Nelli Teerta : ದುರ್ಗಮ ಗುಹೆಯಲ್ಲಿ ನೆಲೆನಿಂತ ಮಹಾದೇವ ; ಈತನ ಪ್ರಸಾದದಿಂದ ಸರ್ವರೋಗ ಮಾಯ

ಪೂಜಿಸಿದ್ರೆ ಅತಿ ಬೇಗ ಒಲಿಯೋನೆ ಶಿವ. ಅದಕ್ಕೆ ಇವನ್ನ ಭೋಲೇ ನಾಥ್ ಅಂತನೂ ಕರೀತಾರೆ. ಆದ್ರೆ ಈ ದೇವಾಲಯದಲ್ಲಿ ಶಿವನನ್ನು ಒಲಿಸಿಕೊಳ್ಳೊದಕ್ಕಿಂತ ಅವನ ದರ್ಶನ ಭಾಗ್ಯ ಪಡೆಯೋದೆ ಕಷ್ಟ. ಯಾಕಂದ್ರೆ ಇಲ್ಲಿನ ( Nelli Teerta) ಶಿವಾಲಯಕ್ಕೆ ಹೋಗಬೇಕಾದ್ರೆ ಗುಹೆಯನ್ನೇ ದಾಟಬೇಕು. ಜೀವವನ್ನು ಬಿಗಿಯಾಗಿ ಹಿಡಿದು ಸಾಗಬೇಕು. ಹಾಗೆ ಸಾಗಿದ್ರೆ ಇಲ್ಲಿ ಮಹಾದೇವನ ದರ್ಶನವಾಗುತ್ತೆ

ಈ ದೇವಾಲಯವನ್ನು ಒಂದರ್ಥದಲ್ಲಿ ಗುಹಾಲಯ ಅಂತಾನೆ ಹೇಳಬೇಕು. ಯಾಕಂದ್ರೆ ಇಲ್ಲಿ ಶಿವ ನೆಲೆ ನಿಂತಿರೋದೆ ಗುಹೆಯಲ್ಲಿ. ಸ್ವಯಂ ಪ್ರಕೃತಿಯೇ ಶಿವನಿಗೆ ಅಭಿಷೇಕ ಮಾಡುತ್ತೆ. ಹೌದು ಪುಟ್ಟಊರಿನ ಗುಹೆಯಲ್ಲಿಭಗವಂತ ಸೋಮನಾಥೇಶ್ವರನ ರೂಪದಲ್ಲಿ ನೆಲೆ ನಿಂತಿದ್ದಾನೆ. ಇಲ್ಲಿ ಹೋಗೋದು ಅಷ್ಟು ಸುಲಭವಲ್ಲ. ಇಲ್ಲಿನ ದಾರಿ ಭಕ್ತರಿಗೆ ಹೆಜ್ಜೆ , ಹೆಜ್ಜೆ ಗೂ ಸವಾಲು ತರುತ್ತೆ .ಈ ಸವಾಲುಗಳನ್ನು ದಾಟಿದವರೇ ಆ ಭೋಲೇ ನಾಥನ ದರ್ಶನ ಪಡೆಯೋಕೆ ಸಾಧ್ಯ .

ಇಲ್ಲಿ ಸ್ವತಹ ಪ್ರಕೃತಿಯಿಂದನೇ ಶಿವ ಆರಾಧಿಸಲ್ಪಡುತ್ತಾನೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ ಗುಹೆಯಲ್ಲಿ ಹರಿಯುವ ನೀರು ಅಂತರಗಂಗೆಯಂತೆ ದಿನಪೂರ್ತಿ ಶಿವನಿಗೆ ಅಭಿಷೇಕವನ್ನು ಮಾಡುತ್ತೆ . ಭಕ್ತರಪಾಲಿಗಂತು ಇದು ಶಿವ ಜಟೆಯಿಂದ ಹರಿದು ಬರುವ ಗಂಗೆ ಅನ್ನೋ ನಂಬಿಕೆ ಇದೆ. ಇದೇ ಈ ತೀರ್ಥಕ್ಷೇತ್ರಕ್ಕೆ ನೆಲ್ಲಿತೀರ್ಥ ಅನ್ನೋ ಹೆಸರು ಬರುವಂತೆಯೂ ಮಾಡಿದೆ. ಹೌದು ಇಲ್ಲಿಗೆ ನೆಲ್ಲಿ ತೀರ್ಥ ಅನ್ನೋ ಹೆಸರು ಬರೋಕೆ ಕಾರಣನೇ ಈ ಅಂತರ ಗಂಗೆ. ಇಲ್ಲಿನ ಗುಹೆಯಿಂದ ನೆಲ್ಲಿಕಾಯಿ ಗಾತ್ರದಲ್ಲಿ ನೀರು ಜಿನುಗುತ್ತಾನೆ ಇರುತ್ತೆ. ಇನ್ನು ಈ ಶಿವಲಿಂಗದ ಪಕ್ಕದಲ್ಲಿ ಪುಟ್ಟ ಎರಡು ತೊರೆಗಳ ಹರಿಯುತ್ತೆ. ಇದು ಗುಹೆಯೊಳಗೆ ಸಣ್ಣದೊಂದು ಸರೋವನ್ನೇ ನಿರ್ಮಿಸಿದೆ. ಇಲ್ಲಿಗೆ ಬರುವ ಭಕ್ತಾದಿಗಳು ಈ ನೀರಿನಿಂದಲೇ ಶಿವಲಿಂಗಕ್ಕೆ ಅಭೀಷೇಕ ಮಾಡುತ್ತಾರೆ.

