Hari Krishna Bantwal : ಮತ್ತೆ ಹರಿಕೃಷ್ಣ ಬಂಟ್ವಾಳ್‌ ವಾಗ್ದಾಳಿ : ಕಾಂಗ್ರೆಸ್‌ಗೆ ಹೊಸ ತಲೆ ನೋವು

ಮಂಗಳೂರು : ಮಾಜಿ ಸಚಿವ ಬಿ.ರಮಾನಾಥ ರೈ ವಿರುದ್ದ ಹರಿಕೃಷ್ಣ ಬಂಟ್ವಾಳ್‌ (Hari Krishna Bantwal) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ವಿರುದ್ದ ಮುನಿಸಿಕೊಂಡು ಬಿಜೆಪಿ ಸೇರಿರುವ ಹರಿಕೃಷ್ಣ ಬಂಟ್ವಾಳ್‌ ಇದೀಗ ರಮಾನಾಥ ರೈ (Ramanatha Rai) ವಿರುದ್ದ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕಾಂಗ್ರೆಸ್‌ ( Congress) ಹಾಗೂ ರಮಾನಾಥ ರೈ ವಿರುದ್ದದ ವಾಗ್ದಾಳಿ ಕಾಂಗ್ರೆಸ್‌ ನಾಯಕರಿಗೆ ಹೊಸ ತಲೆನೋವು ತರಿಸಿದೆ.

ಕರಾವಳಿ ಭಾಗದಲ್ಲಿ ಈ ಬಾರಿಯೂ ಕಮಲ ಅರಳಿಸಲು ಸಜ್ಜಾದಂತೆ ಕಾಣುತ್ತಿರುವ ಬಿಜೆಪಿ ನಾಯಕರು ಇದೀಗ ಬಂಟ್ವಾಳ ಕ್ಷೇತ್ರದಲ್ಲಿ ಹರಿಕೃಷ್ಣ ಬಂಟ್ವಾಳ್‌ ಅವರನ್ನೇ ಅಸ್ತ್ರವನ್ನಾಗಿಸಿಕೊಳ್ಳಲು ಸಜ್ಜಾಗಿದ್ದಾರೆ. ಹರಿಕೃಷ್ಣ ಬಂಟ್ವಾಳ ಅವರ ಮಾತುಗಳು ಕಾಂಗ್ರೆಸ್ ಹಾಗೂ ರಮಾನಾಥ ರೈ ಅವರನ್ನು ಕಟ್ಟಿ ಹಾಕುವ ರೀತಿಯಲ್ಲಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಹರಿಕೃಷ್ಣ ಬಂಟ್ವಾಳ ನಡೆಸಿದ ತೀವ್ರ ವಾಗ್ದಾಳಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಬಂಟ್ವಾಳ ಮಾತ್ರವಲ್ಲದೇ ಹಲವು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿತ್ತು.

