Janardhan Reddy: ಹೊಸ ಪಕ್ಷ ಘೋಷಿಸಿದ ಜನಾರ್ದನ್‌ ರೆಡ್ಡಿ: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಘೋಷಣೆ

(Janardhan Reddy) ಗಣಿ ಧನಿ ಜನಾರ್ದನ ರೆಡ್ಡಿ ಬಿಜೆಪಿಗೆ ಸವಾಲು ಎಸೆದಿದ್ದಾರೆ. ಮತ್ತೆ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರೆ ಅನ್ನೋ ನಂಬಿಕೆಯಲ್ಲಿದ್ದ ನಿರೀಕ್ಷೆ ಹುಸಿಯಾಗಿದೆ. ರಾಜ್ಯದಲ್ಲಿ ಬಿಜೆಪಿಯ ಪರ್ಯಾಯವಾಗಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವನ್ನು ಅಧೀಕೃತವಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಈ ಪಕ್ಷದ ಅಬ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಜನಾರ್ದನ್‌ ರೆಡ್ಡಿ ತಿಳಿಸಿದ್ದಾರೆ.

ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿದ ಜನಾರ್ದನ್‌ ರೆಡ್ಡಿ (Janardhan Reddy), ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಬಳ್ಳಾರಿ ರಿಪಬ್ಲಿಕ್‌ ಜೊತೆಗೆ ತಾನು ಯಾವುದೇ ತಪ್ಪು ಮಾಡದೆ ಜೈಲಿಗೆ ಸೇರಿದ್ದೆ ಗಣಿ ವಿಚಾರದಲ್ಲಿ ಎಲ್ಲೂ ಕೂಡ ಕ್ರಮವಾಗಿ ಗಣಿಗಾರಿಕೆ ನಡೆಸಿಲ್ಲ. ಸಕ್ರಮ ಗಣಿಗಾರಿಕೆ ಮಾಡಿದರೂ ಕೂಡ ಯುಪಿಎ ಸರ್ಕಾರ ನನ್ನನ್ನ ಬಲವಂತವಾಗಿ ಜೈಲಿಗೆ ಕಳಿಸುವ ಕಾರ್ಯ ಮಾಡಿದೆ. ನ್ಯಾಯಾಲಯದಲ್ಲಿ ಸದ್ಯ ಈ ಕುರಿತು ಪ್ರಕರಣದ ವಿಚಾರಣೆ ನಡಿತಾ ಇದೆ. ಆ ಎಲ್ಲಾ ಪ್ರಕರಣದಿಂದಲೂ ನಾನು ಆರೋಪ ಮುಕ್ತನಾಗಿ ಹೊರಬರುತ್ತೇನೆ. ರಾಜ್ಯದ ಅಭಿವೃದ್ದಿಗೆ ನಾನು ಸಾಕಷ್ಟು ಶ್ರಮವನ್ನು ಪಟ್ಟಿದ್ದೇನೆ. ಮುಂದೆಯೂ ಕೂಡ ನನ್ನ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಗಣಿ ವಿಚಾರದಲ್ಲಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ನನಗೆ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದು ಗೊತ್ತಾಗಿದೆ. ನನ್ನವರು ಅಂತ ನಂಬಿಕೊಂಡವರು ಆ ಸಂದರ್ಭದಲ್ಲಿ ನನಗೆ ಕೈ ಕೊಟ್ಟಿದ್ದರು. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಮಾಡಲಿಕ್ಕೆ ನಾನು ಸಾಕಷ್ಟು ಶ್ರಮ ವಹಿಸಿದ್ದೇನೆ. ಆದರೆ ಯಡಿಯೂರಪ್ಪ ಅವರ ಆಶೀರ್ವಾದದಿಂದ ಮತ್ತೆ ನಾನು ಚುನಾವಣೆ ರಂಗಕ್ಕೆ ಹೊಸ ಪಕ್ಷದ ಮೂಲಕ ಇಳಿತಾ ಇದ್ದೇನೆ. ಬಿಜೆಪಿ ಪಕ್ಷ ನನ್ನ ಉಚ್ಚಾಟನೆ ಮಾಡಿದೆ. ಮತ್ತೆ ಜನರು ಕೂಡ ಜನಾರ್ದನ ರೆಡ್ಡಿ ಬಿಜೆಪಿಯಿಂದಲೇ ಬರ್ತಾರೆ ಅನ್ನೋ ಒಂದು ನಿರೀಕ್ಷೆ ಇತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ ನಾನು ಹೊಸ ಪಕ್ಷವನ್ನು ಘೋಷಣೆ ಮಾಡ್ತಾ ಇದ್ದೇನೆ ಅಂತ ತಿಳಿಸಿದ್ದಾರೆ.

ಇದನ್ನೂ ಓದಿ : Atal Bihari Vajpayee Birth Anniversary : ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ : ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಬಿಜೆಪಿ ನಾಯಕರಿಂದ ಶ್ರದ್ಧಾಂಜಲಿ

ಇದನ್ನೂ ಓದಿ : Karnataka Assembly Election : 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ : ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇಲ್ಲಿದೆ

“ಮೊದಲಿಂದಲೂ ನನ್ನ ಜೀವನ ಪ್ರಾರಂಭ ಮಾಡಿರುವುದು ಒಬ್ಬಂಟಿಯಾಗಿಯೇ. ಯಾವುದೇ ವಿಚಾರವಾಗಿರಲಿ, ನನ್ನ ವೈಯಕ್ತಿಕ ಅಥವಾ ರಾಜಕೀಯ ವಿಚಾರಗಳ ಬಗ್ಗೆ ಯಡಿಯೂರಪ್ಪ ಅವರ ಜೊತೆ ಯಾವ ಕ್ಷಣ ಕೂಡ ಮಾತಾಡಿಲ್ಲ. ಕುಟುಂಬ ರೀತಿಯಲ್ಲಿ ಅವರ ಜೊತೆ ಸಂಬಂಧ ಇತ್ತೇ ವಿನಹ ಈ ಪಕ್ಷದ ವಿಚಾರ ಆಗ್ಲಿ, ಇನೋಂದಾಗ್ಲಿ ಇದು ನನ್ನ ಸ್ವಂತ ವಿಚಾರ, ಇದು ನನ್ನ ಸ್ವಂತ ನಿರ್ಧಾರ” ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.

(Janardhan Reddy) Miner Janardhan Reddy has challenged the BJP. The hope that he will enter the fray from BJP again is false. Kalyan Karnataka Pragati Party has been officially announced as an alternative to BJP in the state.

Comments are closed.