HD Kumaraswamy : ಮತ್ತೊಮ್ಮೆ ಸಿಎಂ ಸ್ಥಾನಕ್ಕೇರಲು ಎಚ್.ಡಿ.ಕುಮಾರಸ್ವಾಮಿ ಸರ್ಕಸ್ : ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್‌

ಬೆಂಗಳೂರು : ರಾಜಕೀಯದ ರಣಾಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರುವಾಸಿಯಾಗಿರೋ ಕರ್ನಾಟಕದಲ್ಲಿ ಇನ್ನೇನು ವಿಧಾನಸಭಾ ಚುನಾವಣೆಗೆ ದಿನಗಣನೆ ನಡೆದಿದೆ. ಹೀಗಿರುವಾಗಲೇ ಶತಾಯ ಗತಾಯ ಈ ಭಾರಿ ಸಿಎಂ ಆಗಲೇ ಬೇಕೆಂದು ಪಣತೊಟ್ಟಿರೋ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಇದಕ್ಕಾಗಿ ಶಾಸ್ತ್ರ ಹಾಗೂ ಭವಿಷ್ಯದ ಮೊರೆ ಹೋಗಿದ್ದಾರಂತೆ. ಹೌದು ರಾಜ್ಯದ ಕ್ಷೇತ್ರವೊಂದರಿಂದ‌‌ ಕಣಕ್ಕಿಳಿದು ಗೆದ್ದು ಬಂದರೇ, ಸಿಎಂ ಆಗೋ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿರೋದರಿಂದ ಎಚ್ಡಿಕೆ ಈ ಭಾರಿ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರಂತೆ.

ಸದ್ಯ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿರೋ‌ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರದೇ ಹೋದಲ್ಲಿ ಪಕ್ಷ ವಿಸರ್ಜನೆ ಮಾಡೋದಾಗಿ ಪಣತೊಟ್ಟಿದ್ದಾರೆ. ಮಾತ್ರವಲ್ಲ ಮುಂದಿನ ಭಾರಿ ಸಿಎಂ ಸ್ಥಾನಕ್ಕೇರೋ ಕನಸು ಕೂಡ ಕಂಡಿದ್ದಾರಂತೆ. ಇದಕ್ಕಾಗಿ ಎಚ್ಡಿಕೆ ಈ ಭಾರಿ ದೇವಮೂಲೆ ವಿಧಾನಸಭಾ ಕ್ಷೇತ್ರದ ಮೊರೆ ಹೋಗಿದ್ದಾರೆ. ಹೌದು ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ಪ್ರಸ್ತುತ ಜೆಡಿ ಎಸ್ ತೆಕ್ಕೆಯಲ್ಲಿದೆ. ಇದು ದೇವಮೂಲೆಯ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಿಂದ ಕಣಕ್ಕಿಳಿದು ಶಾಸಕರಾದರೇ ಸಿಎಂ ಆಗೋ ಅವಕಾಶ ಇದೆಯಂತೆ. ಇದೇ ಕಾರಣಕ್ಕೆ ಎಚ್ಡಿಕೆ ತಮ್ಮ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಮಾಗಡಿಯಿಂದ ಕಣಕ್ಕಿಳಿಯುತ್ತಾರಂತೆ.

ಎಚ್ ಡಿ ಕುಮಾರಸ್ವಾಮಿಯವರು ಈಗಾಗಲೇ ರಾಮನಗರದ ಮೂರು ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲಿ ಗೆದ್ದು ಒಂದು ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ನಾಲ್ಕನೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಚನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ರಾಮನಗರ ಕ್ಷೇತ್ರವನ್ನು ಬಿಟ್ಟು ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದರು. ಈಗ ಸಿಎಂ ಸ್ಥಾನಕ್ಕೇರೋ ಕನಸಿನಿಂದ ಎಚ್ಡಿಕೆ ಮಾಗಡಿಯಿಂದ ಸ್ಪರ್ಧಿಸಲಿದ್ದಾರಂತೆ. ಇದರಲ್ಲೂ ಎಚ್ಡಿಕೆ ರಾಜಕೀಯ ಲೆಕ್ಕಾಚಾರವಿದೆ. ಮಾಗಡಿಯಿಂದ ಕಣಕ್ಕಿಳಿದು ಗೆದ್ದಿರೋ ಮಂಜುನಾಥ್ ಅವರನ್ನು ಎಂಎಲ್ಸಿ ಮಾಡೋ ಭರವಸೆ ನೀಡಿ ತಮ್ಮ ರಸ್ತೆಯಿಂದ ಪಕ್ಕಕ್ಕೆ ಸರಿಸಿ ಮಾಗಡಿಯಲ್ಲಿ ಸ್ಪರ್ಧಿಸಿ ಗೆಲ್ಲೋ ಲೆಕ್ಕಾಚಾರವಿದೆ.

ಇದರಿಂದ ಖಾಲಿಯಾಗೋ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಗೆಲ್ಲಿಸೋ ನಿರ್ಧಾರವಾಗಿದೆ. ಇದಲ್ಲದೇ ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯೋದಂತು ಫಿಕ್ಸ್. ಒಟ್ಟಿನಲ್ಲಿ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬ ಸಮೇತರಾಗಿ ವಿಧಾನಸೌಧದ ಮೆಟ್ಟಿಲೇರಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವ ಲೆಕ್ಕಾಚಾರದಲ್ಲಿರೋ ಎಚ್ಡಿಕೆ ಮತದಾರರು ಹೇಗೆ ಸ್ಪಂದಿಸುತ್ತಾರೆ ಕಾದು‌ನೋಡಬೇಕಿದೆ.

ಇದನ್ನೂ ಓದಿ : ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಗೆ ನೊರೆಂಟು ವಿಘ್ನ : ಬೇರೆಯದೇ ಲೆಕ್ಕಾಚಾರದಲ್ಲಿದೆ ಹೈಕಮಾಂಡ್

ಇದನ್ನೂ ಓದಿ : Navjot Singh Sidhu : ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು

HD Kumaraswamy Again Karnataka CM, Shift Magadi Constancy

Comments are closed.