ಭಕ್ತಿಗಷ್ಟೇ ಅಲ್ಲಾ, ಆಯುರಾರೋಗ್ಯ ಕರುಣಿಸುತ್ತೆ ತುಳಸಿ

0
  • ಶ್ರೀರಕ್ಷಾ ಬಡಾಮನೆ

ಹಿಂದೂ ಸಂಪ್ರದಾಯದ ಪ್ರಕಾರ ದಿನ ತುಳಸಿ ಕಟ್ಟೆಯ ಸುತ್ತ ಸುತ್ತಿದರೆ ನಮ್ಮ ನಿತ್ಯ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಸಂಪ್ರದಾಯ ನಂಬಿಕೆಗಳು ವೈಜ್ಞಾನಿಕವಾಗಿ ಕೂಡ ತಮ್ಮದೇ ಮಹತವ್ವನ್ನು ಪಡೆದಿದೆ.

ತುಳಸಿ ಗಿಡದ ಬಗೆಗಿನ ಮುಗಿಯದಷ್ಟು ಮಾಹಿತಿಗಳನ್ನು ನೀವು ತಿಳಿದರೆ ತಪ್ಪದೆ ನಿಮ್ಮ ಮನೆಯ ಮುಂಬಾಗಿಲು ಕೂಡ ತುಳಸಿ ಗಿಡಗಳಿಂದ ಸಮೃದ್ದವಾಗುತ್ತದೆ.

ತುಳಸಿ ಮೂಲತಃ ಇರಾನ್, ಭಾರತ ಮತ್ತು ಏಷ್ಯಾ ಪ್ರದೇಶಗಳ ಸ್ಥಳೀಯ ಸಸ್ಯವಾಗಿದೆ. ಹಿಂದೂ ಧರ್ಮೀಯದ ಪ್ರಕಾರ ತುಳಸಿ ಕೇವಲ ಒಂದು ಸಾಮಾನ್ಯ ಸಸ್ಯವಲ್ಲ, ಈ ಗಿಡಕ್ಕೆ ಪಾವಿತ್ರ್ಯತೆಯ ಸ್ಥಾನವಿದೆ. ತುಳಸಿ ಪ್ರತಿಜೀವಕವಾಗಿದ್ದು ರೋಗಾಣುಗಳನ್ನು ಹೊಡೆದೋಡಿಸುವ ಶಿಲೀಂದ್ರ ನಾಶಕವೂ ಹೌದು, ನಾವು ಪೂಜಿಸೋ ತುಳಸಿ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.


ತುಳಸಿ ಎಲೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ ಇರುವುದರಿಂದ ವಯಸ್ಸಾಗುವುದನ್ನು ತಡೆಯುತ್ತದೆ. ತುಳಸಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ದಿನನಿತ್ಯದ ನಮ್ಮ ಬದುಕಿನಲ್ಲಿ ತುಳಸಿ ತುಂಬಾ ಸಹಕಾರಿಯೂ ಹೌದು.

ಪ್ರತಿದಿನ ಬೆಳಿಗ್ಗೆ 5 ತುಳಸಿ ಎಲೆಗಳನ್ನು ನೀರಿನೊಂದಿಗೆ ಖಾಲಿ ಹೊಟ್ಟೆಗೆ ಸೀವಿಸುವುದರಿಂದ ಬುಧ್ಧಿ ಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯಿದೆ ಎನ್ನುತ್ತಿದೆ ಆಯುರ್ವೇದ.

ಸುಮಾರು 10 ರಿಂದ 20 ಮಿಲಿ ತುಳಸಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರ ಜೊತೆಗೆ ಮೈಗೆ ಹಚ್ಚುವುದರಿಂದ ತುರಿಕೆ, ಉರಿ ಕಡಿಮೆಯಾಗುತ್ತದೆ.

ಸೊಳ್ಳೆಯ ಕಾಟದಿಂದ ಮುಕ್ತರಾಗಲು ರಾಸಾಯನಿಕ ಔಷಧಿಗಳನ್ನು ಬಳಕೆ ಮಾಡುತ್ತೇವೆ. ಆದರೆ ತುಳಸಿಯ ಎಲೆಗೆ ಸೊಳ್ಳೆಗಳನ್ನು ಓಡಿಸುವ ಶಕ್ತಿಯಿದೆ. ಸೊಳ್ಳೆ ಕಾಟವಿದ್ದರೆ ತುಳಸಿ ಎಲೆಗಳನ್ನು ಮೈಗೆ ಉಜ್ಜಿಕೊಳ್ಳುವುದರಿಂದ ಸೊಳ್ಳೆಗಳನ್ನು ದೂರ ಓಡಿಸಿ ಬಿಡಬಹುದು

ಇನ್ನು ಹಲ್ಲು ನೋವಿನ ಸಮಸ್ಯೆ ಕಂಡು ಬಂದಲ್ಲಿ 2 ರಿಂದ 4 ತುಳಸಿ ಎಲೆಗಳ ಜೊತೆಗೆ 2ರಿಂದ3 ಕಾಳುಮೆಣಸನ್ನು ಸೇರಿಸಿ ಚೆನ್ನಾಗಿ ಜಜ್ಜಿ ನೋವಿರುವ ಹಲ್ಲಿನ ನಡುವೆ ಇಟ್ಟುಕೊಂಡರೆ ನೋವು ತಕ್ಷಣ ಕಡಿಮೆ ಯಾಗುತ್ತದೆ.

