d k shivakumar : ಇಡಿ ವಿಚಾರಣೆ ಕಾಂಗ್ರೆಸ್ಸಿಗರಿಗೆ ಮಾತ್ರ ಸೀಮಿತವೇ, ಬಿಜೆಪಿಗಿಲ್ಲವೇ : ಡಿಕೆಶಿ ಪ್ರಶ್ನೆ

ಬೆಂಗಳೂರು :d k shivakumar :ನ್ಯಾಷನಲ್​ ಹೆರಾಲ್ಡ್​ ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿರುವುದು ಇತರೆ ಕಾಂಗ್ರೆಸ್​ ನಾಯಕರ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಎರಡನೇ ದಿನವೂ ಕಾಂಗ್ರೆಸ್​ ನಾಯಕರು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜಾರಿ ನಿರ್ದೇಶನಾಲಯವು ಬಿಜೆಪಿ ನಾಯಕರ ಮನೆಗಳಲ್ಲಿ ಹಣ ಸಿಕ್ಕರೂ ಕೂಡ ಏಕೆ ತನಿಖೆ ನಡೆಸೋದಿಲ್ಲ..? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನಾಯಕರು ಹಾಗೂ ಅವರ ಆಪ್ತರ ಮನೆಗಳಲ್ಲಿಯೂ ಅಪಾರ ಹಣ ಸಿಕ್ಕ ಉದಾಹರಣೆಗಳು ಇವೆ. ಆದರೆ ಜಾರಿ ನಿರ್ದೇಶನಾಲಯ ಎಂದಿಗೂ ಬಿಜೆಪಿ ನಾಯಕರ ಮನೆಗಳಲ್ಲಿ ತನಿಖೆ ನಡೆಸಿಲ್ಲೆ. ಆದರೆ ಕಾಂಗ್ರೆಸ್​ ನಾಯಕರಿಗೆ ಮಾತ್ರ ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ಕಿರುಕುಳ ನೀಡುತ್ತಾರೆ. ಇಡಿ ಏಕೆ ಬಿಜೆಪಿ ನಾಯಕರನ್ನು ತನಿಖೆಗೆ ಒಳಪಡಿಸೋದಿಲ್ಲ ಎಂದು ಕಿಡಿಕಾರಿದರು.


ನ್ಯಾಷನಲ್​ ಹೆರಾಲ್ಡ್​ ಖರೀದಿ ಸಂದರ್ಭದಲ್ಲಿ ಯಾವುದೇ ಅಕ್ರಮವನ್ನು ಕಾಂಗ್ರೆಸ್​ ನಾಯಕರು ನಡೆದಿಲ್ಲ. ಬಾಲ ಗಂಗಾಧರ ತಿಲಕ್​, ಜವಹರಲಾಲ್​ ನೆಹರೂ, ಸರ್ದಾರ್​ ವಲ್ಲಭಬಾಯ್​ ಪಟೇಲ್​ ಅವರೆಲ್ಲ ಸೇರಿ ಆರಂಭಿಸಿದ್ದ ಪತ್ರಿಕೆಯನ್ನು ಕಾಂಗ್ರೆಸ್​ ಮುಂದುವರಿಸಿಕೊಂಡು ಬಂದಿದೆ. ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಈ ಪತ್ರಿಕೆಯ ಟ್ರಸ್ಟಿಗಳು ಎಂದಾಕ್ಷಣ ಅವರು ಅವ್ಯವಹಾರ ನಡೆಸಿದ್ದಾರೆ ಎಂದು ಭಾವಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ .


ನನ್ನ ಮೇಲೂ ಅಕ್ರಮ ಹಣ ವರ್ಗಾವಣೆ ಹೊರಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವೆಲ್ಲ ರೀತಿಯಲ್ಲಿ ಕಿರುಕುಳ ನೀಡಿದ್ದಾರೆ ಎಂಬುದು ನನಗೆ ಮಾತ್ರ ಗೊತ್ತು.ಈಗ ಕೂಡ ರಾಹುಲ್​ ಗಾಂಧಿಯನ್ನು 10 ಗಂಟೆಗಳಷ್ಟು ಸುದೀರ್ಘ ಕಾಲ ವಿಚಾರಣೆಗೆ ಒಳಪಡಿಸುವ ಯಾವುದೇ ಅವಶ್ಯಕತೆ ಇರಲಿಲ್ಲ. ವಿರೋಧ ಪಕ್ಷದವರಿಗೆ ಬಿಜೆಪಿಯು ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ಕಿರುಕುಳ ನೀಡ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್

ಇದನ್ನೂ ಓದಿ : Virat Kohli : ಸಮುದ್ರ ತಟದಲ್ಲಿ ಕುಳಿತು ಹಾಟ್ ಫೋಟೋ ಶೇರ್ ಮಾಡಿದ ಕಿಂಗ್ ವಿರಾಟ್ ಕೊಹ್ಲಿ

congress leader d k shivakumar asks why bjp leaders not questioned by ed officials

Comments are closed.