CM Basavaraj Bommai :ಮಾಜಿ ಪ್ರಧಾನಿ ದೇವೇಗೌಡ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಬೆಂಗಳೂರು : CM Basavaraj Bommai : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಸದ್ಯ ಅವರು ವಿಶ್ರಾಂತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಪದ್ಮನಾಭನಗರದಲ್ಲಿರುವ ಹೆಚ್​ಡಿ ದೇವೇಗೌಡ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವರಾದ ಆರ್​.ಅಶೋಕ್​, ಬೈರತಿ ಬಸವರಾಜು, ಮುನಿರತ್ನ, ಕೆ.ಗೋಪಾಲಯ್ಯ, ಮಾಧುಸ್ವಾಮಿ ಹಾಗೂ ಆನಂದ್​ ಸಿಂಗ್​ ಸಾಥ್​ ನೀಡಿದರು.

ರಾಜ್ಯದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವೇ ಕೆಲವು ಹಿರಿಯ ಸಚಿವರ ಜೊತೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದೇವೇಗೌಡರನ್ನು ಭೇಟಿಯಾಗಿ ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ದೇವೇಗೌಡರನ್ನು ಭೇಟಿಯಾಗಿ ಅವರಿಗೆ ಪುಷ್ಪಗುಚ್ಛ ನೀಡಿದ ಬಸವರಾಜ ಬೊಮ್ಮಾಯಿ ಬಳಿಕ ಅವರ ಕೈ ಹಿಡಿದುಕೊಂಡೇ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.


ಮಂಡಿ ಸಮಸ್ಯೆಯಿಂದ ಬಳಲುತ್ತಿರುವ ಹೆಚ್​.ಡಿ ದೇವೇಗೌಡ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದೇವೇಗೌಡರ ಬಳಿಯಲ್ಲಿ ಅವರ ಮಂಡಿ ಆರೋಗ್ಯದ ಬಗ್ಗೆ ಸಿಎಂ ವಿಚಾರಿಸಿದ್ರು. ಇದಕ್ಕೆ ಉತ್ತರಿಸಿದ ಹೆಚ್​ಡಿ ದೇವೇಗೌಡ ಕಾಲು ನೋವು ಹಾಗೂ ಮಂಡಿ ನೋವು ಇನ್ನೂ ಹಾಗೇ ಇದೆ ಎಂದು ಹೇಳಿದ್ದಾರೆ. ತಮ್ಮ ನಿವಾಸಕ್ಕೆ ಬಂದ ಎಲ್ಲಾ ನಾಯಕರಿಗೆ ಊಟ ಮಾಡಿ ಹೋಗುವಂತೆ ದೇವೇಗೌಡ ಮನವಿ ಕೂಡ ಮಾಡಿದ್ದಾರೆ.
ದೇವೇಗೌಡರ ಆರೋಗ್ಯ ಹದಗೆಟ್ಟ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಮಂಗಳವಾರದಂದು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ರು. ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿದ್ದರು.

ಇದನ್ನು ಓದಿ : drugs at Gobhi Manchurian shop :ನಡೆಸುತ್ತಿದ್ದುದು ಗೋಭಿ ಅಂಗಡಿ, ಮಾರಾಟವಾಗಿದ್ದು ಡ್ರಗ್ಸ್​ : ಕೊನೆಗೂ ಖಾಕಿ ಬಲೆಗೆ ಬಿದ್ದ ಐನಾತಿ

ಇದನ್ನೂ ಓದಿ : SIIMA Award 2022:ಸೈಮಾ ಪಾರ್ಟಿ ವಿರುದ್ದ ದೂರು : ವೈರಲ್‌ ಆಯ್ತು ಸೆಲೆಬ್ರಿಟಿಗಳ ಮೋಜು ಮಸ್ತಿ

CM Basavaraj Bommai visits former Prime Minister HD devegowda to wish him good health

Comments are closed.