CM Basavaraja Bommai : ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿಎಂ ಬೊಮ್ಮಾಯಿಗೆ ಹೆಚ್ಚಿದ ತವರು ಪ್ರೇಮ : ಹಾವೇರಿ ಜಿಲ್ಲೆಗೆ ಸಾಲು ಸಾಲು ಅನುದಾನ

ಹಾವೇರಿ :Basavaraja Bommai Haveri district : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗಾಗಿ ವಿವಿಧ ರಾಜಕೀಯ ಪಕ್ಷಗಳು ಒಂದಿಲ್ಲೊಂದು ಸರ್ಕಸ್​ ಮಾಡುತ್ತಲೇ ಇವೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ತಮ್ಮ ತವರು ಜಿಲ್ಲೆಗೆ ಹೆಚ್ಚೆಚ್ಚು ಭೇಟಿ ನೀಡ್ತಿದ್ದಾರೆ. ತವರು ಜಿಲ್ಲೆಯಲ್ಲಿ ಫುಲ್​ ಆ್ಯಕ್ಟಿವ್​ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಕೂಡ ಹಾವೇರಿ ಭೇಟಿ ನೀಡ್ತಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಬಳಿಕ ಸ್ವಂತ ಕ್ಷೇತ್ರ ಹಾಗೂ ಜಿಲ್ಲೆಯ ಕಡೆಗೆ ಹೆಚ್ಚು ಗಮನಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಇದೀಗ ತಮ್ಮ ತವರು ಜಿಲ್ಲೆಗಾಗಿ ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ. ನೂರಾರು ಕೋಟಿ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡ್ತಿದ್ದಾರೆ .ಇಂದು ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಇಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಹೆಲಿಕಾಪ್ಟರ್​ ಮೂಲಕ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿ ಹೆಲಿಪ್ಯಾಡ್​ಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ, ಕ್ಷೇತ್ರದ 51.90 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಲಿದ್ದಾರೆ. ರಸ್ತೆ ಕಾಮಗಾರಿ ಸೇರಿದಂತೆ ಒಟ್ಟು 9 ಕಾಮಗಾರಿಗಳಿಗೆ ಇಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚಾಲನೆ ಸಿಗಲಿದೆ.

ಕಳೆದ ಮೂರು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾವಿ – ಸವಣೂರು ಹಾಗೂ ಹಾವೇರಿಯಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆಂದು ಆಗಮಿಸಿದ್ದರು. ಈ ವೇಳೆಯಲ್ಲಿ ಅವರು 3 ಕೋಟಿ 50 ಲಕ್ಷ ರೂಪಾಯಿ ಮೌಲ್ಯದ ನೂತನ ಕೋರ್ಟ್​ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಹಾವೇರಿ ಜಿಲ್ಲೆಯಲ್ಲಿ ಆರು ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಸಿಎಂ ಬೊಮ್ಮಾಯಿದ್ದಾಗಿದೆ. ಹಾಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಗುರಿ ಹೊಂದಿರುವ ಸಿಎಂ ಬೊಮ್ಮಾಯಿ ಹಾವೇರಿ ಜಿಲ್ಲೆಗೆ ಮೇಲಿಂದ ಮೇಲೆ ಅನುದಾನ ಹಾಗೂ ಜನಪರ ಕಾರ್ಯಕ್ರಮಗಳನ್ನು ನೀಡ್ತಿದ್ದಾರೆ.

ಇದನ್ನು ಓದಿ : Heavy Rainfall alert: ಮುಂದಿನ 3 ದಿನ ಭಾರಿ ಮಳೆ ಎಚ್ಚರಿಕೆ: ಶಾಲೆಗಳಿಗೆ ರಜೆ

ಇದನ್ನೂ ಓದಿ : AAP Govt in Delhi Under Threat : ಪತನದ ಭೀತಿಯಲ್ಲಿ ದೆಹಲಿಯ ಆಪ್​ ಸರ್ಕಾರ : ಸಂಪರ್ಕಕ್ಕೆ ಸಿಗದ ಶಾಸಕರು

CM Basavaraja Bommai is arriving in Haveri district

Comments are closed.