SSLC Supplementary Exam Result : ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು : SSLC Supplementary Exam Result :2022ರ ಜೂನ್​ 27ರಿಂದ ಜುಲೈ ನಾಲ್ಕರವರೆಗೆ ನಡೆದಿದ್ದ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಆದರೆ ನಾಳೆ ವಿದ್ಯಾರ್ಥಿಗಳಿಗೆ ವೆಬ್​ಸೈಟ್​​ನಲ್ಲಿ ಫಲಿತಾಂಶಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಮಾಹಿತಿ ನೀಡಿದ್ದಾರೆ. ಈ ಬಾರಿ ಪೂರಕ ಪರೀಕ್ಷೆಗೆ ಒಟ್ಟು 94,669 ವಿದ್ಯಾರ್ಥಿಗಳು ಹಾಜರಾಗಿದ್ದರು ಈ ಪೈಕಿ 37,479 ವಿದ್ಯಾರ್ಥಿಗಳು ಎಸ್​ಎಸ್​ಎಲ್​​ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯ ಫಲಿತಾಂಶ 39.59 ಪ್ರತಿಶತವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಮಾಹಿತಿ ನೀಡಿದ್ದಾರೆ.

ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್​ಸೈಟ್​ https://karresults.nic.in/ ನಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಇದರ ಜೊತೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿರುವ ಮೊಬೈಲ್​ ಸಂಖ್ಯೆಗಳಿಗೂ ಫಲಿತಾಂಶದ ವಿವರಗಳನ್ನು ಎಸ್​ಎಂಎಸ್​ ಮಾಡಲಾಗುವುದು ಎಂದು ಸಚಿವ ಬಿ,ಸಿ ನಾಗೇಶ್​ ಟ್ವೀಟ್ ಮೂಲಕ ನೀಡಿದ್ದಾರೆ.


ಮೇ 19ರಂದು 2021-22ನೇ ಸಾಲಿನ ಎಸ್​ಎಸ್​ಎಲ್​ಸಿ ಫಲಿತಾಂಶವನ್ನು ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿತ್ತು. ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಜೂನ್​ ಇಪ್ಪತ್ತೇಳರಿಂದ ಜುಲೈ ನಾಲ್ಕರವರೆಗೆ ರಾಜ್ಯದ 423 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು .ಒಟ್ಟು 11,415 ಶಾಲೆಗಳಿಂದ, 63,363 ವಿದ್ಯಾರ್ಥಿಗಳು, 31,283 ವಿದ್ಯಾರ್ಥಿನಿಯರು ಹಾಗೂ ಮೂರು ತೃತೀಯ ಲಿಂಗಿಗಳು ಸೇರಿ ಒಟ್ಟು 94,649 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಇದನ್ನು ಓದಿ : big relief to ks eshwarappa : ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪಗೆ ಬಿಗ್​ ರಿಲೀಫ್​

ಇದನ್ನೂ ಓದಿ : DK Shivakumar : ದೇಶದಲ್ಲಿ ಶವಸಂಸ್ಕಾರಕ್ಕೂ ತೆರಿಗೆ ಕಟ್ಟುವ ಕಾಲ ದೂರವಿಲ್ಲ : ಡಿ.ಕೆ ಶಿವಕುಮಾರ್​ ಕಿಡಿ

ಇದನ್ನೂ ಓದಿ : Spoken English class : ಸರ್ಕಾರಿ ಶಾಲೆಗೂ ಬರ್ತಿದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ : ಬಿ.ಸಿ.ನಾಗೇಶ್ ಘೋಷಣೆ

ಇದನ್ನೂ ಓದಿ : Ambulance hits Shiroor toll : ಶಿರೂರು ಟೋಲ್‌ ಕಂಬಕ್ಕೆ ಅಂಬ್ಯುಲೆನ್ಸ್‌ ಢಿಕ್ಕಿ : ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಇದನ್ನೂ ಓದಿ : SSC Applications 2022 : ಹಿಂದಿ ಅನುವಾದಕರಿಗೆ ಇಲ್ಲಿದೆ ಸುವರ್ಣವಕಾಶ

SSLC Supplementary Exam Result Declared

Comments are closed.