Darshan Birthday : ಕ್ರಾಂತಿಗೆ ಸಜ್ಜಾದ ಡಿ ಬಾಸ್ : ದರ್ಶನ್ ಬರ್ತಡೇಯಂದು ಫರ್ಸ್ಟ್ ಲುಕ್ ಟೀಸರ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷವೂ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ದಚ್ಚು ನೋ ಎಂದಿದ್ದು, ಈ ಬಗ್ಗೆಯೇ ಸ್ಪೆಶಲ್ ವಿಡಿಯೋ ಮಾಡಿರೋ ದರ್ಶನ್, ಅಭಿಮಾನಿಗಳಿಗೆ ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದು ಮನವಿ ಮಾಡಿದ್ದಾರೆ. ಈ ಮಧ್ಯೆ ಸದ್ಯ ದರ್ಶನ್ ಭೇಟಿ (Darshan Birthday) ಹುಟ್ಟುಹಬ್ಬದ ಸೆಲಿಬ್ರೇಶನ್ ಖುಷಿ ಯಾವುದು ಇಲ್ಲದೇ ಬೇಸತ್ತ ಫ್ಯಾನ್ಸ್ ದಚ್ಚು 55 ನೇ ಚಿತ್ರ ಕ್ರಾಂತಿ ತಂಡ ಸಖತ್ ಗಿಫ್ಟ್ ನೀಡಿದೆ.

ಹೌದು ದರ್ಶನ್ ಸಿನಿಕೆರಿಯರ್ ನಲ್ಲೇ ಹೆಚ್ಚು ಕುತೂಹಲ ಮೂಡಿಸಿರೋ ಈ ಕ್ರಾಂತಿ ಸಿನಿಮಾದ ಡಿಬಾಸ್ ಫರ್ಸ್ಟ್ ಲುಕ್ ಟೀಸರ್ ಚಿತ್ರತಂಡದ ವತಿಯಿಂದ ಸ್ಪೆಶಲ್ ಗಿಫ್ಟ್ ರೂಪದಲ್ಲಿ ರಿಲೀಸ್ ಆಗಿದೆ. ದರ್ಶನ್ ಸಿನಿಮಾಗಳು ಅಂದ್ರೇ ಮಾಸ್ ಅನ್ನೋ ಇಮೇಜ್ ಬದಲಾಯಿಸಿದ್ದು, ಯಜಮಾನ ಸಿನಿಮಾ. ಹೊಸತೊಂದು ಇಮೇಜ್ ಹುಟ್ಟುಹಾಕಿದ ಯಜಮಾನ ಸಿನಿಮಾದಲ್ಲಿ ಸಾಮಾಜಿಕ ಕತೆಯೊಂದರ ಎಳೆ ಇಟ್ಟುಕೊಂಡು ದರ್ಶನ್ ಸಮಾಜಮುಖಿ ಪಾತ್ರವೊಂದನ್ನು ಕಟ್ಟಿಕೊಡಲಾಗಿತ್ತು.

ಈಗ ಕ್ರಾಂತಿ ಸಿನಿಮಾದಲ್ಲೂ ದರ್ಶನ್ ಅಕ್ಷರ ಕ್ರಾಂತಿ ಹುಟ್ಟುಹಾಕುವಂತ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ರಿಲೀಸ್ ಆಗಿರೋ ಫರ್ಸ್ಟ್ ಲುಕ್ ಟೀಸರ್ ಸಾಕ್ಷಿ ಒದಗಿಸುತ್ತಿದೆ. ನನ್ನ ಶಾಲೆ, ಅಕ್ಷರ ಎದೆಗೆ ಬಿತ್ತಿದ ಶಾಲೆ. ಪ್ರಜ್ಞೆಯನ್ನು ತಲೆಗೆ ಬಿತ್ತಿದ ಶಾಲೆ.ಬದುಕುವುದನ್ನು ಕಲಸಿದ ಶಾಲೆ. ನನ್ನ ತಾಯಿಗೆ, ನನ್ನ ಕನ್ನಡ ತಾಯಿಗೆ ನಾನು ಚಿರ ಋಣಿ ಎಂದು ದರ್ಶನ್ ಓಫನಿಂಗ್ ಡೈಲಾಗ್ ಹೊಡೆದಿದ್ದಾರೆ.

ಇತ್ತೀಚಿಗೆ ದರ್ಶನ್ ಸಿನಿಮಾ ಆಯ್ಕೆಯ ಟೇಸ್ಟ್ ಬದಲಾಗಿದೆ. ಕೇವಲ ಮಾಸ್ ಮಾತ್ರವಲ್ಲ ಕ್ಲಾಸ್ ಸಿನಿಮಾಗೂ ದಚ್ಚು ಯೆಸ್ ಎನ್ನುತ್ತಿದ್ದಾರೆ.ಅದಕ್ಕೆ ಸಾಕ್ಷಿ ಕ್ರಾಂತಿ ಸಿನಿಮಾ. ಸಂಗೀತ ನಿರ್ದೇಶಕ ವಿ.ಹರಿಕೃಷ್ಸ ಆಕ್ಷ್ಯನ್ ಕಟ್ ಹೇಳ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು‌ ಬುಲ್ ಬುಲ್ ಬಳಿಕ ಇದೇ ಮೊದಲ ಬಾರಿಗೆ ಗುಳಿ ಕೆನ್ನೆಯ ಬೆಡಗಿ ರಚಿತಾರಾಮ್ ಮತ್ತೆ ದರ್ಶನ್ ಜೊತೆಯಾಗುತ್ತಿದ್ದಾರೆ‌. ರಿಲೀಸ್ ಆಗಿರೋ ಟೀಸರ್ ನಲ್ಲಿ ದಚ್ಚು ಕೇವಲ ಮಾಸ್ ಮಾತ್ರವಲ್ಲ ಪಕ್ಕಾ ಕ್ಲಾಸ್ ಲುಕ್ ನಲ್ಲೂ ಮಿಂಚಿದ್ದಾರೆ. ತಮಗೆ ಅಡ್ಡಿ ಬಂದ ಒಂದು ಬೈಕ್ ನ್ನು ಡಿಬಾಸ್ ಎಳೆದುಕೊಂಡು ಫೈಟಿಂಗ್ ಗೆ ಮುನ್ನುಗ್ಗೋ ಒಂದು ದೃಶ್ಯ ಫರ್ಸ್ಟ್ ಲುಕ್ ಟೀಸರ್ ನಲ್ಲಿ ಗಮನ ಸೆಳೆದಿದ್ದು, ದಚ್ಚು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

ಇದನ್ನೂ ಓದಿ : ಕನ್ನಡತಿ ಆದ್ಯಾ ಆನಂದ್ ಆಗಿದ್ದಾರೆ ಪಡ್ಡೆ ಹುಡುಗರ ಹೊಸ ‘ಕ್ರಷ್’!

ಇದನ್ನೂ ಓದಿ : ಮೊದಲ ಸಿನಿಮಾದಲ್ಲೇ ಮುತ್ತಿನ ಮಳೆ : ಧಿರೇನ್- ಮಾನ್ವಿತಾ ಹಾಟ್ ಅವತಾರ ರಿಲೀಸ್

( Kranti movie first look release in Darshan Birthday )

Comments are closed.