Kantara Varaha Roopam Song : ವರಾಹ ರೂಪಂ ಹಾಡಿನ‌ ವಿವಾದಕ್ಕೆ ತೆರೆ : ಕೇಸ್ ಗೆದ್ದ ಕಾಂತಾರ ತಂಡ

ಕನ್ನಡದ ” ಕಾಂತಾರ” ಸಿನಿಮಾದ “ವರಾಹ ರೂಪಂ” (Kantara Varaha Roopam Song) ಹಾಡಿನ ವಿವಾದಕ್ಕೆ ಜಯ ಸಿಕ್ಕಿದೆ. ಕಾಂತಾರ ಸಿನಿಮಾ ಈ ವರ್ಷ ಸಿನಿಮಂದಿರಗಳಲ್ಲಿ ಹಾಗೂ ಹೊರಗೆ ಸಾಕಷ್ಟು ಸದ್ದು ಮಾಡಿದೆ. ಈ ಸಿನಿಮಾ ಕೋಟ್ಯಂತರ ರೂಪಾಯಿ ಗಳಿಕೆ ಮಾಡುವುದರ ಜೊತೆಗೆ ಸಾಕಷ್ಟು ವಿವಾದಕ್ಕೂ ಗುರಿಯಾಗಿದೆ. ಈ ಸಿನಿಮಾದ ಪಾತ್ರದಷ್ಟೇ ಈ ಸಿನಿಮಾದ ಹಾಡುಗಳು ಸಖತ್‌ ಹಿಟ್‌ ಆಗಿತ್ತು.

ಆದರೆ ಈ ಸಿನಿಮಾದ ಉಸಿರು ಎಂದೇ ಹೇಳಬಹುದಾದ ವರಾಹ ರೂಪಂ ಹಾಡನ್ನು ನವರಸಮಂ ಆಲ್ಬಂ ಹಾಡಿನ ಟ್ಯೂನ್‌ನ್ನು ಕದ್ದು ಮಾಡಲಾಗಿದೆ ಎಂದು ಥೈಕ್ಕುಡಂ ಬ್ರಿಡ್ಜ್‌ ಹಾಗೂ ಮಾತೃಭೂಮಿ ಕಪ್ಪಾ ಟಿವಿಯವರು ಆರೋಪಿಸಿ ಕೇರಳ ಸ್ಥಳೀಯ ನ್ಯಾಯಲಯಗಳಲ್ಲಿ ದೂರನ್ನು ದಾಖಲಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾತಂಡ ಈಗ ಕೇಸ್‌ ಗೆಲುವುವನ್ನು ಸಾಧಿಸಿದೆ.

ನಿನ್ನೆಯಷ್ಟೇ ಹೊಂಬಾಳೆ ಫಿಲ್ಮ್ಸ್‌ , ರಿಷಬ್‌ ಶೆಟ್ಟಿ, ಪೃಥ್ವಿರಾಜ್‌ ಫಿಲ್ಮ್ಸ್‌, ಅಮೆಜಾನ್‌ ಸೆಲ್ಲರ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌, ಗೂಗಲ್‌ ಇಂಡಿಯಾ ಹೆಡ್‌ ಆಫೀಸ್‌, ಪೃಥ್ವಿರಾಜ್‌ ಸುಕುಮಾರನ್‌ ಸೇರಿದಂತೆ ಇತರರಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ವರಾಹ ರೂಪಂ ಹಾಡಿನ ಬಳಕೆಗೆ ಕೇರಳದ ಕೋಝಿಕ್ಕೋಡ್‌ ತಡೆಯಾಜ್ಞೆ ತೆರವು ಮಾಡಿದ ಬೆನ್ನಲ್ಲೇ ನಟ ರಿಷಬ್‌ ಶೆಟ್ಟಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ದೇವಾನು ದೈವಗಳ ಆರ್ಶಿವಾದ ಹಾಗೂ ಜನರ ಅಭಿಮಾನದಿಂದ ವರಾಹ ರೂಪಂ ಕೇಸ್‌ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶ್ರೀಘ್ರದಲ್ಲಿ ಓಟಿಟಿನಲ್ಲಿ ಹಾಡು ಬದಲಾಯಿಸಲಿದ್ದೇವೆ ಎಂದು ರಿಷಬ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

