Flipkart Sale:ಲ್ಯಾಪ್​ಟಾಪ್​ ಬದಲು ಡಿಟರ್ಜಂಟ್​ ಸೋಪುಗಳನ್ನು ಕಳುಹಿಸಿಕೊಟ್ಟ ಫ್ಲಿಪ್​ಕಾರ್ಟ್​

Flipkart Sale : ಆನ್​ಲೈನ್​ ಮಾರುಕಟ್ಟೆಗಳಲ್ಲಿ ಖರೀದಿ ಮಾಡುವುದು ಇದೀಗ ಹೊಸ ಟ್ರೆಂಡ್​ ಆಗಿದೆ. ಅದರಲ್ಲೂ ಈಗ ದಸರಾ ಇರೋದ್ರಿಂದ ಅಮೆಜಾನ್​ ಹಾಗೂ ಫ್ಲಿಪ್​ಕಾರ್ಟ್​ನಂತಹ ಇ ಕಾಮರ್ಸ್ ವೈಬ್​ಸೈಟ್​ಗಳಲ್ಲಿ ಪ್ರಾಡಕ್ಟ್​ಗಳ ಮೇಲೆ ಸಿಕ್ಕಾಪಟ್ಟೆ ಡಿಸ್ಕೌಂಟ್​ಗಳನ್ನು ನೀಡಲಾಗ್ತಿದೆ. ಇದೇ ಆಫರ್ಗಳನ್ನು ನಂಬಿಕೊಂಡು ಇ ಕಾಮರ್ಸ್​ ವೆಬ್​ಸೈಟ್​ನಿಂದ ತನ್ನ ತಂದೆಗೆ ಲ್ಯಾಪ್​ಟಾಪ್​ ಆರ್ಡರ್​ ಮಾಡಿದ ವ್ಯಕ್ತಿಯೊಬ್ಬರಿಗೆ ಲ್ಯಾಪ್​ಟಾಪ್​ ಬದಲಾಗಿ ಡಿಟರ್ಜಂಟ್​ ಬಾರ್​ಗಳನ್ನು ಕಳುಹಿಸಿಕೊಡಲಾಗಿದೆ.


ಲಿಂಕ್ಡಿನ್​ ಪೋಸ್ಟ್​ನಲ್ಲಿ ಈ ಘಟನೆ ಬಗ್ಗೆ ಯಶಸ್ವಿ ಶರ್ಮಾ ಎಂಬವರು ಮಾಹಿತಿ ಹಂಚಿಕೊಂಡಿದ್ದಾರೆ. ಇವರು ಐಐಎಂ – ಅಹಮದಾಬಾದ್​ನಲ್ಲಿ ವಿದ್ಯಾರ್ಥಿಯಾಗಿದ್ದು ಫ್ಲಿಪ್​ಕಾರ್ಟ್​ನ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಲ್ಯಾಪ್​ಟಾಪ್​ ಆರ್ಡರ್​ ಮಾಡಿದ್ದರು. ಆದರೆ ಪ್ಯಾಕೇಜ್​ ತೆಗೆದು ನೋಡಿದ ಸಂದರ್ಭದಲ್ಲಿ ಅಲ್ಲಿ ಲ್ಯಾಪ್​ಟಾಪ್​​ನ ಬದಲಾಗಿ ಡಿಟರ್ಜಂಟ್​ ಬಾರ್​​ಗಳ ಪ್ಯಾಕೆಟ್​ಗಳನ್ನು ಕಂಡು ಶಾಕ್​ ಆಗಿದ್ದಾರೆ.