ಇಲ್ಲಿಗೆ ಪ್ರವೇಶಿಸಿಸಬೇಕಾದ್ರೆ ಕೆಲವು ನಿಯಮವನ್ನು ಪಾಲೀಸಲೇ ಬೇಕು . ಬರೋ ಭಕ್ತ ಮೊದಲಿಗೆ ಗುಹೆಯ ಪಕ್ಕದ ನಾಗಪ್ಪನ ಕೆರೆಯಲ್ಲಿ ಸ್ನಾನ ಮಾಡಬೇಕು. ಅಲ್ಲಿ ಶುದ್ದವಾದ ನಂತರವೇ ಒದ್ದೆ ಬಟ್ಟೆಯಲ್ಲಿ ಗುಹೆಯೊಳಗೆ ಪ್ರವೇಶಿಬೇಕು . ನಂತರ ಬಂಡೆಯ ನಡುವಿನ ಕಿರಿದಾದ ದಾರಿಯಲ್ಲಿ ಒಳ ಪ್ರವೇಶಿಸ ಬೇಕು. ಕೆಲವೊಂದು ಬಾರಿ ಬಗ್ಗಿ, ಕೆಲವೊಮ್ಮೆ ತೆವಳಿ ಮುಂದೆ ಸಾಗಿದ್ರೆ , ಅಲ್ಲಿ ವಿಶಾಲವಾದ ಜಾಗ ಕಾಣುತ್ತೆ ಮುಂದೆ ಅಲ್ಲೆ ನೆಲೆ ನಿಂತಿದ್ದಾನೆ ಮಹಾದೇವ.

ಇನ್ನು ಇಲ್ಲಿರು ಶಿವಲಿಂಗದಲ್ಲೂ ವಿಶೇಷವಿದೆ. ಇದು ಉದ್ಬವಲಿಂಗವಾಗಿದ್ದು, ಸಾಲಿಗ್ರಾಮ ಶಿಲೆಯಿಂದ ಆಗಿದೆ. ಇನ್ನು ಇಲ್ಲಿ ಬರು ಭಕ್ತರಿಗೆ ಇಲ್ಲಿರುವ ಮಣ್ಣೆ ಪ್ರಸಾದ. ಇಲ್ಲಿ ಸಿಗುವ ಮಣ್ಣನ್ನು ಪ್ರಸಾದ ಅಂತ ಜನರು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಮೈಗೆ ಹಚ್ಚಿದ್ರೆ ಚರ್ಮರೋಗಗಳು ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಇಲ್ಲಿಯ ಭಕ್ತರದು. ಇನ್ನುಇಲ್ಲಿ ಸ್ಥಳಪುರಾಣಕ್ಕೆ ಬರೋದಾದ್ರೆ, ಇದು ಕಟೀಲು ಕ್ಷೇತ್ರದ ಜೊತೆ ತಳಕು ಹಾಕಿಕೊಳ್ಳುತ್ತೆ.ಅರುಣಾಸುರ ನ ಕಾಟಕ್ಕೆ ಬೇಸತ್ತು ಜಾಬಾಲಿ ಮಹಾ ಋಷಿಗಳು ಇದೇ ಗುಹೆಯಲ್ಲಿ ಆದಿ ಶಕ್ತಿಗಾಗಿ ತಪಸ್ಸು ಮಾಡಿದ್ರಂತೆ . ಆಗ ತಾಯಿ ಕಟೀಲೇಶ್ವರಿ ದುಂಬಿಯ ರೂಪದಲ್ಲಿ ಕಲ್ಲಿನಿಂದ ಬಂದು ಅಸುರ ಸಂಹಾರ ಮಾಡಿದ್ಲು ಅನ್ನೋ ನಂಬಿಕೆ ಭಕ್ತರದು. ಮುಂದೆ ಈ ತಾಯಿ ಕಟೀಲಿನಲ್ಲಿ ನೆಲೆಸಿದಳು . ಅಲ್ಲಿ ಹರಿಯುವ ನಂದಿನಿಯೇ ಗುಹೆಯಲ್ಲಿ ಹರಿಯುವ ಉದ್ಬವ ಗಂಗೆ ಅಂತನೂ ನಂಬಲಾಗುತ್ತೆ. ಇನ್ನು ಗುಹೆಯುಲ್ಲಿರುವ ಎರಡು ಸುರಂಗವು ಇದೇ ಕಥೆ ಹೇಳುತ್ತೆ. ಇಲ್ಲಿನ ಜನರ ಪ್ರಕಾರ ಈ ಗುಹೆಯಲ್ಲಿ ಒಂದು ಕಾಶಿಗೆ ಹೋಗುವ ದಾರಿಯಾದ್ರೆ. ಇನ್ನೊಂದು ಕಟೀಲಿಗೆ ಹೋಗುವ ದಾರಿ ಅಂತ ನಂಬಲಾಗಿದೆ.

