Congress 5 Guarantee: 5 ಗ್ಯಾರಂಟಿ ಯೋಜನೆ ಜಾರಿ, ಆದಾಯಕ್ಕಾಗಿ ಕಾಂಗ್ರೆಸ್‌ ಹುಡುಕಾಟ

ಬೆಂಗಳೂರು : Congress 5 Guarantee : ಕರ್ನಾಟಕದಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲೇ ಬೇಕು ಅನ್ನೋ ಕಾರಣಕ್ಕೆ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿ ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇದೀಗ ಗ್ಯಾರಂಟಿ ಯೋಜನೆ ಜಾರಿಗೆ ಹಣದ ಕೊರತೆ ಎದುರಾಗಿದ್ದು, ಗ್ಯಾರಂಟಿ ಜಾರಿ ಮುಂದೂಡಿಕೆಯಾಗುತ್ತಲೇ ಇದೆ. ಸದ್ಯ ಕಾಂಗ್ರೆಸ್‌ ಪಕ್ಷ ಐದು ಗ್ಯಾರಂಟಿ ಜಾರಿಗೆ ತರಲು ಆದಾಯಕ್ಕಾಗಿ ಹುಡುಕಾಟ ಆರಂಭಿಸಿದೆ.

ಚುನಾವಣಾ ಪ್ರನಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದೆ. ರಾಜ್ಯದಲ್ಲಿನ ಪ್ರತೀ ಕುಟುಂಬಗಳಿಗೆ 200 ಕೋಟಿ ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಅಲ್ಲದೇ ಬಿಪಿಎಲ್‌ ಪ್ರತೀ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಣೆ, ನಿರುದ್ಯೋಗಿ ಪರವೀಧರರಿಗೆ ಪ್ರತೀ ತಿಂಗಳು 3 ಸಾವಿರ ರೂಪಾಯಿ ಸಹಾಯಧನ ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ಸಹಾಯಧನ. ಮಹಿಳೆಯರಿಗೆ ಸರಕಾರಿ ಬಸ್ಸುಗಳನ್ನು ಉಚಿತ ಪ್ರಯಾಣ. ಮೀನುಗಾರರಿಗೆ ಪ್ರತೀ ವರ್ಷ 500 ಲೀಟರ್‌ ತೆರಿಗೆ ಮುಕ್ತ ಡಿಸೇಲ್‌ ವಿತರಣೆ. ಸಮುದ್ರ ಮೀನುಗಾರಿಕೆ ರಜೆಯ ಅವಧಿಯಲ್ಲಿ ಪ್ರತೀ ಮೀನುಗಾರರಿಗೆ 6 ಸಾವಿರ ರೂಪಾಯಿ ಸಹಾಯಧನದ ಜೊತೆಗೆ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತೀ ಕೆಜಿ ಸಗಣಿಯನ್ನು 3 ರೂಪಾಯಿಗೆ ಖರೀದಿ ಮಾಡುವ ಘೋಷಣೆಯನ್ನು ಕಾಂಗ್ರೆಸ್‌ ಸರಕಾರ ಮಾಡಿತ್ತು.

ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಘೋಷಣೆ ಮಾಡಿರುವ ಕಾಂಗ್ರೆಸ್‌ ಪಕ್ಷ ಎಲ್ಲಾ ಉಚಿತ ಭಾಗ್ಯವನ್ನು ಜಾರಿಗೆ ತರಲು ಕನಿಷ್ಠ 62 ಸಾವಿರ ಕೋಟಿ ರೂಪಾಯ ಅಗತ್ಯವಿದೆ. 2 ಲಕ್ಷ ಕೋಟಿ ರೂಪಾಯಿ ಗಾತ್ರದ ಕರ್ನಾಟಕ ಬಜೆಟ್‌ನ ಕಾಲು ಭಾಗದಷ್ಟು ಹಣವನ್ನು ಗ್ಯಾರಂಟಿ ಯೋಜನೆಗೆ ವಿನಿಯೋಗ ಮಾಡಿದ್ರೆ ರಾಜ್ಯದ ಹಣಕಾಸು ಸ್ಥಿತಿಯ ಮೇಲೆ ಹೊಡೆತ ಬೀಳುವುದು ಗ್ಯಾರಂಟಿ. ಕಳೆದ ಸಾಲಿನಲ್ಲಿಯೇ ಕೊರತೆಯ ಬಜೆಟ್‌ ಮಂಡನೆ ಮಾಡಲಾಗಿತ್ತು. ಇನ್ನೊಂದೆಡೆ ಕರ್ನಾಟಕ ಸಾಲದಲ್ಲಿ ಮುಳುಗಿದೆ. ಬಜೆಟ್‌ನ ಶೇ.20 ರಷ್ಟು ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಬಳಕೆ ಮಾಡಿದ್ರೆ ಕರ್ನಾಟಕ ರಾಜ್ಯದ ಅಭಿವೃದ್ದಿಯ ಮೇಲೆ ದೊಡ್ಡ ಹೊಡೆತ ಉಂಟಾಗಲಿದೆ. ಜೊತೆಗೆ ಸರಕಾರ ಇನ್ನಷ್ಟು ಸಾಲದ ಸುಳಿಗೆ ಸಿಲುಕಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಆದರೆ ಕಾಂಗ್ರೆಸ್‌ ಪಕ್ಷ ತಮ್ಮ ಗ್ಯಾರಂಟಿಗಳನ್ನು ಸಮರ್ಥನೆ ಮಾಡಿಕೊಂಡಿದೆ. ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಅವರೇ ಖುದ್ದು 40 ಸಾವಿರ ಕೋಟಿ ರೂಪಾಯಿ ಬೇಕಾಗಲಿದೆ. ಗ್ಯಾರಂಟಿ ಯೋಜನೆಯನ್ನು ನಾವು ಜಾರಿ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಇನ್ನೊಂದೆಡೆಯಲ್ಲಿ ಸರಕಾರ ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯದ ಮೂಲಗಳ ಹುಡುಕಾಟವನ್ನು ಆರಂಭಿಸಿದೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆಯನ್ನು ನಡೆಸಿದ್ದು, ಹಲವು ಹಣಕಾಸಿನ ಮೂಲಗಳನ್ನು ಪರಿಶೀಲಿಸಲಾಗಿದೆ. ಇನ್ನು ರಾಜ್ಯ ಸರಕಾರ ಪ್ರಮುಖವಾಗಿ ಕಂದಾಯ ಇಲಾಖೆಯ ಆದಾಯದ ಮೇಲೆ ರಾಜ್ಯ ಸರಕಾರ ಕಣ್ಣಿಟ್ಟಿದೆ. ನೋಂದಣಿ, ಸ್ಟ್ಯಾಂಪ್‌ ಡ್ಯೂಟಿ ಹೆಚ್ಚಳ, ಆಸ್ತಿಗೆ ತೆರಿಗೆ ಹೆಚ್ಚಳ, ಅಬಕಾರಿ, ನೋಂದಣಿ ಇಲಾಖೆಯಲ್ಲಿ ಆಗುತ್ತಿರುವ ಹಣ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಮರಳು ಪರವಾನಿಗೆ ಸೇರಿದಂತೆ ಹೊಸ ಶುಲ್ಕಗಳನ್ನು ನಗದಿ ಮಾಡುವ ಸರಕಾರ ಗಂಭೀರ ಚಿಂತನೆಯನ್ನು ನಡೆಸಿದೆ.

ಜೂನ್‌ 1 ರಿಂದಲೇ ರಾಜ್ಯದಲ್ಲಿ 200 ಯೂನಿಟ್‌ ವಿದ್ಯುತ್‌, ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಜನರು ವಿದ್ಯುತ್‌ ಬಿಲ್‌ ಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಟಿಕೆಟ್‌ ಪಡೆಯಲು ನಿರಾಕರಿಸುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರಕಾರ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅನ್ನೋ ಕಾರಣಕ್ಕೆ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆದ್ರೆ ಕಳೆದ ಬಾರಿ ಕೊರತೆಯ ಬಜೆಟ್‌ ಮಂಡನೆ ಆಗಿರುವುದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಹಣಕಾಸು ಇಲಾಖೆ ಗ್ರೀನ್‌ ಸಿಕ್ಕ ಕೊಟ್ಟ ನಂತರವಷ್ಟೇ ಉಚಿತ ಭಾಗ್ಯಗಳ ಘೋಷಣೆ ಜಾರಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Congress five guarantee : ಮುಂದಿನ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಜಾರಿ : ಸಿಎಂ ಸಿದ್ದರಾಮಯ್ಯ

ಇದನ್ನೂ ಓದಿ : PM Kisan Yojana : ಈ ಯೋಜನೆಯಲ್ಲಿ ಪಲಾನುಭವಿಗಳು ಕಡಿಮೆ ಯಾಗುತ್ತಿರುವುದಕ್ಕೆ ಕಾರಣ ಇಲ್ಲಿದೆ

Comments are closed.