BL Santosh : ಪೇ ಸಿಎಂ ಮುಜುಗರದ ಬಳಿಕ ಎಚ್ಚೆತ್ತ ಹೈಕಮಾಂಡ್: ರಾಜ್ಯ ಬಿಜೆಪಿ ಮೇಲೆ‌ಕಣ್ಣಿಡಲು ಸಂತೋಷ್ ಗೆ ಸೂಚನೆ

ಬೆಂಗಳೂರು : ಪೇ ಸಿಎಂ ಅಭಿಯಾನ ರಾಜ್ಯ ಸರ್ಕಾರದ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದು ಮಾತ್ರವಲ್ಲ ಕೇಂದ್ರದಲ್ಲಿ ಅಧಿಕಾರದಲ್ಲಿರೋ ಬಿಜೆಪಿ ಹೈಕಮಾಂಡ್ ಗೂ ತೀವ್ರ ಮುಜುಗರ ಸೃಷ್ಟಿಸಿದೆ. ಈ ಮಧ್ಯೆ ಪೇ ಸಿಎಂ ಅವಾಂತರದ ಬಳಿಕ ರಾಜ್ಯ ಸರ್ಕಾರದ ಮೇಲೆ ಮುನಿಸಿಕೊಂಡಿರೋ ಬಿಜೆಪಿ ಹೈಕಮಾಂಡ್ ರಾಜ್ಯದ ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮಾತ್ರವಲ್ಲ ರಾಜ್ಯದ ಬಿಜೆಪಿಯನ್ನು ನಿಯಂತ್ರಿಸೋ ಹೊಣೆಯನ್ನು ಬಿ.ಎಲ್.ಸಂತೋಷ್(BL Santosh)ಹೆಗಲಿಗೆ ಹೊರಿಸಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಪ್ರತಿ ಬೆಳವಣಿಗೆಗಳ ಮೇಲೆ ಕಣ್ಣಿಟ್ಟ ಬಿಜೆಪಿ ವರಿಷ್ಠರು ಈಗಾಗಿರೋ ಡ್ಯಾಮೇಜ್ ಗಳನ್ನು ಸರಿಪಡಿಸೋದಿಕ್ಕೆ ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದ ಬಿಜೆಪಿ ಶಾಸಕರು, ಸಚಿವರು ಮತ್ತಷ್ಟು ವಿವಾದಗಳನ್ನು ಸೃಷ್ಟಿಸಿಕೊಳ್ಳದಂತೆ ಸೂಚನೆ ನೀಡಿದೆ. ಮಾತ್ರವಲ್ಲದೇ ರಾಜ್ಯ ಬಿಜೆಪಿ ಬೆಳವಣಿಗೆಗಳ ಮೇಲೆ ಕಾರ್ಯತಂತ್ರಕ್ಕೆ ವರಿಷ್ಠರು ಸೂಚನೆ ನೀಡಿದ್ದಾರೆ. ರಾಜ್ಯದ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಬಿ ಎಲ್ ಸಂತೋಷ್ (BL Santosh) ಹೆಗಲಿಗೆ ಹಾಕಲಾಗಿದೆ.

ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಈ ಪ್ಲ್ಯಾನ್ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ನಡೆಸಿದ ಪೇ ಸಿಎಂ ಅಭಿಯಾನದಿಂದ ಭಾರಿ ಮುಜುಗರ ಎದುರಾಗಿತ್ತು. ಅಲ್ಲದೇ ಕಾಂಗ್ರೆಸ್ ದಾಳಿಯನ್ನು ಎದುರಿಸುವಲ್ಲಿ ಸರ್ಕಾರ ಹಾಗೂ ಸಂಪುಟ ಸಚಿವರು ವಿಫಲರಾಗಿದ್ದರು. ಇದರಿಂದ ಪಕ್ಷ ಮುಜುಗರ ಎದುರಿಸಿತ್ತು. ಅಲ್ಲದೇ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಆರೋಪ ಕೇಳಿ ಬಂದಾಗಲೂ ಸಚಿವರ ಬೆಂಬಲಕ್ಕೆ ಯಾವ ಶಾಸಕರು ನಿಂತಿರಲಿಲ್ಲ. ಇದೆಲ್ಲದರಿಂದಲೂ ಪಕ್ಷಕ್ಕೆ ಆಗಿರುವ ದೊಡ್ಡ ಡ್ಯಾಮೇಜ್ ನ್ನು ಹೈಕಮಾಂಡ್ ಗಮನಿಸಿದೆ.

