BS Yediyurappa Return : ರಾಜಾಹುಲಿ ರಿಟರ್ನ್ಸ್ ಗೆ ಶಾಸಕರ ಕಸರತ್ತು: ಬಿಜೆಪಿಯಲ್ಲಿ ಸಹಿ ಸಂಗ್ರಹ ಅಭಿಯಾನ

ಬೆಂಗಳೂರು : ಬಿಜೆಪಿಗರು ಒಪ್ಪಿಕೊಳ್ಳದೇ ಇದ್ದರೂ ರಾಜ್ಯ ಬಿಜೆಪಿಯ ಪಾಲಿಗೆ ಬಿಎಸ್ವೈ ಮಿನಿ ಮೋದಿಯಿದ್ದಂತೆ ಎಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಇದುವರೆಗೂ ನಡೆದ ರಾಜಕೀಯ ಬೆಳವಣಿಗೆಗಳು, ಸರ್ಕಾರ ರಚನೆಯಲ್ಲಿ ಬಿಎಸ್ವೈ ವಹಿಸಿದ ಪಾತ್ರವೇ ಇದಕ್ಕೆ ಸಾಕ್ಷಿ. ಈಗ ಚುನಾವಣಾ ರಾಜಕೀಯದಿಂದ ಬಿಜೆಪಿಯ ರಾಜಾಹುಲಿ ನಿವೃತ್ತಿ ಘೋಷಿಸಿರೋದು ಹಲವು ಬಿಜೆಪಿ ಶಾಸಕರ ಪಾಲಿಗೆ ಅಸ್ತಿತ್ವವನ್ನೇ ಅಲ್ಲಾಡಿಸುವಂತೆ ಮಾಡಿದ್ದು, ಬಿಎಸ್ವೈ ನಿರ್ಧಾರದಿಂದ ಕಂಗಲಾಗಿರೋ ಶಾಸಕರು ಬಿಎಸ್ವೈ ನಿರ್ಧಾರದ ವಿರುದ್ಧ ಆಂತರಿಕವಾಗಿ ಸಹಿ ಸಂಗ್ರಹಣೆ ಮಾಡಿ ಯಡಿಯೂರಪ್ಪನವರನ್ನು(BS Yediyurappa Return) ಮತ್ತೆ ಚುನಾವಣೆಗೆ ನಿಲ್ಲುವಂತೆ ಮನವೊಲಿಸುವ ಸಿದ್ಧತೆ ನಡೆಸಿದ್ದಾರಂತೆ.

ಹೌದು, ಯಡಿಯೂರಪ್ಪ ನಿವೃತ್ತಿ ಯಿಂದ ಬಿಜೆಪಿ ಹಲವು ಶಾಸಕರಿಗೆ ಭಯ ಶುರುವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಎಸ್ವೈ ಇಲ್ಲದೇ ಗೆಲ್ಲೋದು ಹೇಗೆ ಎಂಬ ಆತಂಕ ಶಾಸಕರನ್ನು ಕಾಡುತ್ತಿದೆಯಂತೆ. ಕಳೆದ ಚುನಾವಣೆ ಯಲ್ಲಿ ಬಿಎಸ್ವೈ ಹೆಸರಲ್ಲಿ ಹಲವು ಶಾಸಕರು ಗೆಲುವು ಸಾಧಿಸಿದ್ದರು. ಅಲ್ಲದೇ ಹಲವು ಕ್ಷೇತ್ರದಲ್ಲಿ ಕೇವಲ ಬಿಎಸ್ವೈ ಪ್ರಚಾರದಿಂದಲೇ ಅಭ್ಯರ್ಥಿಗಳ ಗೆಲುವು ಸಾಧ್ಯವಾಗಿತ್ತು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವು ಶಾಸಕರು ಬಿಎಸ್ವೈ ಕೃಪಾಕಟಾಕ್ಷದಿಂದಲೇ ಗೆದ್ದಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಈಗ ಯಡಿಯೂರಪ್ಪ ನಾಯಕತ್ವ ಇಲ್ಲ.ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೂ ಯಡಿಯೂರಪ್ಪ ಸಿಎಂ ಆಗೋದಿಲ್ಲ ಯಡಿಯೂರಪ್ಪ ರನ್ನು ಪಕ್ಷ ಸೈಡ್ ಲೈನ್ ಮಾಡಿದೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ. ಹೀಗಾಗಿ ಬಿಎಸ್ವೈ ನಿವೃತ್ತಿ ಯಿಂದ ತಮ್ಮ ಶಾಸಕ ಸ್ಥಾನಕ್ಕೆ ಕುತ್ತು ಬರೋದು ಗ್ಯಾರಂಟಿ ಎಂಬ ಆತಂಕದಲ್ಲಿರೋ ಶಾಸಕರು ಶತಾಯ ಗತಾಯ ಬಿಎಸ್ವೈ ತಮ್ಮ ನಿರ್ಧಾರವನ್ನು ಹಿಂಪಡೆಯುವಂತೆ ಮಾಡಲು ಪ್ರಯತ್ನ ಆರಂಭಿಸಿದ್ದಾರಂತೆ. ಯಡಿಯೂರಪ್ಪ ಚುನಾವಣೆಗೆ ನಿಲ್ಲಬೇಕು. ಅವರ ನಾಯಕತ್ವದಲ್ಲೇ ಚುನಾವಣೆ ನಡೆಯಬೇಕು. ಅವರು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೇ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬುದನ್ನು ವರಿಷ್ಠರಿಗೆ ಮನವಿ‌ಮಾಡಲು ಸಹಿ ಸಂಗ್ರಹಣೆಗೆ ನಿರ್ಧರಿಸಿದ್ದಾರಂತೆ.