ತುಳಸಿ ಗಿಡದ ಪ್ರತಿಯೊಂದು ಭಾಗವೂ ಔಷದೀಯ ಗುಣಗಳನ್ನು ಹೊಂದಿದೆ. ತುಳಸಿಯ ಎಲೆ, ಕಾಂಡ, ಬೇರು, ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ನಿತ್ಯವೂ 2 ರಿಂದ 5 ಗ್ರಾಂ ನಷ್ಟು ತುಳಸಿಯ ಪುಡಿಯನ್ನು ಹಾಲಿನೊಂದಿಗೆ ನಿಯಮಿತವಾಗಿ ಸೇವಿಸಿದರೆ ಸಂದಿಗಳ ನೋವು ಕಡಿಮೆಯಾಗುತ್ತದೆ.

ತುಳಸಿ ಎಲೆಯ ರಸವನ್ನು ಮಾಡಿ ಪ್ರತಿದಿನ ಬೆಳಿಗ್ಗೆ ಬಾಯಿ ಮುಕ್ಕಳಿಸುವುದರಿಂದ ಬಾಯಿ ವಾಸನೆ ಕಮ್ಮಿ ಮಾಡಬಹುದು. ಪ್ರತಿದಿನ ತುಳಸಿ ದಳಗಳನ್ನು ಚಹಾದ ಜೊತೆ ಕುದಿಸಿ ಕುಡಿಯುದರಿಂದ ಜ್ವರ ಮತ್ತು ಶೀತ ಕಡಿಮೆಯಾಗುತ್ತದೆ. ಒಂದು ವೇಳೆ ಕೆಮ್ಮಿನ ಸಮಸ್ಯೆ ಉಂಟಾದರೆ 10 ಮಿಲಿ ತುಳಸಿ ಎಲೆಯನ್ನು ಪ್ರತಿದಿನ ಜಗಿದು ತಿನ್ನುವುದರಿಂದ ಕೆಮ್ಮು ಕಡಿಮೆ ಯಾಗುತ್ತದೆ.

ಮೂತ್ರ ಪಿಂಡದ ಸಮಸ್ಯೆಯ ವಿರುದ್ದವೂ ತುಳಸಿ ಹೆಚ್ಚು ಪರಿಣಾಮಕಾರಿ. ತುಳಸಿ ಬೀಜವನ್ನು ಅಕ್ಕಿ ತೊಳೆದ ನೀರಿನಿಂದ ಅರೆದು ನಿಯಮಿತವಾಗಿ ಸೇವಿಸುವುದರಿಂದ ಕಟ್ಟಿಕೊಂಡ ಮೂತ್ರ ಸರಾಗವಾಗಿ ಹೋಗುತ್ತದೆ.

ಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗಿ ಸಣ್ಣ ನೋವು ಕಾಣಿಸಿ ಕೊಂಡರೆ ಪ್ರತಿದಿನ 3 ರಿಂದ 4 ತುಳಸಿ ಎಲೆಗಳನ್ನು ಪ್ರತಿದಿನ ಅಗೆದು ತಿಂದು ಒಂದು ಲೋಟ ನೀರು ಕುಡಿಯಬೇಕು ಇದರಿಂದ ಕಲ್ಲು ನಿಧಾನವಾಗಿ ಕರಗುತ್ತದೆ.

ತುಳಸಿಯಲ್ಲಿ ಕ್ಯಾಂಪಿನ, ಯೂಜೇನೆಲ್ ಹಾಗೂ ಸಿನಿಯಾಲ್ ಅಂಶಗಳಿರುವುದರಿಂದ ಶ್ವಾಸಕೋಶಕ್ಕೆ ಸಂಬಂದಿಸಿದ ಕಾಯಿಲೆಗಳನ್ನು ದೂರ ಮಾಡುತ್ತದೆ.

ತುಳಸಿಯು ಜ್ವರ, ಅಸ್ತಮಾ, ಹೃದಯ ಸಮಸ್ಯೆ, ಮಾನಸಿಕ ಒತ್ತಡ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿಯೂ ಹೆಚ್ಚು ಸಹಕಾರಿಯಾಗಿದೆ. ದೇಹದ ಸುಕ್ಕು ತಡೆಯಲು, ಸರಿಯಾದ ಪ್ರಮಾಣದ ಆಮ್ಲಜನಕವನ್ನು ದೇಹಕ್ಕೆ ಪೂರೈಸಲು. ಉರಿಯೂತ, ಜಾತರದ ಹುಣ್ಣುಗಳು ಹಾಗೂ ರಕ್ತದ ಒತ್ತಡ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.

ನಮ್ಮ ನಿತ್ಯದ ಬದುಕಿಗೆ ಇಷ್ಟೊಂದು ನೆರವಾಗೋ ತುಳಸಿಯನ್ನು ನಿಮ್ಮ ಮನೆಯಲ್ಲಿಯೇ ನೆಡುವುದರಿಂದ ಹೇರಳ ಪ್ರಮಾಣದಲ್ಲಿ ಆಮ್ಲಜನಕವೂ ಲಭ್ಯವಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ದಿನ ತುಳಸಿ ಕಟ್ಟೆಯ ಸುತ್ತ ಸುತ್ತಿದರೆ ನಮ್ಮ ನಿತ್ಯ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಸಂಪ್ರದಾಯ ನಂಬಿಕೆಗಳು ವೈಜ್ಞಾನಿಕವಾಗಿ ಕೂಡ ತಮ್ಮದೇ ಮಹತವ್ವನ್ನು ಪಡೆದಿದೆ. ಇನ್ಯಾಕೆ ತಡ ತುಳಸಿಯನ್ನು ನಿತ್ಯವೂ ಸೇವಿಸಿ ಆರೋಗ್ಯವಂತರಾಗಿ.

Leave A Reply

Your email address will not be published.