Chemical free hair :ರಾಸಾಯನಿಕ ಮುಕ್ತ ಕೂದಲು ಬೇಕಾದ್ರೆ ಈ ಟಿಫ್ಸ್‌ ಫಾಲೋ ಮಾಡಿ

Chemical free hair : ರಾಸಾಯನಿಕ ವಸ್ತುಗಳಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಏನನ್ನೇ ಖರೀದಿಸಿದ್ರೂ ನೈಸರ್ಗಿಕವಾಗಿ ಇರಬೇಕು ಎಂದು ಬಯಸುತ್ತಾರೆ. ಕೆಲವರಂತೂ ದುಬಾರಿ ಹಣ ವ್ಯಯಿಸಿ ಸೌಂದರ್ಯ ವರ್ಧಕಗಳ ಖರೀದಿ ಮಾಡ್ತಾರೆ. ನಿಮಗೇನಾದ್ರೂ ರಾಸಾಯನಿಕ ಮುಕ್ತ ಕೂದಲು ಬೇಕು ಅಂತಾ ಅನಿಸಿದ್ರೆ ನಾವು ಹೇಳೋ ಟಿಫ್ಸ್‌ ಫಾಲೋ ಮಾಡಿ.

ಬೇಕಾಗುವ ಸಾಮಾಗ್ರಿಗಳು

ಕೊಬ್ಬರಿ ಎಣ್ಣೆ
ದಾಸವಾಳದ ಎಲೆ
ದಾಸವಾಳದ ಹೂವು
ಮೆಂತೆ
ಕರಬೆವು

ಮಾಡುವ ವಿಧಾನ:
ಕೊಬ್ಬರಿ ಎಣ್ಣೆಯ ಜೊತೆಗೆ ದಾಸವಾಳದ ಎಲೆ, ದಾಸವಾಳದ ಹೂವು, ಮೆಂತ್ಯ, ಕರಿಬೇವು ಹಾಕಿ ಚೆನ್ನಾಗಿ ಕುದಿಸಬೇಕು. ಬಿಸಿ ಆರಿದ ನಂತರದಲ್ಲಿ ಒಂದು ಬಾಟಲ್‌ನಲ್ಲಿ ಶೇಖಕರಿಸಿ ಇಡಬೇಕು. ಈ ಎಣ್ಣೆಯನ್ನು ಹಾಗೆ ತಲೆಗೆ ಹಚ್ಚಬಹುದು ಇಲ್ಲವಾದಲ್ಲಿ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿಯೂ ಹಚ್ಚಬಹುದು. ಹರಳೆಣ್ಣೆಯನ್ನು ತಲೆಗೆ ಹಚ್ಚುವವರು ಕೂಡ ಇದಕ್ಕೆ ಮಿಶ್ರಣ ಮಾಡಿ ಹಚ್ಚಬಹುದು.

ಹೀಗೆ ಮಾಡುವುದರಿಂದ ಕೂದಲು ಕಪ್ಪಾಗುವುದರ ಜೊತೆಗೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಇನ್ನು ಡ್ಯಾಡ್ರಫ್‌ ಅನ್ನು ಕೂಡ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಕೂದಲನ್ನು ಇನ್ನಷ್ಟು ಕಾಂತಿಯುತವನ್ನಾಗಿ ಮಾಡುತ್ತದೆ.

ಇದನ್ನೂ ಓದಿ:ನಿಮ್ಮ ಕೂದಲ ರಕ್ಷಣೆಗೆ ಮಹಾಭೃಂಗರಾಜ್ ಎಣ್ಣೆ; ಈ ಎಣ್ಣೆಯ ಪ್ರಯೋಜನಗಳೇನು ಗೊತ್ತಾ !

ಇದನ್ನೂ ಓದಿ:ಶ್ರೀಗಂಧ ಬಳಸಿ ಚರ್ಮದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ

ಇದನ್ನೂ ಓದಿ:ನೈಟ್ ಕ್ರೀಮ್ ನಿಮ್ಮ ಚರ್ಮಕ್ಕೆ ಏಕೆ ಮುಖ್ಯ ಗೊತ್ತಾ !

ಮೆಂತ್ಯ ಫೇಸ್ಟ್‌
ಇನ್ನು ಮೆಂತ್ಯ ಕೂಡ ತಲೆಕೂದಿನ ಸೌಂದರ್ಯಕ್ಕೆ ಹೆಚ್ಚು ಸಹಕಾರಿ. ಅದ್ರಲ್ಲೂ ಮೆಂತ್ಯ ಫೇಸ್ಟ್‌ ಮಾಡಿಕೊಂಡು ತಲೆ ಕೂದಲಿನ ರೂಟ್‌ಗೆ ಹಚ್ಚಿ ಅರ್ಧ ಗಂಟೆ ಬಿಡಬೇಕು. ನಂತರ ಸ್ಥಾನ ಮಾಡುವುದರಿಂದ ತಲೆ ಕೂದಲಿನ ಡ್ಯಾಂಡ್ರಫ್‌ ಕಡಿಮೆಯಾಗುತ್ತದೆ.

ಆಲವೇರಾ
ಇನ್ನು ಸುಲಭವಾಗಿ ಸಿಗುವ ಅಲವೇರಾವನ್ನು ಕೂಡ ಸೌಂದರ್ಯ ವರ್ಧಕವಾಗಿ ಬಳಕೆ ಮಾಡಬಹುದು. ಅಲವೇರಾದ ಸಿಪ್ಪೆ ತೆಗೆದು ಅದರ ಒಳಗಿರುವ ಲೋಳೆಯನ್ನು ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರದ ಅದನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ನಂತರದಲ್ಲಿ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿದ ದಾಸವಾಳದ ಎಲೆಯ ಪುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಈ ಫೇಸ್ಟ್‌ ಅನ್ನೂ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿದ್ರೆ ಕೂದಲ ನೈಸ್‌ ಆಗುತ್ತದೆ. ಜೊತೆಗೆ ಹೆಚ್ಚು ಹೊಳಪಿನಿಂದ ಕೂಡಿರುತ್ತದೆ.

Follow these tips if you want chemical free hair

Comments are closed.