Sunny Leone Autograph : ಅಭಿಮಾನಿ ಎದೆಮೇಲೆ ಸನ್ನಿ ಲಿಯೋನ್ ಆಟೋಗ್ರಾಫ್ : ಮಳೆ ಚಳಿಗೆ ಬಿಸಿ ಏರಿಸಿದ ಮಾದಕ ನಟಿ

ಮೂರು ದಿನದಿಂದ ರಣ ಮಳೆ‌ ಹಾಗೂ ಮೈನಡುಗಿಸುವ ಚಳಿಯಿಂದ ಬಳಲಿದ ಸಿಲಿಕಾನ್ ಸಿಟಿಗೆ ಮಾದಕ ನಟಿ ಸನ್ನಿ ಲಿಯೋನ್ (Sunny Leone) ಕಾಲಿರಿಸಿದ್ದು, ಪಡ್ಡೆ ಹೈಕಳ ಮೈಕಾವೇರಿಸಿದ್ದಾರೆ. ಸಿನಿಮಾ ರಿಲೀಸ್ ಇವೆಂಟ್ ಗಾಗಿ ಹಾಟ್ ಹಾಟ್ ಬೆಡಗಿ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಬೆಂಗಳೂರಿನ ಒರಾಯನ್ ಮಾಲ್ ಗೆ ಆಗಮಿಸಿದ್ದಾರೆ. ನಟ ಸಚಿನ್ ಧನಪಾಲ್‌ ನಾಯಕ್ ನಟನೆಯ ಚಾಂಪಿಯನ್ ಸಿನಿಮಾ್ ಐಟಂ ಸಾಂಗ್ ಗೆ ಸನ್ನಿ ಲಿಯೋನ್ (Sunny Leone ) ಹೆಜ್ಜೆ ಹಾಕಿದ್ದಾರೆ. ಇದೇ ಸಿನಿಮಾದ ಆಡಿಯೋ ಲಾಂಚ್ ಪ್ರೋಗ್ರಾಂಗಾಗಿ ಸನ್ನಿ ಲಿಯೋನ್ ನಗರಕ್ಕೆ ಆಗಮಿಸಿದ್ದಾರೆ.

ಸಚಿನ್ ಧನಪಾಲ್ ನಾಯಕ್ ಹೀರೋವಾಗಿ ನಟಿಸಿರೋ ಈ ಸಿನಿಮಾವನ್ನು ಸಾಹುರಾಜ್ ಶಿಂಧೆ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಡಿಂಗರ್ ಬಿಲ್ಲಿ ಹಾಡಿನಲ್ಲಿ ಸನ್ನಿ ಲಿಯೋನ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಚಾಂಪಿಯನ್ ಟೀಂ ಜೊತೆ ಸನ್ನಿ ಲಿಯೋನ್ ಸಕತ್ತಾಗಿ ಕುಣಿದಿದ್ದಾರೆ. ಸನ್ನಿ ಲಿಯೋನ್ ಕನ್ನಡದಲ್ಲಿ ಕಾಣಿಸಿಕೊಳ್ತಿರೋದು ಇದೇ ಮೊದಲಲ್ಲ. ಹಾಟ್ ಬೆಡಗಿ ಸನ್ನಿ ಲಿಯೋನ್ ಈ ಹಿಂದೆ ರಕ್ಷಿತಾ ಪ್ರೇಮ್ ನಿರ್ದೆಶನದ ಡಿಕೆ ಚಿತ್ರದ ಸೇಸಮ್ಮ ಹಾಗೂ ಲವ್ ಯು ಆಲಿಯಾ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು.

