janaspandana program : ಲಂಚದ ಹಣ ಬಳಸಿ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ : ಸಿದ್ದರಾಮಯ್ಯ ಗಂಭೀರ ಆರೋಪ

ಹುಬ್ಬಳ್ಳಿ : janaspandana program : ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ ಜನಸ್ಪಂದ ಕಾರ್ಯಕ್ರಮದ ಕುರಿತು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ಅಡಬಿಟ್ಟಿ ಹಣದಲ್ಲಿ ಮತ್ತು ಲಂಚದ ಹಣದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಸಮಸ್ಯೆಗಳುಂಟಾಗಿದೆ. ಪ್ರವಾಹದಿಂದ ಹಾನಿಯುಂಟಾದ ಪ್ರದೇಶಗಳಿಗೆ ನಾನು ಭೇಟಿ ನೀಡ್ತಿದ್ದೇನೆ . ಸುಮಾರು 7 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಂಗಳೂರಿನಲ್ಲಿಯೂ ಸಹ ಮಳೆಯಿಂದಾಗಿ ಸಾಕಷ್ಟು ಸಮಸ್ಯೆಗಳುಂಟಾಗಿದೆ. ಆದರೆ ಬಿಜೆಪಿಯವರು ಲಂಚ ಹೊಡೆದ ದುಡ್ಡಿನಲ್ಲಿ ಕಾರ್ಯಕ್ರಮ ಮಾಡ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಸ್ಪಂದನೆ ನೀಡುವುದನ್ನು ಬಿಟ್ಟು ವೇದಿಕೆಯಲ್ಲಿ ಡ್ಯಾನ್ಸ್​ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಉಮೇಶ್​ ಕತ್ತಿ ಉತ್ತರ ಕರ್ನಾಟಕದ ರಾಜಕಾರಣಿ ಹಾಗೂ ಅವರದ್ದೇ ಪಕ್ಷದ ಪ್ರಭಾವಿ ರಾಜಕಾರಣ ಕೂಡ ಆಗಿದ್ದವರು. ಉಮೇಶ್​ ಕತ್ತಿ ನಿಧನದ ಬಳಿಕ ಶೋಕಾಚರಣೆ ಮಾಡ್ತೀವಿ ಎಂದು ಹೇಳಿರುವ ಬಿಜೆಪಿ ನಾಯಕರು ಮತ್ತೊಂದೆಡೆ ಡ್ಯಾನ್ಸ್​ ಮಾಡ್ತಿದ್ದಾರೆ. ಬಿಜೆಪಿಯವರಿಗೆ ಜನರ ಮೇಲೆ ಕಾಳಜಿ ಇಲ್ಲ. ಕೇವಲ ಅವರಿಗೆ ದುಡ್ಡು ಹೊಡೆಯೋದ್ರ ಬಗ್ಗೆ ಮಾತ್ರ ಕಾಳಜಿ ಇದೆ. ಪಿಎಸ್ ಐ ಹಗರಣದಲ್ಲಿ ಶಾಸಕ ಬಸವರಾಜ ದಡೇಸಗೂರು ಹಣ ಪಡೆದ ಬಗ್ಗೆ ತಾವೇ ಒಪ್ಪಿಕೊಂಡಿದ್ದಾರೆ . ಈತನ ವಿರುದ್ಧ ಎಫ್​ಐಆರ್​ ದಾಖಲು ಮಾಡಿ ಸೂಕ್ತ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


ಪ್ರಿಯಾಂಕ್​ ಖರ್ಗೆ ಮಾತನಾಡಿದ್ರೆ ನೋಟಿಸ್​ ಕೊಡ್ತಾರೆ. ಆದರೆ ಅವರ ಶಾಸಕ ಲಂಚ ತೆಗೆದುಕೊಂಡಿದ್ದನ್ನು ಸ್ವತಃ ಒಪ್ಪಿಕೊಂಡರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ನಾಯಕರು ಪ್ರತಿ ವಿಚಾರದಲ್ಲಿಯೂ ಸೇಡಿನ ರಾಜಕಾರಣ ಮಾಡುತ್ತಾರೆ. ದಾವಣಗೆರೆಯಲ್ಲಿ ನನ್ನ ಜನ್ಮದಿನದ ಪ್ರಯುಕ್ತ ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು, ಇದಕ್ಕೆ ಪ್ರತ್ಯುತ್ತರವಾಗಿ ಜನಸ್ಪಂದನಾ ಕಾರ್ಯಕ್ರಮ ಮಾಡ್ತಿದ್ದಾರೆ. ನನ್ನ ಕಾರ್ಯಕ್ರಮಕ್ಕೆ ಜನರು ಪ್ರೀತಿಯಿಂದ ಅವರಾಗೆ ಬಂದಿದ್ದರು. ಆದರೆ ಜನಸ್ಪಂದನಾ ಕಾರ್ಯಕ್ರಮಕ್ಕೆ ಜನರನ್ನು ಅವರೇ ದುಡ್ಡು ಕೊಟ್ಟು ಕರೆಸ್ತಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

ಇದನ್ನೂ ಓದಿ : ಹೊಯ್ಸಳ ಕ್ಕೆ ಬಂದ್ರು ಮೇಘನಾ ಸರ್ಜಾ: ಡಾಲಿ ಅಡ್ಡಾದಿಂದ ಹೊರಬಿತ್ತು ಅಪ್ಡೇಟ್

janaspandana program by BJP using bribe money: Siddaramaiah is a serious allegation

Comments are closed.