order food from their train seat : ಇನ್ಮುಂದೆ ರೈಲ್ವೆ ಸೀಟಿನಲ್ಲಿಯೇ ಕುಳಿತು ವಾಟ್ಸಾಪ್​​ನಲ್ಲಿ ಮಾಡಬಹುದು ಫುಡ್​ ಆರ್ಡರ್​ : ಇಲ್ಲಿದೆ ಹೆಚ್ಚಿನ ಮಾಹಿತಿ

order food from their train seat : ರೈಲ್ವೆ ಪ್ರಯಾಣವೇನೋ ಆರಾಮದಾಯಕ. ಆದರೆ ಇಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಆಹಾರದ ವ್ಯವಸ್ಥೆ ಸಿಗದ ಕಾರಣ ದೂರದ ಊರಿಗೆ ಪ್ರಯಾಣ ಮಾಡುವವರು ಕೊಂಚ ಅಡಚಣೆ ಅನುಭವಿಸುವುದು ಸಹಜ. ಆದರೆ ಭಾರತೀಯ ರೈಲ್ವೆ ಕ್ಯಾಟರಿಂಗ್​ ಹಾಗೂ ಪ್ರವಾಸೋದ್ಯಮ ನಿಗಮದ ಆಹಾರ ವಿತರಣಾ ಸರ್ವೀಸ್​​ ಆದ ಝೂಪ್​ ತನ್ನ ಪ್ರಯಾಣಿಕರಿಗೆ ತನ್ನ ಸೀಟಿನಲ್ಲಿಯೇ ಕುಳಿತು ವಾಟ್ಸಾಪ್​ನಲ್ಲಿ ಆಹಾರವನ್ನು ಆರ್ಡರ್​ ಮಾಡಲು ಅವಕಾಶ ನೀಡಲಿದೆ. ಝೂಪ್​ ಮೂಲಕ ರೈಲ್ವೆ ಪ್ರಯಾಣಿಕರು ತಮ್ಮ ಪಿಎನ್​ಆರ್​ ಸಂಖ್ಯೆಯನ್ನು ಬಳಸಿಕೊಂಡು ರೈಲಿನಿಂದಲೇ ತಮ್ಮ ಆಹಾರವನ್ನು ಬುಕ್​ ಮಾಡಬಹುದಾಗಿದೆ. Zoop ಸೇವೆಗಾಗಿ Jio Haptik ಜೊತೆಗೆ ಪಾಲುದಾರಿಕೆ ಹೊಂದಿದೆ.


ರೈಲ್ವೆಯಲ್ಲಿ ಕುಳಿತು ಮೊಬೈಲ್​ನಲ್ಲಿ ಹೆಚ್ಚುವರಿ ಅಪ್ಲಿಕೇಶನ್​ ಡೌನ್​ಲೋಡ್​ ಮಾಡದೆಯೇ ಪ್ರಯಾಣಿಕರು ಝೂಪ್​ ಮೂಲಕ ಮುಂಬರುವ ಯಾವುದೇ ನಿಲ್ದಾಣದಲ್ಲಿ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ. ಈ ಸೇವೆಯಲ್ಲಿ ಪ್ರಯಾಣಿಕರು ಆಹಾರವನ್ನು ಆರ್ಡರ್​ ಮಾಡಿದ ಬಳಿಕ ಅದನ್ನು ಟ್ರ್ಯಾಕ್​ ಮಾಡಲು ಕೂಡ ಸಾಧ್ಯವಾಗುತ್ತದೆ.


Zoop WhatsApp ಸೇವೆಯನ್ನು ಹೇಗೆ ಬಳಸುವುದು?

ಸರಳ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಪ್ರಯಾಣಿಕರು Zoop WhatsApp bot ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು.