ಫ್ಲಿಪ್​ಕಾರ್ಟ್​ ಓಪನ್​ ಬಾಕ್ಸ್​ ಡೆಲಿವರಿ ಬಗ್ಗೆ ಮಾಹಿತಿ ಇಲ್ಲದ ತನ್ನ ತಂದೆಯು ಈ ಪ್ಯಾಕೇಜ್​ ಸ್ವೀಕರಿಸಿದ್ದಾರೆ ಎಂದು ಯಶಸ್ವಿ ಶರ್ಮಾ ಮಾಹಿತಿ ನೀಡಿದ್ದಾರೆ. ಓಪನ್​ ಬಾಕ್ಸ್​ ಡೆಲಿವರಿ ಅಂದರೆ ಡೆಲಿವರಿ ಬಾಯ್​ ಸರಿಯಾದ ಐಟಂ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರ ಎದುರಲ್ಲೇ ಪ್ಯಾಕೇಜ್​​ನ್ನು ತೆರೆಯುತ್ತಾರೆ. ಈ ಮೂಲಕ ಇ ಕಾಮರ್ಸ್ ವಂಚನೆಗಳಿಂದ ಗ್ರಾಹಕರು ಬಚಾವಾಗಬಹುದಾಗಿದೆ .


ಓಪನ್​ ಬಾಕ್ಸ್​ ಡೆಲಿವರಿ ಆಯ್ಕೆಯನ್ನು ಹೊಂದಿದ್ದ ಗ್ರಾಹಕರು ತಮ್ಮ ಪ್ಯಾಕೇಜ್​ನ್ನು ಡೆಲಿವರಿ ಏಜೆಂಟ್​ ಎದುರು ತೆರೆದು ತೋರಿಸದೆಯೇ ಡೆಲಿವರಿ ಬಾಯ್​ಗೆ ಒಟಿಪಿಯನ್ನು ನೀಡಿದ್ದಾರೆ. ಆದರೆ ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ನಮ್ಮ ಗ್ರಾಹಕ ಸೇವಾ ವಿಭಾಗವು ಮರುಪಾವತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಮೂರು ದಿನಗಳ ಒಳಗಾಗಿ ಅವರ ಮೊತ್ತ ಅವರಿಗೆ ರೀಫಂಡ್​ ಆಗಲಿದೆ. ನಾವು ಈ ಸಮಸ್ಯೆಯನ್ನು ಗಮನಿಸಿದ್ದೇವೆ ಹಾಗೂ ತಪ್ಪಾದ ಆರ್ಡರ್​ನ್ನು ಸರಿಪಡಿಸುವ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಫ್ಲಿಪ್​ಕಾರ್ಟ್ ಅಧಿಕೃತ ಹೇಳಿಕೆ ನೀಡಿದೆ.


ಆದರೆ ಭಾರತದಲ್ಲಿ ಹೆಚ್ಚಿನ ಜನರಿಗೆ ಈ ಓಪನ್​ ಬಾಕ್ಸ್​ ಡೆಲಿವರಿ ಬಗ್ಗೆ ತಿಳಿದಿಲ್ಲ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ ನನ್ನ ತಂದೆಗೂ ಈ ಬಗ್ಗೆ ತಿಳಿದಿರಲಿಲ್ಲ. ಪ್ಯಾಕೇಜ್​ ಸ್ವೀಕರಿಸಿದ ತಕ್ಷಣ ಒಟಿಪಿ ಕೇಳಿದ್ದಾರೆ. ಅದರಂತೆಯೇ ನನ್ನ ತಂದೆ ಒಟಿಪಿಯನ್ನು ನೀಡಿದ್ದಾರೆ ಎಂದು ಶರ್ಮಾ ಇದಕ್ಕೆ ಸಮರ್ಥನೆಯನ್ನು ನೀಡಿದ್ದಾರೆ.

ಇದನ್ನು ಓದಿ : Sanju Samson Cutout : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೂ ಮುನ್ನ ಮೈದಾನದ ಹೊರಗೆ ಸಂಜು ಸ್ಯಾಮ್ಸನ್ ಕಟೌಟ್

ಇದನ್ನೂ ಓದಿ : Central Government : ಕೇಂದ್ರ ಸರಕಾರದಿಂದ ದಸರಾ ಗಿಫ್ಟ್‌ : ಮೂರು ತಿಂಗಳು ಉಚಿತ ರೇಷನ್‌

Man Orders Laptop During Flipkart Sale, Gets Detergent Bars Instead

Comments are closed.