ಇದನ್ನೂ ಓದಿ : ‘ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ,ಸಿದ್ದರಾಮಯ್ಯರಂತೆ ಪಕ್ಷಾಂತರಿ ನಾನಲ್ಲ’ : ಈಶ್ವರಪ್ಪ ಗುಡುಗು

ಇದನ್ನೂ ಓದಿ : ‘ನಾನು ಶೋಭಾ ಗೌಡ ಅಲ್ಲ ಕರಂದ್ಲಾಜೆ, ಮಿಥುನ್​ ರೈ ಒಬ್ಬ ಚಿಲ್ಲರೆ ಮನುಷ್ಯ’ : ಶೋಭಾ ಕರಂದ್ಲಾಜೆ ಸಿಡಿಮಿಡಿ

ಇದನ್ನೂ ಓದಿ : ಹಾಳೂರಿಗೆ ಉಳಿದೋನೇ ಗೌಡ’:ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಗ್ಗೆ ಸಿಎಂ ಇಬ್ರಾಹಿಂ ವ್ಯಂಗ್ಯ

ಮೊನ್ನೆಯ ಬಿಜೆಪಿ ರಾಜ್ಯ ಉಸ್ತುವಾರಿ ಗಳ ಸಭೆಯಲ್ಲಿ ಈ ಬಗ್ಗೆ ನಡೆದಿರುವ ಮಹತ್ವದ ಚರ್ಚೆ ಇದಾಗಿದ್ದು, ಸರ್ಕಾರವನ್ನು ಸಮರ್ಥಿಸಿಕೊಳ್ಳದ ಶಾಸಕರ ಮೇಲೆ ಕೂಡ ಸಂತೋಷ್ ಗರಂ ಆಗಿದ್ದಾರೆ. ಸಭೆಯಲ್ಲಿ ಶಾಸಕರು,ಸಚಿವರಿಗೆ ವಾರ್ನ್ ಮಾಡಿದ್ದ ಸಂತೋಷ್ ಇನ್ಮುಂದೆ ಪ್ರತಿ ಬೆಳವಣಿಗೆ ಗಮನಿಸಿ, ಅದನ್ನು ಸಮರ್ಥವಾಗಿ ಎದುರಿಸಲು ರಾಜ್ಯದ ನಾಯಕರಿಗೆ ಸಂತೋಷ್ ಸೂಚಿಸಿದ್ದಾರಂತೆ. ಇದಾದ ಬಳಿಕ ಕಾಂಗ್ರೆಸ್ ದಾಳಿಯನ್ನು ಸಮರ್ಥವಾಗಿ ಎದುರಿಸುವಂತೆಯೂ ಸಂತೋಷ್ ಶಾಸಕರು ಹಾಗೂ ಸಚಿವರಿಗೆ ಸೂಚನೆ ನೀಡಿದ್ದು, ಭಾರತ ಜೋಡೋ ಸೇರಿದಂತೆ ಎಲ್ಲ ಸಂದರ್ಭದಲ್ಲೂ ಕಾಂಗ್ರೆಸ್ ವಿರುದ್ಧ ಅಲ್ಲಲ್ಲಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡುವಂತೆಯೂ ಸಂತೋಷ್ ಹೇಳಿದ್ದಾರಂತೆ. ಇನ್ನು ಸಂತೋಷ್ ಸೂಚನೆಯ ಬಳಿಕ ರಾಜ್ಯ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದು ಚುನಾವಣೆಯಲ್ಲಿ ಟಿಕೇಟ್ ಸೇರಿದಂತೆ ಹಲವು ವಿಚಾರಕ್ಕೆ ಸಂತೋಷ್ ಅಭಿಪ್ರಾಯಕ್ಕೆ ಮನ್ನಣೆ ಸಿಗೋದರಿಂದ ಸಂತೋಷ್ ಅವರ ಕೆಂಗಣ್ಣಿಗೆ ಗುರಿಯಾಗದಿರಲು ಬಿಜೆಪಿ ನಾಯಕರು ಸರ್ಕಸ್ ನಡೆಸಿದ್ದಾರಂತೆ.

High Command alert after Pay CM embarrassment: Santhosh instructed to keep an eye on state BJP

Comments are closed.