ಹೌದು ಕೇರಳ ಸ್ಥಳೀಯ ನ್ಯಾಯಾಲಯ ಹೊಂಬಾಳೆ ಫಿಲ್ಮ್ಸ್‌ ಎಲ್ಲಿಯೂ ಸಹ ವರಾಹ ರೂಪಂ ಹಾಡನ್ನು ಬಳಸುವಂತಿಲ್ಲ ಎಂದು ತೀರ್ಪನ್ನು ನೀಡಿದೆ. ಹೀಗಾಗಿ ಕಾಪಿರೈಟ್‌ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್‌ ಯುಟ್ಯೂಬ್‌ ಚಾನಲ್‌ ಸೇರಿದಂತೆ ವಿವಿಧ ಮ್ಯೂಸಿಕ್‌ ಅಪ್ಲಿಕೇಶನ್‌ಗಳಿಂದ ವರಾಹ ರೂಪಂ ಹಾಡನ್ನು ತೆಗೆದು ಹಾಕಲಾಗಿತ್ತು. ಕಾಂತಾರ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದು, ಅದರಲ್ಲಿ ಸಹ ವರಾಹ ರೂಪಂ ಹಾಡಿನ ಟ್ಯೂನ್‌ನ್ನು ಸಂಪೂರ್ಣವಾಗಿ ಬದಲಿಸಲಾಗಿತ್ತು.

ಇದನ್ನೂ ಓದಿ : Kantara Rishabh Shetty: ಸಿದ್ದಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಕಾಂತಾರ ಹೀರೋ ರಿಷಬ್‌ ಶೆಟ್ಟಿ

ಇದನ್ನೂ ಓದಿ : Ayra Yash : ಐರಾ ಯಶ್‌ಗೆ 4ನೇ ವರ್ಷದ ಹುಟ್ಟುಹಬ್ಬ : ಐರಾಗೆ ಸ್ಪೆಷಲ್ ವಿಶ್ ಮಾಡಿದ ಅಮ್ಮ ರಾಧಿಕಾ ಪಂಡಿತ್

ಇದನ್ನೂ ಓದಿ : Zubin Nautiyal Injured:ಮೆಟ್ಟಿಲಿನಿಂದ ಬಿದ್ದ ಬಾಲಿವುಡ್ ಖ್ಯಾತ ಗಾಯಕ ಜುಬಿನ್‌ ನೌಟಿಯಾಲ್‌ ಆಸ್ಪತ್ರೆಗೆ ದಾಖಲು

ಹೀಗಾಗಿ ಮೂಲ ಹಾಡನ್ನು ಇನ್ನೂ ಕೇಳಲು ಸಾಧ್ಯವಿಲ್ಲ ಎಂಬ ಬೇಸರ ಪ್ರೇಕ್ಷಕರಿಗೆ ಮೂಡಿತ್ತು. ಅದಕ್ಕಾಗಿ ಅಭಿಮಾನಿಗಳು ಹಿಡಿ ಶಾಪವನ್ನೂ ಕೂಡ ಹಾಕಿದ್ದಾರೆ. ಆದರೆ ಇದೀಗ ಎಲ್ಲಾ ಕಡೆ ತೆಗೆಯಲ್ಪಟ್ಟಿದ್ದ ವರಾಹ ರೂಪಂ ಹಾಡು ಮತ್ತೆ ಬರುತ್ತಿದ್ದು, ಇಷ್ಟು ದಿನ ಹಾಡನ್ನು ಕೇಳಲು ಮಿಸ್‌ ಮಾಡಿಕೊಂಡವರು ಹಾಡನ್ನು ಮತ್ತೆ ಕೇಳಿ ಆನಂದಸಬಹುದಾಗಿದೆ.

Kantara Varaha Roopam Song: Controversy over Varaha Roopam song: Kantara team won the case

Comments are closed.