harish rai battling cancer : ಕ್ಯಾನ್ಸರ್​​ನ ಕೊನೆಯ ಹಂತದಲ್ಲಿದ್ದಾರೆ ಕೆಜಿಎಫ್​ ಖ್ಯಾತಿಯ ನಟ ಹರೀಶ್​ ರೈ

harish rai battling cancer : ಸ್ಯಾಂಡಲ್​ವುಡ್​ನ ಸಿನಿಮಾವನ್ನು ವಿಶ್ವ ಮಟ್ಟಕ್ಕೆ ಪ್ರಸಿದ್ಧಿ ತರುವಂತೆ ಮಾಡಿದ ಸಿನಿಮಾ ಕೆಜಿಎಫ್​ 2. ಕೆಜಿಎಫ್​ ಭಾಗ 1 ಹಾಗೂ ಭಾಗ 2ರಲ್ಲಿ ರಾಕಿ ಭಾಯ್​​ ಚಾಚಾ ಪಾತ್ರದಲ್ಲಿ ಅಭಿನಯಿಸಿದ್ದ ಹಿರಿಯ ನಟ ಹರೀಶ್​ ರೈ ಕ್ಯಾನ್ಸರ್​​ನಿಂದ ಬಳಲುತ್ತಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಡಲ್​ವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹರೀಶ್​ ರೈ ಕೆಜಿಎಫ್​ 2 ಸಿನಿಮಾದ ಬಳಿಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ .


ನಟ ಹರೀಶ್​ ಕ್ಯಾನ್ಸರ್​​ನ ಕೊನೆಯ ಹಂತದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಹರೀಶ್​ರನ್ನು ಉಳಿಸಿಕೊಳ್ಳಲು ವೈದ್ಯರ ಬಳಗವು ಇನ್ನಿಲ್ಲದ ಹರಸಾಹಸ ಪಡುತ್ತಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಕೆಜಿಎಫ್​ 2 ಸಿನಿಮಾದಲ್ಲಿ ನಟಿಸಿದ್ದ ನಟ ಮೋಹನ್​ ಜುನೇಜಾ ನಿಧನರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಸರಘಟ್ಟ ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.ಇದೀಗ ಹರೀಶ್​ ರೈ ಕೂಡ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಕೆಜಿಎಫ್​ ಸಿನಿಮಾದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೇ ಹರೀಶ್​ ಕುಟುಂಬಸ್ಥರಿಗೆ ಇವರ ಚಿಕಿತ್ಸೆಗೆ ಹಣ ಹೊಂದಿಸಲೂ ಕೂಡ ಕಷ್ಟವಾಗುತ್ತಿದೆ ಎನ್ನಲಾಗಿದೆ.


ಚಂದನವನದಲ್ಲಿ ಸಾಮಾನ್ಯವಾಗಿ ನೆಗೆಟಿವ್​ ಶೇಡ್​ಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹರೀಶ್​ ರೈ ಕೆಜಿಎಫ್​ ಸಿನಿಮಾಗಳಲ್ಲಿ ಒಳ್ಳೆಯ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಕಿ ಭಾಯ್​ಗೆ ಮಾರ್ಗದರ್ಶನ ನೀಡುವ ರಾಕಿ ಭಾಯ್​ ಪ್ರೀತಿಯ ಚಾಚಾನಾಗಿ ನಟಿಸುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಹರೀಶ್​ ರೈ ಯಶಸ್ವಿಯಾಗಿದ್ದಾರೆ.

ಹರೀಶ್​ ರೈ ಕೆಜಿಎಫ್​​ ಚಾಪ್ಟರ್​ 1 ಹಾಗೂ ಚಾಪ್ಟರ್​2ನ್ನು ಹೊರತುಪಡಿಸಿ ಬೆಂಗಳೂರು ಅಂಡರ್​ವರ್ಲ್ಡ್​, ಮೀಂದುಮ್ ಒರು ಕಾದಲ್ ಕಧೈ.ರಾಜ್ ಬಹದ್ದೂರ್,ಧನ್ ಧನಾ ಧನ್,ಸಂಜು ವೆಡ್ಸ್ ಗೀತಾ, ಭೂಗತ, ನನ್ನ ಕನಸಿನ ಹೂವೇ, ಓಂ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿದ್ದಾರೆ.

ಇದನ್ನು ಓದಿ : Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್

ಇದನ್ನೂ ಓದಿ : role of Aryavardhan : ಜೊತೆ ಜೊತೆಯಲಿ ಆರ್ಯವರ್ಧನ್​ ಪಾತ್ರಕ್ಕೆ ಕೇಳಿ ಬರ್ತಿದೆ ಸಿ.ಟಿ ರವಿ ಹೆಸರು

kgf movie fame sandalwood actor harish rai battling cancer here is his health updates

Comments are closed.