ಕೋವಿಡ್ ವೈಫಲ್ಯ ಮರೆತ ಕರಾವಳಿ ಕಾಂಗ್ರೆಸ್ : ಮೋದಿ, ಸೂಲಿಬೆಲೆ ಪ್ರಶ್ನಿಸುವುದರಲ್ಲೇ ಕಾಲಹರಣ

0

ಮಂಗಳೂರು : ಕರಾವಳಿಯಲ್ಲಿ ಕೋವಿಡ್ ಅಪಾಯಕಾರಿ ಮಟ್ಟವನ್ನು ಮೀರಿದೆ. ಆಸ್ಪತ್ರೆಗಳ ಸುಳ್ಳು ಬಿಲ್ಲುಗಳ ಪ್ರಕರಣ ದಿನಂಪ್ರತಿ ವರದಿಯಾಗುತ್ತಿವೆ. ಇದನ್ನು ನಿಯಂತ್ರಿಸಬೇಕಾದ ಆಡಳಿತ ಪಕ್ಷ ಬಿಜೆಪಿಯ ವರ್ತನೆಯ ಬಗ್ಗೆ ಜನಾಕ್ರೋಶ ಭುಗಿಲೆದ್ದಿದೆ. ಆದರೆ ವಿಪರ್ಯಾಸ ಎಂಬಂತೆ ಇದನ್ನು ಪ್ರಶ್ನಿಸಬೇಕಾದ ಕರಾವಳಿಯ ಕಾಂಗ್ರೆಸಿಗರು ಪ್ರಧಾನಿ ಮೋದಿ, ಚಿಂತಕ ಸೂಲಿಬೆಲೆ ಅವರ ಬಗ್ಗೆ ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ.

ಆಸ್ಪತ್ರೆಗಳ ಸುಳ್ಳು ಬಿಲ್ಲುಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಿರೋಧ ಪಕ್ಷ ಕಾಂಗ್ರೆಸ್ ಇದರ ಬಗ್ಗೆ ಚಕಾರ ಎತ್ತಿಲ್ಲ. ಇದು ಸಾರ್ವಜನಿಕರಲ್ಲಿ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಹಿಗ್ಗಾಮುಗ್ಗ ವಾಗಿ ತರಾಟೆಗೆ ತೆಗೆದುಕೊಳ್ಳುವ ಕಾಂಗ್ರೆಸ್ ಕರಾವಳಿಯಲ್ಲಿ ಬಿಜೆಪಿಯೊಂದಿಗೆ ಶಾಮೀಲಾಗಿರುವ ರೀತಿಯಲ್ಲಿ ವರ್ತಿಸುತ್ತಿದೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೋವಿಡ್ ವೈಫಲ್ಯಗಳ ಬಗ್ಗೆ ಆಡಳಿತ ಪಕ್ಷ ಬಿಜೆಪಿಯನ್ನು ಸಮರ್ಥವಾಗಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಶ್ನಿಸಬೇಕಾದ ಕಾಂಗ್ರೆಸಿಗರು ಪ್ರಧಾನಿ ನರೇಂದ್ರ ಮೋದಿ ಹಾಗೂ ಚಕ್ರವರ್ತಿ ಸೂಲಿಬೆಲೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಇತರ ಮಾಧ್ಯಮದಲ್ಲಿ ಟ್ರೋಲ್, ಟೀಕೆ ಮಾಡುತ್ತಾ ತಮ್ಮ ಪ್ರಾಥಮಿಕ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ.

ಒಟ್ಟಿನಲ್ಲಿ ಕರಾವಳಿಯಲ್ಲಿ ಆಡಳಿತ ಪಕ್ಷ ತನ್ನ ಜವಾಬ್ದಾರಿಯಿಂದ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ, ವಿರೋಧ ಪಕ್ಷ ತನ್ನ ರಾಜಕೀಯ ದಿವಾಳಿತನ ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.