ಕಾಂಗ್ರೆಸ್‌ ಪಕ್ಷದಲ್ಲಿ ಇದ್ದ ವೇಳೆಯಲ್ಲಿ ಹರಿಕೃಷ್ಣ ಬಂಟ್ವಾಳ್‌ ಅವರನ್ನು ನಿರ್ಲಕ್ಷ್ಯ ಮಾಡಿದ್ದ ಕಾಂಗ್ರೆಸ್‌ಗೆ ಕಳೆದ ಬಾರಿಯ ಚುನಾವಣೆಯಲ್ಲಿ ಬಾರೀ ಡ್ಯಾಮೇಜ್‌ ಆಗಿತ್ತು. ಈ ಅಂಶವನ್ನು ಸ್ವತಃ ಕಾಂಗ್ರೆಸ್‌ ಪಕ್ಷ ಕೂಡ ಒಪ್ಪಿಕೊಂಡಿತ್ತು. ಕಳೆದ ಚುನಾವಣೆಯಂತೆಯೇ ಈ ಬಾರಿಯೂ ಹರಿಕೃಷ್ಣ ಬಂಟ್ವಾಳ್‌ ಮತ್ತೆ ಮಾತಿನ ಸಮರಕ್ಕೆ ಮುಂದಾಗಿದ್ದಾರೆ. ಹರಿಕೃಷ್ಣ ಬಂಟ್ವಾಳ್‌ ಅವರು ರಮಾನಾಥ ರೈ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರೂ ಕೂಡ ಇದಕ್ಕೆ ಪ್ರತ್ಯುತ್ತರ ನೀಡುವಲ್ಲಿ ಕಾಂಗ್ರೆಸ್‌ ನಾಯಕರು ವಿಫಲವಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಹರಿಕೃಷ್ಣ ಅವರ ಹೇಳಿಕೆಗೆ ಸರಿಯಾಗಿ ಉತ್ತರ ನೀಡದೆ ಕಾಂಗ್ರೆಸ್ ಪರದಾಡಿದೆ ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತದೆ. ಹರಿಕೃಷ್ಣ ಅವರ ಹೇಳಿಕೆಗಳು ಕಾಂಗ್ರೆಸ್ಸನ್ನು ಬಹಳಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಚುನಾವಣಾ ಹೊಸ್ತಿಲಲ್ಲಿ ವಿಜಯದ ಕನಸಿನಲ್ಲಿರುವ ಕಾಂಗ್ರೆಸ್ಸಿಗೆ ಹಾಗೂ ಕಾಂಗ್ರೆಸ್ ನಾಯಕ ‌ ರಮಾನಾಥ ರೈ ಅವರಿಗೆ ಹರಿಕೃಷ್ಣ ಬಂಟ್ವಾಳ ಹೊಸ ತಲೆ ನೋವಾಗಿದ್ದು, ಇವರನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

ಕಳೆದ ಚುನಾವಣೆಗೂ ಮುನ್ನವೇ ರಮಾನಾಥ ರೈ ಅವರು ಸೋಲನ್ನು ಕಾಣುತ್ತಾರೆ ಎಂದು ಹೇಳಿದ್ದ ಹರಿಕೃಷ್ಣ ಬಂಟ್ವಾಳ್‌ ಅವರು ಈ ಬಾರಿಯೂ ಹೊಸ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ 15000 ಅಧಿಕ ಮತಗಳಿಗಿಂತ ಸೋಲಲಿದೆ ಎಂದು ಘೋಷಿಸಿದ್ದಾರೆ. ಒಂದೊಮ್ಮೆ ಕಾಂಗ್ರೆಸ್‌ ಸೋಲನ್ನು ಕಾಣದೇ ಇದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿಯೂ ಬಹಿರಂಗ ಸವಾಲು ಹಾಕಿದ್ದಾರೆ. ಸದ್ಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬಂಟ್ವಾಳ್‌ ಹಾಗೂ ರೈ ಬೆಂಬಲಿಗರ ನಡುವಿನ ಮಾತಿನ ಸಮರ ಕರಾವಳಿಯ ರಾಜಕೀಯ ರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.

ಇದನ್ನೂ ಓದಿ : DK Shivakumar : ಮೇಕೆದಾಟು ಬಳಿಕ ಕೃಷ್ಣೆಗಾಗಿ ‘ಕೈ’ ಪಾದಯಾತ್ರೆ: ಸುಳಿವು ಕೊಟ್ಟ ಡಿ.ಕೆ.ಶಿವಕುಮಾರ್

ಇದನ್ನೂ ಓದಿ : ದಮ್ಮು ಕಟ್ಟುತ್ತದೆ ಎಂದ ಬಂಟ್ವಾಳ್‌, ಇಲ್ಲ ಎಂದ ಕಾಂಗ್ರೆಸ್‌ : ರಮಾನಾಥ ರೈ ಹಾಗೂ ಹರಿಕೃಷ್ಣ ಬಂಟ್ವಾಳ್‌ ಮಾತಿನ ಸಮರ

Hari Krishna Bantwal Allegation About Ramanatha Rai Congress new Headache

Comments are closed.