ಮಲಯಾಳಂನ ಖ್ಯಾತ ನಟ ರಮೇಶ ವಲಿಯಾಸಾಳ ನಿಗೂಢ ಸಾವು

ತಿರುವನಂತಪುರಂ : ಮಳಯಾಳಂನ ಖ್ಯಾತ ಕಿರುತೆರೆ ನಟ ರಮೇಶ ವಲಿಯಾಸಾಳ ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಟನ ಸಾವು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೇರಳದ ಜನಪ್ರಿಯ ಕಿರುತೆರೆ ನಟನಾಗಿ ಗುರುತಿಸಿಕೊಂಡಿರುವ 54 ವರ್ಷದ ರಮೇಶ್‌ ವಲಿಯಾಸಾಳ ಹಲವು ಧಾರಾವಾಹಿ ಮತ್ತು ಸಿನಿಮಾ ನಟರಾಗಿದ್ದ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರು. ಆದರೆ ಇಂದು ಅವರ ಶವ ತಿರುವನಂತಪುರದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಕಳೆದ ಕೆಲವು ವರ್ಷಗಳಿಂದ ರಮೇಶ್‌ ವಲಿಯಾಸಾಳ ಅವರು ತನ್ನ ಎರಡನೇ ಪತ್ನಿ ಮತ್ತು ಮಗನೊಂದಿಗೆ ವಾಲಿಯಾಶಾಲಾದಲ್ಲಿ ವಾಸಿಸುತ್ತಿದ್ದರು. ಸಾವನ್ನಪ್ಪುವ ಎರಡು ದಿನಗಳ ಮೊದಲು, ರಮೇಶ್ ಅವರು ಹೊಸ ಪ್ರಾಜೆಕ್ಟ್ ಗಾಗಿ ಲೊಕೇಶನ್ ನಿಂದ ಶೂಟಿಂಗ್ ಮುಗಿಸಿ ಮರಳಿದ್ದರು ಎನ್ನಲಾಗಿದೆ.

ಪೌರ್ಣಮಿತಿಂಗಲ್’ ಧಾರಾವಾಹಿಯಲ್ಲಿ ಅವರು ಕೊನೆಯದಾಗಿ ನಟಿಸಿದ್ದಾರೆ. ಸುಮಾರು 22 ವರ್ಷಗಳಿಂದಲೂ ಮಲಯಾಲಂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಕೊರೊನಾ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದೇ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇದೀಗ ರಮೇಶ್‌ ಅವರ ಮರಣೋತ್ತರ ಕಾರ್ಯವನ್ನು ನಡೆಸಲಾಗಿದ್ದು, ಪೊಲೀಸರ ತನಿಖೆಯಿಂದಷ್ಟೆ ಸತ್ಯಾಂಶ ಹೊರಬರಬೇಕಾಗಿದೆ.

ಇದನ್ನೂ ಓದಿ : ಖ್ಯಾತ ಟಾಲಿವುಡ್‌ ನಟ ಸಾಯಿಧರ್ಮ ತೇಜ್‌ ಬೈಕ್‌ ಅಪಘಾತ : ಗಂಭೀರ ಸ್ಥಿತಿಯಲ್ಲಿ ಚಿರಂಜೀವಿ ವಂಶದ ಕುಡಿ

ಇದನ್ನೂ ಓದಿ : ಟೆಂಪೋದೊಳಗೆ ಅತ್ಯಾಚಾರ : ಮಹಿಳೆ ಸಾವು, ಓರ್ವನ ಬಂಧನ

(Famous Malayalam TV actor Ramesh Valiyasala found hanging at his residence )

Comments are closed.