ಯಡಿಯೂರಪ್ಪ ಇದ್ರೆ ಪಕ್ಷ, ನಾವೆಲ್ಲರೂ. ಹೀಗಾಗಿ ಅವ್ರು ಮರು ಸ್ಪರ್ಧಿಸುವಂತೆ ಆಗ್ರಹಿಸಬೇಕು ಎಂದು ಶಾಸಕರೇ ಕೆಲ ಶಾಸಕರನ್ನು ಮನವೊಲಿಸುತ್ತಿದ್ದು, ಎಲ್ಲರೂ ಸೇರಿ ಸಹಿ ಸಂಗ್ರಹಿಸಿ ಸ್ವತಃ ಬಿಎಸ್ವೈ ಅವರನ್ನು ಹಾಗೂ ಹೈಕಮಾಂಡ್ ನ್ನು ಕನ್ವಿನ್ಸ್ ಮಾಡಲು ಸಜ್ಜಾಗಿದ್ದಾರಂತೆ. ರಾಜ್ಯದಲ್ಲಿ ಬಿಎಸ್ವೈ ಬಿಜೆಪಿಯಿಂದ ಹೊರಬಂದಾಗ ಹಾಗೂ ಬಿಎಸ್ವೈ ಬಿಟ್ಟು ಪಕ್ಷ ಚುನಾವಣೆಗೆ ಹೋದಾಗಲೆಲ್ಲ ಪಕ್ಷಕ್ಕೆ ಸೋಲಾಗಿದೆ. ಸ್ಥಾನಗಳು ಅತ್ಯಂತ ಕಡಿಮೆ ಸಂಖ್ಯೆಗೆ ಕುಸಿದಿವೆ.ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿರುವ ಹೊತ್ತಿನಲ್ಲಿ ಬಿಎಸ್ವೈ ರನ್ನು ಸಕ್ರಿಯ ಹಾಗೂ ಚುನಾವಣಾ ರಾಜಕೀಯದಿಂದ ದೂರ ಉಳಿಯಲು ಬಿಟ್ಟರೇ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ ಅನ್ನೋದನ್ನು ವರಿಷ್ಠರಿಗೆ ಮನವರಿಕೆ ಮಾಡಿಸಲು ಬಿಎಸ್ವೈ ಆಪ್ತ ಶಾಸಕರು ಮುಂದಾಗಿದ್ದು ಈ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್ ಆಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : monkey pox cases : ಏನಿದು ಮಂಕಿ ಪಾಕ್ಸ್​ ಸೋಂಕು, ಲಕ್ಷಣಗಳೇನು, ಮುಂಜಾಗ್ರತಾ ಕ್ರಮ ಹೇಗಿರಬೇಕು : ಇಲ್ಲಿದೆ ಮಾಹಿತಿ

ಇದನ್ನೂ ಓದಿ : karnataka cet : ಜುಲೈ 30ರಂದು ಸಿಇಟಿ ಫಲಿತಾಂಶ ಪ್ರಕಟ : ಸಚಿವ ಡಾ.ಸಿ.ಎನ್​ ಅಶ್ವತ್ಥ ನಾರಾಯಣ ಮಾಹಿತಿ

BS Yediyurappa Return, Signature collection campaign in BJP

Comments are closed.