ಈ ಸೇವೆಯನ್ನು ಆರಂಭಿಸಲು ಪ್ರಯಾಣಿಕರು Zoop WhatsApp ಚಾಟ್‌ಬಾಟ್ ಸಂಖ್ಯೆ +91 7042062070 ನ್ನು ಸೇವ್​ ಮಾಡಬೇಕು. ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಸಂಖ್ಯೆಗೆ ಮೆಸೇಜ್​ ಮಾಡಬೇಕು. ಇದಾದ ಬಳಿಕ ಪ್ರಯಾಣಿಕರು https://wa.me/917042062070 ಗೆ ನ್ಯಾವಿಗೇಟ್ ಮಾಡಬಹುದು ಮತ್ತು Zoop ನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಬಹುದು.


Zoop ಪ್ರಯಾಣಿಕರಿಗೆ 10 ಸಂಖ್ಯೆಯ ಪಿಎನ್​​ಆರ್​​ನ್ನು ನಮೂದಿಸುವಂತೆ ಕೇಳುತ್ತಿದೆ. ಪಿಎನ್​ಆರ್​ ನಂಬರ್​ ಸಿಕ್ಕ ಬಳಿಕ Zoop ತಾನಾಗಿಯೇ ನಿಮ್ಮ ರೈಲಿನಲ್ಲಿ ನಿಮ್ಮ ಕೋಚ್​ ಹಾಗೂ ಬರ್ತ್ ಯಾವುದು ಎಂಬುದನ್ನು ಕಂಡು ಹಿಡಿಯುತ್ತದೆ.


ಇದಾದ ಬಳಿಕ chatbot ಪ್ರಯಾಣಿಕರಿಗೆ ಅವರ ಪ್ರಯಾಣದ ಮಾಹಿತಿಯನ್ನು ಮರು ಪರಿಶೀಲಿಸುವಂತೆ ಕೇಳುತ್ತದೆ. ನೀವು ಎಲ್ಲಿ ಆಹಾರದ ಆರ್ಡರ್​ ಪಡೆಯಲು ಬಯಸುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ನಿಲ್ದಾಣದ ಬಗ್ಗೆ ಮಾಹಿತಿ ಕೇಳುತ್ತದೆ.


ರೆಸ್ಟಾರೆಂಟ್​ಗಖ ಮೂಲಕ ಪ್ರಯಾಣಿಕರಿಗೆ chatbot ಮಾರ್ಗದರ್ಶನ ನೀಡುತ್ತದೆ.ಆಹಾರವನ್ನು ಆಯ್ಕೆಯನ್ನು ಮಾಡಿ ಆರ್ಡರ್​ ಮಾಡಿದ ಬಳಿಕ ಅದೇ ಆ್ಯಪ್​ನಲ್ಲಿಯೇ ಗ್ರಾಹಕರು ಹಣ ಪಾವತಿ ಮಾಡಬಹುದಾಗಿದೆ.


ಒಮ್ಮೆ ಹಣ ಪಾವತಿ ಮುಗಿದ ಬಳಿಕ ಪ್ರಯಾಣಿಕರು ಚಾಟ್​ಬಾಕ್ಸ್​ನಲ್ಲಿ ತಮ್ಮ ಆಹಾರ ಎಲ್ಲಿದೆ ಅನ್ನೋದನ್ನು ಟ್ರ್ಯಾಕ್ ಮಾಡಬಹುದಾಗಿದೆ. ನೀವು ಸ್ಟೇಷನ್​ ಆಯ್ಕೆ ಮಾಡಿರುತ್ತಿರೋ ಅಲ್ಲಿ ನಿಮ್ಮ ಆಹಾರವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : Another jolt to Congress: ಕಾಂಗ್ರೆಸ್​ಗೆ ಮತ್ತಷ್ಟು ಆಘಾತ: ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೆ ಐವರು ‘ಕೈ’ ನಾಯಕರಿಂದ ರಾಜೀನಾಮೆ

ಇದನ್ನೂ ಓದಿ : Modi tops most popular : ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಪ್ರಧಾನಿ ಮೋದಿ

Now, passengers can order food from their train seat on WhatsApp; here’s how

Comments are closed.