್ದೀರಿ.

ನೋರ್ಟನ್‌ ಲೈಫ್‌ ಲಾಕ್‌ ನ ಪ್ರಕಾರ ಪಾಸ್‌ವರ್ಡ್‌ ಬಳಸುವಾಗ ಮಾಡುವ ಸಾಮಾನ್ಯವಾಗಿ ತಪ್ಪುಗಳು:

ಪೆಟ್‌ನೇಮ್ಸ್‌ :
ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನು ಹ್ಯಕರ್‌ಗಲು ಸುಲಭವಾಗಿ ಭೇದಿಸಬಹುದು. ಅವರು ಸಾಮಾನ್ಯವಾಗಿ ಪೆಟ್‌ ನೇಮ್‌(ಸಾಕು ಪ್ರಾಣಿಗಳ ಹೆಸರು) ಗಳನ್ನು ಊಹಿಸುವ ಮೂಲಕ ನಿಮ್ಮ ಖಾತೆಗಳಿಗೆ ಬಲವಂತವಾಗಿ ಪ್ರವೇಶಿಸಬಹುದು. ಪೆಟ್ಸ್‌ ನೇಮ್‌ ಗಳನ್ನು ಪಾಸ್‌ವರ್ಡ್‌ ಆಗಿ ಬಳಸುವುದರಿಂದ ನೀವು ಕೆಟ್ಟ ಸೈಬರ್‌ ಕ್ರಿಮಿನಲ್‌ಗಳಿಗೆ ಸುಲಭವಾಗಿ ಗುರಿಯಾಗಬಹುದು.

ಸ್ಪೋಸ್‌ ಅಥವಾ ಪಾರ್ಟನರ್‌ ಹೆಸರು :
ಸಂಬಂಧದಲ್ಲಿರುವ ಜನರು ಪರಸ್ಪರ ಸಾಧನಗಳನ್ನು ಬಳಸಲು ಪಿನ್‌ಗಳು, ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುತ್ತಾರೆ ಅಥವಾ ಫಿಂಗರ್‌ ಪ್ರಿಂಟ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಅದಕ್ಕಿಂತಲೂ ಹೆಚ್ಚಿನದಾಗಿ ಜನರು ತಮ್ಮ ಜೀವನ ಸಂಗಾತಿಗಳ ಹೆಸರುಗಳನ್ನೇ ಪಾಸ್‌ವರ್ಡ್‌ ಆಗಿ ಬಳಸುತ್ತಾರೆ. ನಿಮ್ಮ ಸಂಗಾತಿಗಳ ಹೆಸರನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕುವ ಅಭ್ಯಾಸದ ಮೂಲಕ ಸುಲಭವಾಗಿ ಸಿಗುತ್ತದೆ. ಈ ಅಭ್ಯಾಸವು ಅನಗತ್ಯ ಪಾಸ್‌ವರ್ಡ್‌ ಅಪಾಯಗಳಿಗೆ ನಿಮ್ಮನ್ನು ಒಡ್ಡುತ್ತದೆ.

ಡೇಟ್‌ ಆಪ್‌ ಬರ್ತ್:
ನಿಮ್ಮ ಜನ್ಮದಿನ, ನಿಮ್ಮ ಜನ್ಮ ವರ್ಷ, ಅಥವಾ ಇತರ ಜನರ ಜನ್ಮದಿನ ಅಥವಾ ಜನ್ಮ ವರ್ಷವಾಗಿರಬಹುದಾದ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮ್ಮ ಪಾಸ್‌ವರ್ಡ್‌ ಊಹಿಸಲು ಸುಲಭವಾಗುತ್ತದೆ. ನಿಮ್ಮ ಜನ್ಮ ದಿನಾಂಕದ ವರ್ಷವು 1900 ರ ದಶಕದಲ್ಲಿ ಯಾವುದಾದರೂ ಒಂದು ವರ್ಷ ಅಥವಾ ಸಂಖ್ಯೆಗಳ ಅನುಕ್ರಮವಾಗಿದ್ದರೆ ಹ್ಯಾಕರ್‌ಗಳು ನಿಮ್ಮ ಪಾಸ್‌ವರ್ಡ್‌ ಅನ್ನು ಭೇದಿಸುವ ಸಾಧ್ಯತೆಗಳು ಹೆಚ್ಚು.

