ಲಕ್ಷ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಚಹಾ ವ್ಯಾಪಾರಿ : ಆದರೆ ಬ್ಯಾಂಕ್ ಕೊಟ್ಟಿದ್ದು 50 ಕೋಟಿಯ ಶಾಕ್ !

0

ಚಂಡೀಗಢ : ಆತ ಚಹಾದ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕೊರೊನಾ ವೈರಸ್ ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹೊಸ ಉದ್ಯಮ ಆರಂಭಕ್ಕೆ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಬ್ಯಾಂಕ್ ಸಿಬ್ಬಂದಿ ಸಾಲ ಕೊಡಲು ನಿರಾಕರಿಸಿದ್ದಾರೆ. ಯಾಕೆಂದ್ರ ಚಹಾ ಮಾರುವಾತನ ಹೆಸರಲ್ಲಿತ್ತು ಬರೋಬ್ಬರಿ 50 ಕೋಟಿ ರೂಪಾಯಿ ಸಾಲ !

ಹೌದು, ಈ ಘಟನೆ ನಡೆದಿರುವುದು ಹರ್ಯಾಣದ ಕುರುಕ್ಷೇತ್ರದಲ್ಲಿ. ಕುರುಕ್ಷೇತ್ರದ ನಿವಾಸಿಯಾಗಿರುವ ರಾಜ್ ಕುಮಾರ್ ರಸ್ತೆ ಬದಿಯಲ್ಲಿ ಚಹಾ ಮಾರಾಟ ಮಾಡಿ ಬದುಕುಕಟ್ಟಿಕೊಂಡಿದ್ದರು. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾದ ಲಾಕ್ ಡೌನ್ ಆದೇಶ ಹೇರಿಕೆಯಾಗಿದ್ದರಿಂದಾಗಿ ವ್ಯಾಪಾರ ನೆಲಕಚ್ಚಿತ್ತು.

ಹೊತ್ತಿನ ತುತ್ತಿಗೂ ಕುತ್ತು ಬಂದಾಗ ರಾಜ್ ಕುಮಾರ್ ಬ್ಯಾಂಕಿಗೆ ಹೋಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಚಹಾ ಮಾರುವಾತನಿಗೆ ಸಾಲ ನೀಡುವುದಕ್ಕೆ ನಿರಾಕರಿಸಿದ್ದಾರೆ. ನೀವು ಈಗಾಗಲೇ 50 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡು, ಸರಿಯಾದ ಸಮಯದಲ್ಲಿ ಮರುಪಾವತಿಯನ್ನು ನೀಡಿಲ್ಲ. ಹೀಗಾಗಿ ಸಾಲ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸಾಲ ನಿರಾಕರಣೆಗೆ ಬ್ಯಾಂಕ್ ಸಿಬ್ಬಂದಿ ನೀಡಿದ ಕಾರಣವನ್ನು ಕೇಳಿ ರಾಜ್ ಕುಮಾರ್ ಅವರನ್ನು ಚಿಂತೆಗೀಡು ಮಾಡಿದೆ. ಆದರೆ ರಾಜ್ ಕುಮಾರ್ ತಾನು ಯಾವುದೇ ರೀತಿಯಲ್ಲಿಯೂ ಸಾಲವನ್ನು ಪಡೆದುಕೊಂಡಿಲ್ಲ. ಚಹಾ ಮಾರಾಟವನ್ನು ಮಾಡಿ ಜೀವನವನ್ನು ನಿರ್ವಹಣೆ ಮಾಡುತ್ತಿದ್ದೇನೆ. ಕೊರೊನಾ ವೈರಸ್ ಸೋಂಕಿನಿಂದ ಹೇರಿಕೆಯಾಗಿರುವ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇನೆ. ಇದೇ ಕಾರಣಕ್ಕೆ ತಾನು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಅಂತಾ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ.

ಆದರೆ ಬ್ಯಾಂಕ್ ಸಿಬ್ಬಂದಿ ಮಾತ್ರ ರಾಜ್ ಕುಮಾರ್ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ನಾನು ಬ್ಯಾಂಕ್​ಗೆ ಹೋದಾಗ ನನ್ನ ಆಧಾರ್​ ಕಾರ್ಡ್ ಕೇಳಿದ್ರು, ನಾನು ಆಧಾರ್ ಕಾರ್ಡ್ ಅವರ ಕೈಗೆ ಕೊಡುತ್ತಿದ್ದಂತೆಯೇ 50 ಕೋಟಿ ರೂಪಾಯಿ ಸಾಲದ ವಿಚಾರ ತಿಳಿಸಿದ್ದರು. ಇದರಿಂದಾಗಿ ನಾನು ಕಂಗಾಲಾಗಿದ್ದೇಣೆ. ನನ್ನ ಹೆಸರಲ್ಲಿ ಯಾರೋ ನನಗೆ ವಂಚನೆ ಮಾಡಿದ್ದಾರೆ. ಬ್ಯಾಂಕಿನಲ್ಲಿ ಹೇಗೆ ಗೋಲ್​ಮಾಲ್​ ಎಂಬುವುದೇ ನನಗೆ ಅರ್ಥವಾಗುತ್ತಿಲ್ಲ ಎಂದು ರಾಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

Leave A Reply

Your email address will not be published.