Kodagu : ಮಳೆಗಾಲ ಎದುರಿಸಲು ಕೊಡಗು ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು : ಮಂತರ್ ಗೌಡ

ಕೊಡಗು : ಕಳೆದ ಮೂರು ವರ್ಷಗಳಿಂದಲೂ ಕೊಡಗು (Kodagu) ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಹೀಗಾಗಿ ಮುಂದಿನ ತಿಂಗಳು ಆರಂಭವಾಗಲಿರುವ ಮಳೆಗಾಲಕ್ಕೆ ಕೊಡಗಿನ ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ತಿನ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಸಲಹೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಂತರ್ ಗೌಡ , ಕಳೆದ ಮೂರು ವರ್ಷಗಳಿಂದ ಕೊಡಗು ಭೀಕರವಾದ ಮಳೆಗಾಲವನ್ನು ಎದುರಿಸಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಇನ್ನು ಒಂದು ತಿಂಗಳು ಬಾಕಿ ಇರುವಾಗ ಈಗಿಂದಲೇ, ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

The Kodagu district should prepare for the rainy season demand MANTAR GOWDA

ಕಳೆದ ಮೂರು ವರ್ಷಗಳಿಂದ ಕೊಡಗು ಭೀಕರವಾದ ಮಳೆಯಿಂದಾಗಿ, ಅನಾವೃಷ್ಟಿಗೆ ತುತ್ತಾಗಿ ಬಹಳಷ್ಟು ಸಮಸ್ಯೆಯನ್ನು ಅನುಭವಿಸಿದ್ದು ಬಹುತೇಕ ಮಂದಿ ಮನೆಗಳನ್ನು ಹಾಗೂ ಕೃಷಿ ಭೂಮಿಗಳನ್ನು ಕಳೆದುಕೊಂಡಿದ್ದರು. ಪ್ರತಿವರ್ಷ ಕೊಡಗಿಗೆ ಈ ರೀತಿಯ ಅನಾಹುತಗಳು ಜರುಗುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಈ ನೆಲೆಯಲ್ಲಿ ಬಹಳ ಅವಶ್ಯಕವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯವಾಗಿದೆ. ಈ ಅಂಶವನ್ನು ಪರಿಗಣಿಸಿರುವ ಮಂತರ್ ಗೌಡ ಜಿಲ್ಲಾಡಳಿತಕ್ಕೆ ಸೂಕ್ತ ಸಲಹೆಯನ್ನು ನೀಡಿದ್ದು, ಜಿಲ್ಲಾಡಳಿತ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಇದನ್ನೂ ಓದಿ : No liquor : ಮದ್ಯಪ್ರಿಯರಿಗೆ ಶಾಕ್‌ : ಇಂದಿನಿಂದ ರಾಜ್ಯದಲ್ಲಿ ಸಿಗಲ್ಲ ಮದ್ಯ

ಇದನ್ನೂ ಓದಿ : ಬಾಯಿಗೆ ಬಂದದ್ದು ಮಾತನಾಡುವುದೇ ಕಾಂಗ್ರೆಸ್ಸಿಗರ ಕೆಲಸ : ಬಿ.ಸಿ ಪಾಟೀಲ್​

The Kodagu district should prepare for the rainy season demand MANTAR GOWDA

Comments are closed.