ಗಂಭೀರ್ ಆರಿಸಿದ ಟಿ20 ವಿಶ್ವಕಪ್ ತಂಡದಲ್ಲಿ ರಾಹುಲ್, ಕೊಹ್ಲಿಯೇ ಇಲ್ಲ

ಬೆಂಗಳೂರು: ಗೌತಮ್ ಗಂಭೀರ್ (Gautam gambhir) ಭಾರತದ ವಿಶ್ವಕಪ್ ಹೀರೋಗಳಲ್ಲೊಬ್ಬರು. 2007ರ ಟಿ20 ವಿಶ್ವಕಪ್ ಮತ್ತು 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಅಮೋಘ ಆಟವಾಡಿ ಭಾರತ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದವರಲ್ಲಿ ಗಂಭೀರ್ ಕೂಡ ಒಬ್ಬರು. ಆದರೆ ಕ್ರಿಕೆಟ್”ನಿಂದ ನಿವೃತ್ತಿಯಾಗಿ ರಾಜಕೀಯ ಇನ್ನಿಂಗ್ಸ್ ಶುರು ಮಾಡಿದ ನಂತರ ಗಂಭೀರ್ ತಮ್ಮ ವಿವಾದಾತ್ಮಕ ಮಾತುಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಇದೀಗ ಗಂಭೀರ್ ಮತ್ತೊಮ್ಮೆ ಅಂಥದ್ದೇ ಹೇಳಿಕೆ (T20 WC playing XI) ನೀಡಿ ಸುದ್ದಿಯಲ್ಲಿದ್ದಾರೆ.

ಈ ವರ್ಷ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಗೆಲ್ಲುವ ಉತ್ಸಾಹದಲ್ಲಿದೆ. ಹಲವು ಮಾಜಿ ಕ್ರಿಕೆಟಿಗರು ಟಿ20 ವಿಶ್ವಕಪ್”ನಲ್ಲಿಆಡಲಿರುವ ಭಾರತ ತಂಡ ಹೀಗಿರಬೇಕು ಎಂದು ತಮ್ಮದೇ ವಾದಗಳನ್ನು ಮಂಡಿಸುತ್ತಿದ್ದಾರೆ. ಗೌತಮ್ ಗಂಭೀರ್ ಕೂಡ ಟಿ20 ವಿಶ್ವಕಪ್”ನಲ್ಲಿ ಆಡಲಿರುವ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಹೆಸರಿಸಿದ್ದಾರೆ. ಅಚ್ಚರಿಯ ವಿಷಯ ಏನಂದ್ರೆ ಗಂಭೀರ್ ಹೆಸರಿಸಿರುವ ಟೀಮ್ ಇಂಡಿಯಾ ಪ್ಲೇಯಿಂಗ್ XI ನಲ್ಲಿ ಸ್ಟಾರ್ ಓಪನರ್ ಕೆ.ಎಲ್ ರಾಹುಲ್ (KL Rahul) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಹೆಸರೇ ಇಲ್ಲ.

“ನನ್ನ ಪ್ರಕಾರ ಟಿ20 ವಿಶ್ವಕಪ್”ನಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬೇಕು. 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಬೇಕು”.
ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ.

ರೋಹಿತ್ ಶರ್ಮಾ ಜೊತೆ ಅನನುಭವಿ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬೇಕು ಎಂದಿರುವ ಗಂಭೀರ್, ಕೆ.ಎಲ್ ರಾಹುಲ್’ರನ್ನು ಕಡೆಗಣಿಸಿದ್ದಾರೆ. ವಿಶೇಷ ಏನಂದ್ರೆ ಐಪಿಎಲ್” ನಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇದೇ ಗಂಭೀರ್ ಮೆಂಟರ್. 2022ರ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಕೆ.ಎಲ್ ರಾಹುಲ್ 15 ಪಂದ್ಯಗಳಿಂದ 51.33ರ ಸರಾಸರಿಯಲ್ಲಿ 2 ಶತಕಗಳ ಸಹಿತ 616 ರನ್ ಕಲೆ ಹಾಕಿದ್ದರು. ಈ ಬಾರಿಯ ಐಪಿಎಲ್’ನಲ್ಲಿ ಭಾರತ ಪರ ಅತೀ ಹೆಚ್ಚು ರನ್ ಗಳಿಸಿರುವ ರಾಹುಲ್ ಅವರನ್ನೇ ಟಿ20 ವಿಶ್ವಕಪ್”ನಲ್ಲಿ ಆಡಲಿರುವ ಭಾರತ ತಂಡದ ಪ್ಲೇಯಿಂಗ್ XIನಿಂದ ಗಂಭೀರ್ ಕೈಬಿಟ್ಟಿದ್ದಾರೆ.

ಐಸಿಸಿ ಟಿ20 ವಿಶ್ವಕಪ್”ನಲ್ಲಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರೇ ಭಾರತದ ಅಗ್ರ ಮೂರು ಕ್ರಮಾಂಕಗಳಲ್ಲಿ ಆಡಲಿದ್ದಾರೆ ಎಂದು ಇತ್ತೀಚೆಗಷ್ಟೇ ಕೋಚ್ ರಾಹುಲ್ ದ್ರಾವಿಡ್ ಅವರೇ ಹೇಳಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 23ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಫೈನಲ್ ಪಂದ್ಯ ನವೆಂಬರ್ 13 ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲೇ ನಡೆಯಲಿದೆ.

ಇದನ್ನೂ ಓದಿ : ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ (Dinesh Karthik)ಗೆ ಮತ್ತೆ ಅವಮಾನ

ಇದನ್ನೂ ಓದಿ : ದಿಗ್ಗಜರ ಸಮಾಗಮ; ಸ್ಪಿನ್ ಮಾಂತ್ರಿಕನನ್ನು ಭೇಟಿ ಮಾಡಿದ “ದಿ ಗ್ರೇಟ್ ವಾಲ್”

No Virat Kohli, KL Rahul, in Gambhir’s T20 WC playing XI

Comments are closed.