kodihalli chandrashekar : ರಾಜ್ಯ ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್​ಗೆ ಕೊಕ್​ : ನೂತನ ಅಧ್ಯಕ್ಷರಾಗಿ ಹೆಚ್​.ಆರ್​ ಬಸವರಾಜಪ್ಪ ಆಯ್ಕೆ

ಶಿವಮೊಗ್ಗ :kodihalli chandrashekar : ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೋಡಿಹಳ್ಳಿ ಚಂದ್ರಶೇಖರ್​​ರನ್ನು ವಜಾ ಮಾಡಲಾಗಿದ್ದು ರೈತ ಸಂಘದ ನೂತನ ಅಧ್ಯಕ್ಷರಾಗಿ ಹೆಚ್​.ಆರ್​ ಬಸವರಾಜಪ್ಪ ಆಯ್ಕೆಯಾಗಿದ್ದಾರೆ. ಸಾಕಷ್ಟು ರೈತ ಪರ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್​ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಪ್ರತಿಭಟನೆಯಲ್ಲಿ ಹಣ ಸ್ವೀಕರಿಸಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿತ್ತು.


ಕೋಡಿಹಳ್ಳಿ ಚಂದ್ರ ಶೇಖರ್​ ಮೇಲಿನ ಈ ಆರೋಪಗಳಿಂದಾಗಿ ರೈತರ ಸಂಘದ ಗೌರವಕ್ಕೆ ಭಂಗ ಬರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್​​ರನ್ನು ಸಂಘದಿಂದ ವಜಾಗೊಳಿಸಿದೆ. ಖಾಸಗಿ ವಾಹಿನಿಯ ಆರೋಪಗಳನ್ನು ಕೋಡಿಹಳ್ಳಿ ಚಂದ್ರಶೇಖರ್​ ಅಲ್ಲಗಳೆದಿರಲಿಲ್ಲ. ಅಥವಾ ಯಾವುದೇ ಸ್ಪಷ್ಟನೆಯನ್ನೂ ನೀಡಿರಲಿಲ್ಲ.


ತಮ್ಮ ಮೇಲೆ ಇಂತಹದ್ದೊಂದು ಗಂಭೀರ ಆರೋಪ ಬಂದಾಗ ಸಂಘದ ಗೌರವಕ್ಕೆ ತನ್ನಿಂದ ಧಕ್ಕೆ ಬರಬಾರದೆಂದು ಆರೋಪ ಮುಕ್ತವಾಗುವವರೆಗೆ ನಾನು ರಾಜೀನಾಮೆ ನೀಡುವ ಎಂಬ ಮಾತು ಕೂಡ ಕೋಡಿಹಳ್ಳಿ ಚಂದ್ರಶೇಖರ್​ ಬಾಯಲ್ಲಿ ಬಂದಿರಲಿಲ್ಲ. ಇವೆಲ್ಲವನ್ನೂ ಗಮನಿಸಿದ ರೈತ ಸಂಘವು ಇಂದು ಶಿವಮೊಗ್ಗದಲ್ಲಿ ಸಭೆ ನಡೆಸಿ ಕೋಡಿಹಳ್ಳಿ ಚಂದ್ರಶೇಖರ್​​ರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಅಲ್ಲದೇ ಕೋಡಿಹಳ್ಳಿಯಿಂದಾಗಿ ಇಂದು ಸಂಪೂರ್ಣ ರೈತ ಸಂಘವೇ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.


ಕೋಡಿಹಳ್ಳಿ ಚಂದ್ರ ಶೇಖರ್​​ ವಿರುದ್ಧ ಬಂದಿರುವ ಆರೋಪದ ಸತ್ಯಾ ಸತ್ಯತೆಯನ್ನು ಅರಿತುಕೊಳ್ಳಲು ಐವರು ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಲಾಗಿದೆ. ಪದಾಧಿಕಾರಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಪ್ರಸ್ತುತ ರೈತ ಸಂಘದ ಅಧ್ಯಕ್ಷರಾಗಿ ಹೆಚ್​.ಆರ್​ ಬಸವರಾಜಪ್ಪ ಆಯ್ಕೆಯಾಗಿದ್ದರೆ, ಗೌರವಾಧ್ಯಕ್ಷರ ಸ್ಥಾನದಲ್ಲಿ ಶಶಿಕಾಂತ್​ ಪಡಸಲಗಿಯನ್ನು ನೇಮಿಸಲಾಗಿದೆ. ರಾಹ್ಯ ಖಜಾಂಚಿ ಸ್ಥಾಣದಲ್ಲಿ ಡಾ. ಬಿಎಂ ಚಿಕ್ಕಸ್ವಾಮಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾಗಿ ಸಿದ್ದವೀರಪ್ಪ, ಕರುವ ಗಣೇಶ್, ಚುನ್ನಪ್ಪ ಪೂಜಾರಿ ಇದ್ದಾರೆ.

ಇದನ್ನು ಓದಿ : GT vs RR : ಗುಜರಾತ್ ಟೈಟಾನ್ಸ್‌ನಲ್ಲಿ ದೊಡ್ಡ ಬದಲಾವಣೆ, IPL 2022 Final ನಲ್ಲಿ ಯಾರೆಲ್ಲಾ ಆಡ್ತಾರೆ

ಇದನ್ನೂ ಓದಿ : yenapoya collage at mangaluru : ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಯೂನಿಯರ್ಸ್ -ಸೀನಿಯರ್ಸ್ ಗಲಾಟೆ : 8 ಮಂದಿ ವಿದ್ಯಾರ್ಥಿಗಳ ಬಂಧನ

rajya raitha sangha sacks kodihalli chandrashekar from the post of president

Comments are closed.