ಇನ್ನ ಈ ದೇವಾಲಯದಲ್ಲಿ ಮತ್ತೊಂದು ವಿಶೇಷವಿದೆ . ಇದು ವರ್ಷದಲ್ಲಿ ಕೇವಲ 6 ತಿಂಗಳು ಮಾತ್ರ ಇದು ತೆರೆದಿರುತ್ತೆ. ಇನ್ನುಳಿದ 6 ತಿಂಗಳು ಗುಹಾಲಯಕ್ಕೆ ಯಾರಿಗೂ ಪ್ರವೇಶ ವಿಲ್ಲ. ಅಂದ್ರೆ ಅಕ್ಟೋಬರ್ ನಿಂದ ಎಪ್ರಿಲ್ ವರೆಗೆ ೧೦ ವರ್ಷ ಮೇಲ್ಪಟ್ಟ ಯಾರು ಬೇಕಾದ್ರೂ ಹೋಗಬಹುದು. ಅದರ ನಂತ್ರ ಗುಹೆಯನ್ನು ಬಂದ್ ಮಾಡಲಾಗುತ್ತೆ. ಇನ್ನು ಇಲ್ಲಿ ಮಧ್ಯಾಹ್ನ 12 ಗಂಟೆ ಮಹಾ ಪೂಜೆ ನಡೆಯುತ್ತೆ , ಅದರ ನಂತರವೂ ಗುಹಾಲಯವನ್ನು ಬಂದ್ ಮಾಡಲಾಗುತ್ತೆ ಅದರ ನಂತರ ಕೂಡಾ ಇದಕ್ಕೆ ಕಾರಣ ಅಲ್ಲಿ ವಾಸ ಮಾಡುವ ಪ್ರಾಣಿಗಳು . ಹಾವು ಚೇಳು , ಹುಲಿ ಸೇರಿದಂತೆ ಹಲವು ವನ್ಯ ಪ್ರಾಣಿಗಳು ಈ ಗುಹೆಯಲ್ಲಿ ವಾಸಿಸುತ್ತವೆಯಂತೆ . ಕೆಲವೊಂದು ಬಾರಿ ಇವು ಗುಹೆಯಿಂದ ಹೊರ ಬಂದ ಉದಾಹರಣೆ ಯೂ ಇದೆಯಂತೆ ಇನ್ನು ನಿತ್ಯಪೂಜೆಗಾಗಿ ಗುಹೆಯ ಹೊರ ಭಾಗದಲ್ಲಿ ಗುಡಿಯೊಂದನ್ನು ಸ್ಥಾಪಿಸಲಾಗಿದೆ. ಅಲ್ಲಿ ಶಿವನಿಗೆ ನಿತ್ಯ ಪೂಜೆ ನಡೆಯುತ್ತೆ. ಇದೆಲ್ಲಾ ದೇವಾಲಯದ ಬಗ್ಗೆ ಆದ್ರೆ ಇನ್ನು ಇರೋದು ಎಲ್ಲಿ ಗೊತ್ತಾ ? ಕರ್ನಾಟಕ ಕರಾವಳಿ ಅನ್ನಿಸಿಕೊಂಡಿರೋ ದಕ್ಷಿಣ ಕನ್ನಡದಲ್ಲಿ. ಮಂಗಳೂರಿನಿಂದ ಕಟೀಲಿಗೆ ಹೋಗುವ ದಾರಿಯಲ್ಲಿ ಸಿಗುತ್ತೆ ನೆಲ್ಲಿತೀರ್ಥ. ಬಸ್ ನಲ್ಲಿ ಹೋಗೋರಾದ್ರೆ ಮಂಗಳೂರಿನಿಂದ ಇಲ್ಲಿಗೆ ಬಸ್ ಸೌಕರ್ಯ ಕೂಡಾ ಇದೆ . ಹಾಗಾದ್ರೆ ಒಂದು ಯಾಕೆ ತಡ ಒಂದು ಬಾರಿ ಹೋಗಿ ಬನ್ನಿ.

ಇದನ್ನೂ ಓದಿ : ತೀರ್ಥಸ್ನಾನ ಮಾಡಿದ್ರೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಕರುಣಿಸುತ್ತಾಳೆ ಈ ತಾಯಿ

ಇದನ್ನೂ ಓದಿ : ವರದಾಮೂಲದ ಅಗಸ್ತ್ಯ ತೀರ್ಥದ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರಿಂದ ನೆರವಿಗೆ ಮನವಿ

(cave temple in Nelli Teerta)

Comments are closed.