CM Bommai announcement: ವಿಕಲಚೇತನ ಮಕ್ಕಳಿಗೆ ವಿಶೇಷ ಯೋಜನೆ : ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ

ಬೆಂಗಳೂರು: (CM Bommai announcement) ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆತ್ಮವಿಶ್ವಾಸ ನೀಡಿದರೆ ಅವರು ಆರೋಗ್ಯವಂತರಾಗಲು ಸಾಧ್ಯ. ದೈಹಿಕವಾಗಿ ಸಮರ್ಥರಿರುವ ಮಕ್ಕಳನ್ನು ನೋಡಿಕೊಳ್ಳುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಅಂಗವೈಕಲ್ಯ ಹೊಂದಿರುವ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವೇ. ಅವರ ಆರೋಗ್ಯ, ಮೀಸಲಾತಿ, ವಿದ್ಯಾಭ್ಯಾಸ ಇವೆಲ್ಲವು ಹೆತ್ತವರಿಗೆ ಒಂದು ರೀತಿಯ ಸವಾಲಿದ್ದಂತೆ. ಈ ರೀತಿಯ ಸೌಕರ್ಯಗಳಿಂದ ಹಲವು ಅಂಗವಿಕಲ ಮಕ್ಕಳು ವಂಚಿತರಾಗಿದ್ದಾರೆ ಕೂಡ.

ಇಂದು ಸಿಎಂ ಬೊಮ್ಮಾಯಿ (CM Bommai announcement) ಅವರ ನೇತ್ರತ್ವದಲ್ಲಿ ಅಂಗವಿಕಲ ದಿನಾಚರಣೆಯ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಕೆಲವು ಸೌಲಭ್ಯಗಳಿಂದ ವಂಚಿತರಾಗಿರುವ ಅಂಗವಿಕಲ ಮಕ್ಕಳಿಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದು, ಆರೋಗ್ಯ ವಿಮೆ, ಮನೆಗಳಲ್ಲಿ ಮೀಸಲಾತಿ, ಟ್ರೈ ಸೈಕಲ್‌ ಈ ರೀತಿಯ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಅಂಗವಿಕಲ ಮಕ್ಕಳು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದು, ಅವರಿಗೆ ವಿಶೇಷ ರೀತಿಯಲ್ಲಿ ಐದು ಲಕ್ಷ ರೂ. ಆರೋಗ್ಯ ವಿಮೆಯನ್ನು ನೀಡುವುದಾಗಿ, ಅಲ್ಲದೇ ಸರಕಾರ ನೀಡುವ ವಸತಿ ಸೌಲಭ್ಯಗಳ ಮನೆಗಳಲ್ಲಿ ಅಂಗವಿಕಲ ಮಕ್ಕಳಿಗೆ ಶೇಕಡ ಮೂರರಷ್ಟು ಮೀಸಲಾತಿ ಕಡ್ಡಾಯವಾಗಿರುತ್ತದೆ ಎಂದು ಬೊಮ್ಮಾಯಿ ಅವರು ತಿಳಿಸಿದ್ದಾರೆ. ಹಲವು ಕಡೆಗಳಲ್ಲಿ ಅಂಗವಿಕಲ ಮಕ್ಕಳಿಗಾಗಿ ವಿಶೇಷವಾದ ತರಬೇತಿ ಕೇಂದ್ರಗಳನ್ನು ಕೂಡ ತೆರೆಯುವುದಾಗಿ ಘೋಷಣೆಯನ್ನು ಮಾಡಿದ್ದಾರೆ.

ಅಂಗವಿಕಲ ಮಕ್ಕಳು ಓಡಾಡಲು ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕು. ಇನ್ನೊಬ್ಬರ ಮೇಲೆ ಅವಲಂಬಿತರಾಗದೇ ಹೊರಗಡೆ ಓಡಾಡಬೇಕೆಂದರೆ ಅವರಿಗೆ ಟ್ರೈ ಸೈಕಲ್‌ ನ ಅಗತ್ಯತೆ ಇರುತ್ತದೆ. ಕೆಲವು ಕುಟುಂಬಗಳಲ್ಲಿ ಅಂಗವಿಕಲ ಮಕ್ಕಳಿಗೆ ಟ್ರೈ ಸೈಕಲ್‌ ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಬಡ ಕುಟುಂಬದಲ್ಲಿರುವ ಅಂಗವಿಕಲರಿಗೆ ಎರಡು ಸಾವಿರ ಟ್ರೈ ಸೈಕಲ್‌ ನೀಡಲು ಕ್ರಮ ಕೈಗೊಂಡಿದ್ದಾರೆ. ಎರಡು ಸಾವಿರ ಟ್ರೈ ಸೈಕಲ್‌ ನೀಡಲು ಇಪ್ಪತ್ತೆಂಟು ಕೋಟಿ ರೂ ಬಿಡುಗಡೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಅವರು ಅಂಗವಿಕಲ ದಿನಾಚರಣೆಯಲ್ಲಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : High Court Notice: ಕೆಜಿಎಫ್- 2 ಹಾಡನ್ನು ತೆಗೆಯದೆ ನ್ಯಾಯಾಂಗ ನಿಂದನೆ; ಕರ್ನಾಟಕ ಹೈಕೋರ್ಟ್ ನಿಂದ ರಾಹುಲ್ ಗಾಂಧಿಗೆ ನೋಟಿಸ್

ಇದನ್ನೂ ಓದಿ : Siddaramayya hospitalised: ಶಸ್ತ್ರಚಿಕಿತ್ಸೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

(CM Bommai announcement) Children with special needs can be healthy if they are given confidence. In these days when it is difficult to take care of physically able children, it is difficult to take care of children with disabilities. Their health, reservation, education are all a kind of challenge for their parents. Even many disabled children are deprived of these facilities.

Comments are closed.