ಓರಾಯನ್ ಮಾಲ್ ಗೆ ಬಂದ ಸನ್ನಿ ಲಿಯೋನ್ ನೋಡೋಕೆ ಪಡ್ಡೆ ಹೈಕಳ ದಂಡೇ ನೆರೆದಿದ್ದು, ಈ ವೇಳೆ ಸನ್ನಿ ಲಿಯೋನ್ ತಮ್ಮ ಅಭಿಮಾನಿಯೊಬ್ಬರ ಟೀ ಶರ್ಟ್ ಮೇಲೆ ಹಸ್ತಾಕ್ಷರ (Sunny Leone Autograph)ಹಾಕಿ ಗಮನ ಸೆಳೆದರು. ಈ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿದ ಸನ್ನಿ ಲಿಯೋನ್, ಚಾಂಪಿಯನ್ ಚಿತ್ರದ ಡಿಂಗ್ರಿ ಬಿಲ್ಲಿ ಸಾಂಗ್ ನನ್ನ ಫೇವರೀಟ್. ಮನೆಯಲ್ಲಿ ನನ್ನ ಮಕ್ಕಳು ಕೂಡ ಡಿಂಗ್ರಿ ಬಿಲ್ಲಿ ಹಾಡು ಹಾಡ್ತಾರೆ ಐ ಲವ್ ದ ಸಾಂಗ್ ಎಂದರು.

ಅಲ್ಲದೇ ಇತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ರಕ್ತದಾನ ಮಾಡೋ ಮೂಲಕ ಸೆಲಿಬ್ರೇಟ್ ಮಾಡಿದ ಮಂಡ್ಯ ಜನತೆಯ ಬಗ್ಗೆ ಮಾತನಾಡಿದ ಸನ್ನಿ ಲಿಯೋನ್ (Sunny Leone), ಮಂಡ್ಯ ಜನತೆ ನನಗೆ ಪ್ರೀತಿಕೊಟ್ಟಿದ್ದಾರೆ ತುಂಬಾ ಖುಷಿ ಆಯಿತು. ನನಗೆ ಹೆಮ್ಮೆ ಇದೆ. ಅಭಿಮಾನಿಗಳ ಪ್ರೀತಿಗೆ ನಾನು ಖುಣಿ ಎಂದಿದ್ದಾರೆ.‌ಮಾತ್ತವಲ್ಲ ನಾನು ಅಭಿಮಾನಿಗಳನ್ನು ಭೇಟಿ ಮಾಡ್ತಿನಿ ಇವತ್ತು ಆಗಲ್ಲ ಅದರೆ ಅವರನ್ನು ಖಂಡಿತ ಭೇಟಿ ಮಾಡ್ತಿನಿ ಎಂದು ಮಂಡ್ಯ ಹೈಕಳನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಸಿಲಿಕಾನ್ ಸಿಟಿಯನ್ನು ಮೆಚ್ಚಿಕೊಂಡ ಸನ್ನಿ ಲಿಯೋನ್, ನನಗೆ  ಬೆಂಗಳೂರು ತುಂಬಾ ಇಷ್ಟ ಎಂದಿದ್ದಾರೆ. ಕನ್ನಡದಲ್ಲಿ ಒಳ್ಳೆ ಆಫರ್ ಬಂದ್ರೆ, ನಾನು ಸಿನಿಮಾ ಮಾಡೋಕೆ ಸಿದ್ಧ ಎಂದಿರೋ ಸನ್ನಿ, ಕನ್ನಡ ಇಂಡಸ್ಟ್ರಿ ತುಂಬಾ ಚೆನ್ನಾಗಿ ಬೆಳವಣಿಗೆಯಾಗಿದೆ. ಕೆಜಿಎಫ್ 2 ಸಿನಿಮಾವನ್ನ  ಓಟಿಟಿಯಲ್ಲಿ ನೋಡ್ತಿನಿ ಎಂದೂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಬಿಕನಿ ಲುಕ್​​ನಲ್ಲಿ ಹಾಟ್​ ಹಾಟ್​ ಆಗಿ ಕಂಗೊಳಿಸಿದ ಸಂಯುಕ್ತಾ ಹೆಗ್ಡೆ

ಇದನ್ನೂ ಓದಿ : ಚೇತನಾ ರಾಜ್ ಸಾವಿನ ಬೆನ್ನಲ್ಲೇ ಮಾದರಿಯಾದ ಬ್ರಹ್ಮಗಂಟು ಗುಂಡಮ್ಮ: ಇಲ್ಲಿದೆ ನೋಡಿ ಗೀತಾ ಭಾರತಿ ಭಟ್ ಪಾಸಿಟಿವ್ ವೇಟ್ ಲಾಸ್ ಜರ್ನಿ

Sunny Leone autograph on fan chest

Comments are closed.