zameer ahamed khan : ಸಿದ್ಧು ಶಿಷ್ಯನಿಗೆ ಡಿಕೆಶಿ ಕ್ಲಾಸ್ : ನಾನು ಮಾತನಾಡೋದೇ ಬೇಡ್ವಾ ಎಂದು ತಿರುಗೇಟು ಕೊಟ್ಟ ಜಮೀರ್

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಜೋರಾಗಿದೆ. ಆದರೆ ಈ ಸಂಗತಿ ಬಯಲಾಗದಂತೆ ಪಕ್ಷದ ನಾಯಕರು ಸರ್ಕಸ್ ನಡೆಸುತ್ತಲೇ ಇರುತ್ತಾರೆ.‌ ಹೀಗಿದ್ದರೂ ಆಗಾಗ ನಡೆಯುವ ಸಮರಗಳು ಕೈ ಪಡೆ ಸಿದ್ದು ಬಣ ಹಾಗೂ ಡಿಕೆಶಿ ಬಣ ಎಂದು ವಿಂಗಡನೆಯಾಗಿರೋದಕ್ಕೆ ಸಾಕ್ಷಿ ಒದಗಿಸುತ್ತವೆ. ಇಂದು ಕೂಡ ಕಾಂಗ್ರೆಸ್ ಸಭೆಯಲ್ಲಿ ಅಂತಹುದೇ ಘಟನೆಯೊಂದಕ್ಕೆ ಕೈ ನಾಯಕರು ಸಾಕ್ಷಿಯಾಗಿದ್ದಾರೆ. ಹಿಜಾಬ್ ವಿಚಾರಕ್ಕೆ (hijab Raw) ಸಂಬಂಧಿಸಿದಂತೆ ನಡೆದ ಮಾತುಕತೆಯಲ್ಲಿ ಜಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ (zameer ahamed khan) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (dk shivakumar) ನಡುವೆ ತೀವ್ರ ವಾಗ್ಯುದ್ಧ ನಡೆದಿದೆ. ಇದು ಸಿದ್ದು ಬಣದ ಸದಸ್ಯರ ಮೇಲೆ ಡಿಕೆಶಿ ಸವಾರಿ ಹಾಗೂ ಸಿದ್ದು ಬಣದ ಸಖತ್ ತಿರುಗೇಟಿಗೆ ಕಾರಣವಾಗಿದೆ.

ಸಭೆಯಲ್ಲಿ ಜಮೀರ್ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಡಿಕೆಶಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಹೈಕಮಾಂಡ್ ಸೂಚನೆ ಬಳಿಕವೂ ಹೀಗೆ ಮಾತನಾಡುವ ಅಗತ್ಯವಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಏರು ಧ್ವನಿಯಲ್ಲಿ ತಿರುಗುತ್ತುರ ನೀಡಿದ ಜಮೀರ್, ನಾನು ಆ ರೀತಿ ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್, ನೀವು ಮಾತನಾಡಿದ್ದೀರಿ. ಅಲ್ಲದೇ ಬಳಿಕ ಕ್ಷಮೆ ಕೂಡ ಯಾಚಿಸಿದ್ದೀರಿ. ನನಗೆ ಪಕ್ಷದ ಅಧ್ಯಕ್ಷನಾಗಿ ಸೂಚನೆ ಇತ್ತು. ಹಿಜಾಬ್ ವಿಚಾರವನ್ನು ಹೆಚ್ಚು ರಬ್ ಮಾಡೋದು ಬೇಡ ಎಂದು. ಅದೇ ಕಾರಣಕ್ಕೆ ನಾನು ನಿಮಗೆ ಕ್ಷಮೆ ಕೇಳಲು ಸೂಚಿಸಿದ್ದೇ ಎಂದು ತಿರುಗೇಟು ನೀಡಿದರು.

ಇದಕ್ಕೂ ವಾದ ಮಾಡಿದ ಜಮೀರ್ ನಾನು ಆ ರೀತಿ ಮಾತನಾಡಲೇ ಇಲ್ಲ. ಆದರೂ ಪಕ್ಷದ ಅಧ್ಯಕ್ಷರು ನನಗೆ ಕ್ಷಮೆ ಕೇಳಲು ಹೇಳಿದರು. ಹಾಗಿದ್ದರೇ ನಾನು ಮಾತನಾಡಲೇ ಬಾರದಾ ಎಂದು ಏರು ಧ್ವನಿಯಲ್ಲೇ ಪ್ರಶ್ನಿಸಿದ್ದಾರೆ. .ಇದಕ್ಕೆ ಸ್ಪಷ್ಟವಾಗಿ ಹೇಳಿದ ಡಿಕೆಶಿ ನನಗೆ ಪಕ್ಷದ ಸೂಚನೆ ಇದೆ.‌ಅದಕ್ಕೆ ನಾನು ನಿಮ್ಮನ್ನು ನಿಯಂತ್ರಿಸಿದ್ದು ಎಂದರು. ಡಿಕೆಶಿ ಮತ್ತು ಜಮೀರ್ ನಡುವೆ ವಾದ ಪ್ರತಿವಾದ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ನಾಯಕರು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ . ಆಯಿತು ಈ ವಿಚಾರವನ್ನು ಇಲ್ಲೇ ಬಿಡಿ. ಇನ್ಮುಂದೇ ಈ ರೀತಿ ವಿವಾದ ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಸಿದ್ಧರಾಮಯ್ಯನವರ ಪಾಳಯದಲ್ಲಿ ಗುರುತಿಸಿಕೊಂಡಿರೋ ಜಮೀರ್ ಮಾತು ಈಗ ಡಿಕೆಶಿ ಅಸಮಧಾನ ಕ್ಕೆ‌ಕಾರಣವಾಗಿದ್ದು ಇದೇ ವಿಚಾರಕ್ಕೆ ಸಿದ್ದು ಬೆಂಬಲಿಗನನ್ನು ಡಿಕೆಶಿ ತರಾಟೆಗೆ ತೆಗೆದುಕೊಂಡು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ : ಜೆಡಿಎಸ್‌ ನೇತೃತ್ವದ ‘ಕನ್ನಡಿಗರ ಮಹಾಮೈತ್ರಿಕೂಟʼ; ಕನ್ನಡ ಸಂಘಟನೆ, ರೈತ-ದಲಿತ-ನೀರಾವರಿ ಸಂಘಟನೆಗಳ ನಾಯಕರ ಒಗ್ಗಟ್ಟು

ಇದನ್ನೂ ಓದಿ : ಬಿಜೆಪಿ ವಿರುದ್ಧ ಮುಂದುವರೆಯಲಿದೆ ಕೈ ಸಮರ : ಫೆ.24 ರಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಲು ಡಿಕೆಶಿ ಚಿಂತನೆ

( hijab Raw in karntaka, zameer ahamed khan vs dk shivakumar)

Comments are closed.