ಸಾಮಾನ್ಯ ಫ್ರೇಸ್‌ಗಳು :
ಬಹಳಷ್ಟು ಜನರು ಫ್ರೇಸ್‌ಗಳನ್ನು ಇಟ್ಟುಕೊಳ್ಳುವುದರಿಂದ ಅದು ಬಹಳಷ್ಟು ಸುರಕ್ಷಿತ ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು ತಿಳುವಳಿಕೆ. ಜನಪ್ರಿಯ ಪುಸ್ತಕಗಳ ಹೆಸರು ಅಥವಾ ಸಿನಿಮಾದ ಹೆಸರುಗಳನ್ನು ಸುಲಭವಾಗಿ ಊಹಿಸಬಹುದಾಗಿದೆ. Password123 ಮತ್ತು idonthaveapassword ಗಳು ಬಹಳ ಉಪಯೋಗಿಸುವ ಪಾಸ್‌ವರ್ಡ್‌ಗಳು.

ಸ್ಟ್ರಾಂಗ್‌ ಪಾಸ್‌ವರ್ಡ್‌ ರಚಿಸಲು ಕೆಲವು ಟಿಪ್ಸ್‌ಗಳು

  • ಫೋನ್‌ ನಂಬರ್‌ ಬಳಸಲೇ ಬೇಡಿ.
  • ಜನ್ಮದಿನಾಂಕ, ಹೆಸರು, ಕುಟುಂಬ ಸದಸ್ಯರ ಹೆಸರು ಅಥವಾ ಪೆಟ್ಸ್‌ ನೇಮ್‌ಗಳನ್ನು ನೇರವಾಗಿ ಬಳಕೆ ಮಾಡಬೇಡಿ.
  • ಅಪ್ಪರ್‌ ಕೇಸ್‌ ಮತ್ತು ಲೋವರ್‌ ಕೇಸ್‌, ನಂಬರ್‌ ಸೇರಿಸಿ ಪಾಸ್‌ವರ್ಡ್‌ ರಚಿಸಿಕೊಳ್ಳಿ.
  • ಸಾಮಾನ್ಯ ಪಾಸ್‌ವರ್ಡ್‌ 123456, password, qwerty ಮುಂತಾದವುಗಳನ್ನು ಬಳಕೆ ಮಾಡಲೇ ಬೇಡಿ.
  • ನಿಮ್ಮ ಪಾಸ್‌ವರ್ಡ್‌ ಕನಿಷ್ಟ 8 ಅಕ್ಷರಗಳ ಉದ್ದವಿರಲಿ.
  • ಪಾಸ್‌ವರ್ಡ್‌ ಮೆನೆಜ್ಮೆಂಟ್‌ ಸಿಸ್ಟಮ್‌ ಉಪಯೋಗಿಸಿಕೊಂಡು ಪಾಸ್‌ವರ್ಡ್‌ ರಚಿಸಿಕೊಳ್ಳಿ. ಇದು ಸಂಕೀರ್ಣ ಪಾಸ್‌ವರ್ಡ್‌ ರಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Google Darker Dark Mode: ಗೂಗಲ್ ಡಾರ್ಕ್ ಮೋಡ್‌ನಲ್ಲಿ ಇನ್ನೊಂದು ಡಾರ್ಕ್ ಮೋಡ್ ಬರಲಿದೆ!

ಇದನ್ನೂ ಓದಿ : Air Conditioners Tips: ನಿಮಗಿದು ಗೊತ್ತಾ? AC ಉಪಯೋಗಿಸಿಯೂ ವಿದ್ಯುತ್‌ ಬಿಲ್‌ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು?

(commonly used Password Mistakes and how to avoid it)

Comments are closed.