Nalin Audio Viral : ಯಾರಿಗೂ ಹೇಳ್ಬೇಡಿ ಹೊಸ ಟೀಂ ಮಾಡ್ತೇವೆ : 3 ಜನರಲ್ಲಿ ಒಬ್ಬರು ಸಿಎಂ : ಕಟೀಲ್‌ ಆಡಿಯೋ ವೈರಲ್‌

ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆಯಾಗೋದು ಖಚಿತ. ಕೇಂದ್ರ ನಾಯಕರೇ ಆ ಮೂವರಲ್ಲಿ ಒಬ್ಬರ ಹೆಸರನ್ನು ಫೈನಲ್‌ ಮಾಡ್ತಾರೆ. ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಟೀಂ ಅನ್ನು ತೆಗೆಯುತ್ತೇವೆ ಎಂದು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ತನ್ನ ಆಪ್ತರ ಜೊತೆಗೆ ಮಾತನಾಡಿದ ಆಡಿಯೋ ವೈರಲ್‌ ಆಗಿದೆ.

ನಾಯಕತ್ವ ಬದಲಾವಣೆಯ ಬೆನ್ನಲ್ಲೇ ನಳಿನ್‌ ಕುಮಾರ್‌ ಅವರ ಆಡಿಯೋ ಇದೀಗ ಸಖತ್‌ ವೈರಲ್‌ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ತುಳು ಭಾಷೆಯಲ್ಲಿ ನಳಿನ್‌ ತನ್ನ ಅತ್ಯಾಪ್ತರ ಜೊತೆಯಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನೀನು ಭಯ ಪಡಬೇಡ. ಏನೂ ಸಮಸ್ಯೆಯಿಲ್ಲ. ನಾವಿದ್ದೇವೆ, ಮೂವರ ಹೆಸರು ಇದೆ. ಇದರಲ್ಲಿ ಯಾರಿಗಾದರೂ ಸಿಗುವ ಚಾನ್ಸ್‌ ಇದೆ. ಯಾರೇ ಆದ್ರೂ ಎಲ್ಲಾ ನಮ್ಮ ಕೈಯಲ್ಲೇ ಇರುತ್ತದೆ ಎಂದು ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದ್ದಾರೆನ್ನುವ ಆಡಿಯೋ ವೈರಲ್‌ ಆಗಿದೆ.

ಬಿಜೆಪಿ ಹಿರಿಯ ಸಚಿವರಾದ ಈಶ್ವರಪ್ಪ ಹಾಗೂ ಜಗದೀಶ್‌ ಶೆಟ್ಟರ್‌ ಟೀಮ್‌ ಅನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ ಎನ್ನುವ ಮಾತುಗಳು ಆಡಿಯೋದಲ್ಲಿ. ಯಡಿಯೂರಪ್ಪ ದೆಹಲಿ ಭೇಟಿಯ ಬೆನ್ನಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಫಿಕ್ಸ್‌ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ವೈರಲ್‌ ಆಗಿರುವ ಆಡಿಯೋ ಇನ್ನಷ್ಟು ಪುಷ್ಟಿ ನೀಡುವಂತಿದೆ.

ಇನ್ನು ಯಡಿಯೂರಪ್ಪ ಬದಲಾವಣೆಯನ್ನು ಕೇಂದ್ರ ನಾಯಕರೇ ಮಾಡ್ತಾರೆ. ಅಲ್ಲದೇ ಆ ಮೂರು ಮಂದಿಯ ಹೆಸರಿನಲ್ಲಿ ಓರ್ವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೆಲ್ಲವನ್ನೂ ನೋಡಿದ್ರೆ ರಾಜ್ಯದಲ್ಲಿ ಅಗಸ್ಟ್‌ ಮೊದಲ ವಾರದಲ್ಲಿ ಸಿಎಂ ಬದಲಾವಣೆಯಾಗೋದು ಖಚಿತ ಎನ್ನಲಾಗುತ್ತಿದೆ.

ಆದರೆ ಆಡಿಯೋ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಳಿನ್‌ ಕುಮಾರ್‌ ಕಟೀಲು ಅವರು, ಈ ಆಡಿಯೋ ನನ್ನದಲ್ಲ. ಈ ಕುರಿತು ತನಿಖೆಯನ್ನು ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ.

Comments are closed.