ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಚಿಕ್ಕಮಗಳೂರು : (DK Shivakumar visit Sringeri) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿದೆ. ಇದರ ಜೊತೆಗೆ ಟಿಕೆಟ್‌ ಕಗ್ಗಂಟಿನ ಬಿಸಿ ಕೂಡ ಪಕ್ಷಕ್ಕೆ ತಟ್ಟಿದೆ. ಇದೀಗ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ಶೃಂಗೇರಿ ಶಾರದಾಂಬೆ ಪೀಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ರಾಜ್ಯದಲ್ಲಿ ಚುನಾವಣೆಗೆ ದಿನಗಳು ಸಮೀಪಿಸುತ್ತಿದೆ. ಇದರ ನಡುವೆ ಅಭ್ಯರ್ಥಿಗಳ ಟಿಕೆಟ್‌ ಕಗ್ಗಂಟು ಇನ್ನೂ ಬಿಡಿಸಲಾಗಿಲ್ಲ. ಈ ನಡುವೆಯೇ ಡಿಕೆ ಶಿವಕುಮಾರ್‌ ಶೃಂಗೇರಿಗೆ ಭೇಟಿ ನೀಡಿದ್ದು, ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್.ಅಶೋಕ್ ಎದುರು ಸ್ಪರ್ಧೆ ಸಂಬಂಧ ಪ್ರತಿಕ್ರಿಯೆ ನೀಡಿದರು.

ರಾಜಕಾರಣದಲ್ಲಿ ಯಾರನ್ನೇ ಆದರೂ ನಾವು ಎದುರಿಸಲೇಬೇಕು, ಹೋರಾಡಲೇಬೇಕು. ಇದು ರಾಜಕಾರಣ, ಯಾರು ಬೇಕಾದರೂ ನಿಲ್ಲಬಹುದು. ಆರ್.ಅಶೋಕ್ ನನ್ನ ವಿರುದ್ದ ಸ್ಪರ್ಧೆ ಮಾಡುವುದಾದರೇ ಅವರಿಗೆ ಸ್ವಾಗತ ಹೇಳಿ, ಹೋರಾಡುತ್ತೇನೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಗೆ ಆಶೀರ್ವಾದ ಪೀಠ ಇದು, ಹಸ್ತ ಕೊಟ್ಟಂತಹ ಪೀಠ ಇದಾಗಿದ್ದು, ಶಾರದಾಂಬೆ ದರ್ಶನಕ್ಕಷ್ಟೇ ಬಂದಿದ್ದೇನೆ ರಾಜಕಾರಣ ಇಲ್ಲ ಎಂದರು.

ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ : 100 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ : ನಂದಿನಿ – ಅಮುಲ್‌ ವಿವಾದ : ಬಿಜೆಪಿ ವಿರೋಧ ಮತ್ತೊಂದು ವಿವಾದತ್ಮಾಕ ಹೇಳಿಕೆ ನೀಡಿದ ನಟ ಚೇತನ್‌ ಕುಮಾರ್‌

ಇನ್ನೂ ಮೂರನೇ ಪಟ್ಟಿ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ಚರ್ಚೆ ಆಗುತ್ತಿದೆ, ಶೀಘ್ರದಲ್ಲೇ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು

ಇದನ್ನೂ ಓದಿ : ಕೈಪಾಳಯಕ್ಕೆ ತಲೆನೋವಾದ ಕಡೂರು : ಪಕ್ಷೇತರ ಅಭ್ಯರ್ಥಿಯಾಗಿ ದತ್ತಾ ಕಣಕ್ಕೆ

DK Shivakumar visit Sringeri: KPCC president DK Shivakumar visited Sringeri Sharadambe.

Comments are closed.