liquor Rate decline : ಮದ್ಯ ಪ್ರಿಯರಿಗೆ ಸಿಹಿಸುದ್ದಿ : ಇಳಿಕೆಯಾಗಲಿದೆ ಮದ್ಯದ ದರ

ಬೆಂಗಳೂರು : ಕೊರೋನಾದಿಂದ‌ ಜನರಂತೆ ಸರ್ಕಾರಕ್ಕೂ ಆರ್ಥಿಕ‌ ಏರಿಳಿತ ಕಾಡುತ್ತಿದೆ. ಬೊಕ್ಕಸದಲ್ಲಿ ಆದಾಯ ಕೊರತೆ ಕಾಡುತ್ತಿದೆ. ಹೀಗಾಗಿ ಶತಾಯ ಗತಾಯ ಆದಾಯ ಏರಿಸಿಕೊಳ್ಳಲು ಸರ್ಕಸ್ ನಡೆಸಿರೋ ಸರ್ಕಾರ ತಮ್ಮ ಪ್ರಮುಖ ಆದಾಯದ ಮೂಲವಾದ ಅಬಕಾರಿ ಇಲಾಖೆ ದಾಂಗುಡಿ ಇಟ್ಟಿದೆ. ಹೌದು ದರ ಕಡಿತದ (liquor Rate decline) ಮೂಲಕ ಆದಾಯ‌ ಏರಿಕೆಗೆ ಸರ್ಕಾರ ಪ್ಲ್ಯಾನ್ ಮಾಡಿದೆ.

ಹೌದು ಕರೋನಾ ಕೆಲವೊಂದನ್ನು ಬಿಟ್ಟು ಮತ್ತೆಲ್ಲಾ ಸಂದರ್ಭದಲ್ಲೂ ಬಾಗಿಲು ತೆರೆದಿದ್ದ ಮದ್ಯದಂಗಡಿಗಳೇ ರಾಜ್ಯದ ಆದಾಯ ಮೂಲ. ಈಗ ಈ ಆದಾಯ ಮೂಲದ ಮೇಲೆ ಕಣ್ಣಿಟ್ಟಿರೋ ಸರಕಾರ ಮದ್ಯ ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ವೈನ್, ವಿಸ್ಕಿ, ರಮ್, ಸೇರಿ ಕೆಲ ಮದ್ಯಗಳ ಬೆಲೆ ಇಳಿಕೆಗೆ ನಿರ್ಧರಿಸಿದೆ. 15 ದಿನಗಳಲ್ಲಿ ಮದ್ಯದ ದರ ಪರಿಷ್ಕರಣೆಗೊಳ್ಳಲಿದ್ದು, ಮದ್ಯ ಬೆಲೆ ಇಳಿಕೆಗೆ ಗಂಭೀರವಾಗಿ ಪರಿಶೀಲನೆ ನಡೆಸಿದ ಸರ್ಕಾರ ಸದ್ಯದಲ್ಲೇ ಆದೇಶ ಹೊರಡಿಸಲಿದೆ ಎನ್ನಲಾಗ್ತಿದೆ.

ಮದ್ಯದ ಬೆಲೆ ಇಳಿಕೆ ಮಾಡಿದರೆ ಮಾರಾಟ ಹೆಚ್ಚಳವಾಗಿ ಆದಾಯ ಸಂಗ್ರಹಣೆ ಅಧಿಕವಾಗುತ್ತದೆ ಎಂಬುದು ಸರ್ಕಾರದ ಪ್ಲ್ಯಾನ್. ರಾಜ್ಯ ಸರ್ಕಾರ ವಾರ್ಷಿಕ 5000 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ ಹೊಂದಿದೆ. ಈಗಾಗಲೇ ರಾಷ್ಟ್ರರಾಜಧಾನಿ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ದುಬಾರಿ ದರದ ಮದ್ಯದ ಬೆಲೆ ಇಳಿಕೆಯಾಗಿದೆ. ಹೀಗಾಗಿ ಇದೇ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಲು ಚಿಂತನೆ ನಡೆದಿದ್ದು, ವಿಸ್ಕಿ, ವೈನ್ ಸೇರಿದಂತೆ ಹಲವು ಮದ್ಯಗಳ ಬೆಲೆ ಕಡಿಮೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯದಲ್ಲಿ ಕಳೆದ ವರ್ಷ ಅಬಕಾರಿ ಇಲಾಖೆ 26 ಸಾವಿರ ಕೋಟಿ ರೂ ತೆರಿಗೆ ಸಂಗ್ರಹಿಸಿತ್ತು. ಈ ಸಾಲಿನಲ್ಲಿ 29 ಸಾವಿರ ರೂ. ಗುರಿ ಹಮ್ಮಿಕೊಳ್ಳಲಾಗಿದೆ. ಮದ್ಯದ ದರ ಕಡಿಮೆಯಾದರೆ 34 ಸಾವಿರ ಕೋಟಿ ರೂ. ತನಕ ಸಂಗ್ರಹಣೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಸರ್ಕಾರ ಒಂದೊಮ್ಮ ಮದ್ಯ ದರ ಇಳಿಸಿದಲ್ಲಿ ವ್ಯಾಪಾರದ ಪ್ರಮಾಣ ಹೆಚ್ಚು ಇರುವುದರಿಂದ ಕಳೆದ ಎರಡು ವರ್ಷಗಳಿಂದ ನಷ್ಟದಲ್ಲಿದ್ದ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಅನ್ನೋದು ಮದ್ಯ ವ್ಯಾಪಾರಿಗಳ ಸಂಘದ ಕರುಣಾಕರ್ ಹೆಗ್ಡೆ ಅಭಿಪ್ರಾಯ. ಆದರೆ ಈಗಾಗಲೇ ಮದ್ಯಸೇವನೆ ಪ್ರಮಾಣ ಹೆಚ್ಚಿದ್ದು ಇನ್ನು ಬೆಲೆ ಇಳಿಕೆಯಾದಲ್ಲಿ ಮದ್ಯ ಸೇವನೆಯ ಪ್ರಮಾಣ ಹೆಚ್ಚಿ‌ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂಬ ಆತಂಕವೂ ಹೆಚ್ಚಿದೆ.

ಇದನ್ನೂ ಓದಿ : 4 ವರ್ಷದ ಮಗುವಿಗೆ ಟೊಮೆಟೊ ಜ್ವರ ? ಸ್ಪಷ್ಟನೆ ಕೊಟ್ಟ ಆರೋಗ್ಯ ಇಲಾಖೆ

ಇದನ್ನೂ ಓದಿ : ಹನಿಟ್ರ್ಯಾಪ್ ಗೆ ಬಿಜೆಪಿ ಮುಖಂಡ ಬಲಿ : ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ

Good News liquor Rate decline in Karnataka

Comments are closed.