Hardik Pandya Car Collection : ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್ ನೋಡಿದ್ರೆ ನಿಮ್ಗೆ ಅಚ್ಚರಿಯಾಗತ್ತೆ

ಬೆಂಗಳೂರು: (Hardik Pandya Car Collection) ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ವೃತ್ತಿಜೀವನದಲ್ಲಿ ಅಮೋಘ ಫಾರ್ಮ್’ನಲ್ಲಿದ್ದಾರೆ. ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಂತರ ಪಾಂಡ್ಯ ಅದೃಷ್ಟವೇ ಬದಲಾಗಿದೆ ಹೋಗಿದೆ. ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ ನಂತರ ಅದ್ಭುತ ಆಟ ಪ್ರದರ್ಶಿಸುತ್ತಿರುವ ಹಾರ್ದಿಕ್ ಪಾಂಡ್ಯ, 3 ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ಆ ಮೂರೂ ಪಂದ್ಯಗಳಲ್ಲಿ ಭಾರತ ಗೆದ್ದಿದ್ದು, ನಾಯಕತ್ವದಲ್ಲೂ ಪಾಂಡ್ಯ ಗಮನ ಸೆಳೆಯುತ್ತಿದ್ದಾರೆ.

28 ವರ್ಷದ ಹಾರ್ದಿಕ್ ಪಾಂಡ್ಯಗೆ ದುಬಾರಿ ಬೆಲೆಬಾಳುವ ಐಷಾರಾಮಿಗಳ ಕಾರುಗಳ ಕ್ರೇಜ್ ಇದೆ. ಪಾಂಡ್ಯ ಬಳಿ ಒಟ್ಟು ಆರು ಐಷಾರಾಮಿ ಕಾರುಗಳಿವೆ. ಹಾರ್ದಿಕ್ ಪಾಂಡ್ಯ ಆಡಿ, ಲ್ಯಾಂಬೊರ್ಗಿನಿ, ರೇಂಜ್ ರೋವರ್, ಜೀಪ್, ಮರ್ಸಿಡಿಸ್ ಮತ್ತು ರೋಲ್ಸ್ ರಾಯ್ಸ್ ಕಾರುಗಳ ಮಾಲೀಕ. ಐಪಿಎಲ್’ನಲ್ಲಿ ಕೋಟಿವೀರನಾದ ನಂತರ 2018ರಿಂದ ಪಾಂಡ್ಯ ದುಬಾರಿ ಕಾರುಗಳನ್ನು ಖರೀದಿಸುತ್ತಾ ಬಂದಿದ್ದಾರೆ.

ಹಾರ್ದಿಕ್ ಪಾಂಡ್ಯ ಕಾರು ಕಲೆಕ್ಷನ್:
ಆಡಿ A6 (Audi A6); ಬೆಲೆ: ₹60 ಲಕ್ಷ (ಬಿಳಿ ಬಣ್ಣ)
ಲ್ಯಾಂಬೊರ್ಗಿನಿ ಹ್ಯುರಕಾನ್ ಎವಿಒ (Lamborghini Huracan EVO); ಬೆಲೆ: ₹4 ಕೋಟಿ (ಕೇಸರಿ ಬಣ್ಣ)
ರೇಂಜ್ ರೋವರ್ ವೋಗ್ (Range Rover Vogue); ಬೆಲೆ: ₹2.11 ಕೋಟಿ (ಬಿಳಿ ಬಣ್ಣ)
ಜೀಪ್ ಕಂಪಾಸ್ (Jeep Compass); ಬೆಲೆ: ₹17 ಲಕ್ಷ (ಕೆಂಪು ಬಣ್ಣ)
ಮರ್ಸಿಡಿಸ್ ಜಿ-ವಾಗನ್ (Mercedes G-wagon): ಬೆಲೆ: ₹2.42 ಕೋಟಿ (ಸಿಲ್ವರ್ ಮೆಟಾಲಿಕ್ ಬಣ್ಣ)
ರೋಲ್ಸ್ ರಾಯ್ಸ್ (Rolls Royce); ಬೆಲೆ: ₹6.22 ಕೋಟಿ (ಸಿಲ್ವರ್-ಬ್ಲಾಕ್)

ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಏಷ್ಯಾ ಕಪ್ ಟೂರ್ನಿಗಾಗಿ ಭಾರತ ತಂಡದ ಜೊತೆ ದುಬೈನಲ್ಲಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಿ ಶನಿವಾರ ಆರಂಭವಾಗಲಿದ್ದು, ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ದುಬೈನಲ್ಲಿ ಅಭ್ಯಾಸ ಆರಂಭಿಸಿವೆ.

ಇದನ್ನೂ ಓದಿ : VVS Laxman Head Coach: ಏಷ್ಯಾ ಕಪ್ 2022: ದ್ರಾವಿಡ್‌ಗೆ ಕೋವಿಡ್; ಭಾರತ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್

ಇದನ್ನೂ ಓದಿ : Virat Kohli Babar Azam : ಏಷ್ಯಾ ಕಪ್ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ನಾಯಕನನ್ನು ಭೇಟಿ ಮಾಡಿದ ವಿರಾಟ್ ಕೊಹ್ಲಿ

Team india Allrounder Hardik Pandya Car Collection

Comments are closed.