Government job for Praveen Nettar’s wife :ಪ್ರವೀಣ್ ನೆಟ್ಟಾರ್ ಪತ್ನಿಗೆ ಸರ್ಕಾರಿ ಉದ್ಯೋಗ: ಸಿ.ಎಂ ಬೊಮ್ಮಾಯಿ ಭರವಸೆ

ದೊಡ್ಡಬಳ್ಳಾಪುರ : Government job for Praveen Nettar’s wife : ಕಳೆದ ಜುಲೈ ತಿಂಗಳಲ್ಲಿ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಪತ್ನಿಗೆ ಕೊನೆಗೂ ಸರ್ಕಾರಿ ಉದ್ಯೋಗ ಒಲಿದು ಬಂದಿದೆ. ಇಂದು ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವತಃ ಸಿಎಂ ಅವರೇ ಘೋಷಣೆ ಮಾಡಿದ್ದು,ತನ್ನ ಕಚೇರಿಯಲ್ಲೇ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.ಹೀಗಾಗಿ ಮನೆಯ ಆಧಾರ ಸ್ತಂಭವಾಗಿದ್ದ ಪ್ರವೀಣ್ ನೆಟ್ಟಾರ್ ಮನೆಗೆ ಅವರ ಪತ್ನಿ ಇನ್ನು ಆಧಾರ ಸ್ತಂಭವಾಗಲಿದ್ದಾರೆ.

ಹೌದು..ಕಳೆದ ಜುಲೈ 26 ರ ರಾತ್ರಿ‌ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಪತ್ನಿಗೆ ಸರ್ಕಾರಿ ಕೆಲಸ ನೀಡಲು‌ ಸರ್ಕಾರ ಮುಂದಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಬಿಜೆಪಿ ಯುವ‌ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ‌ ಸಮಿತಿ‌ ಸದಸ್ಯ ಪ್ರವೀಣ್ ನೆಟ್ಟಾರ್ ರನ್ನು ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರು‌ ಬರ್ಬರವಾಗಿ ಕಡಿದು ಹತ್ಯೆ ನಡೆಸಿದ್ರು.ಕೋಳಿ‌ ಅಂಗಡಿ ವ್ಯಾಪಾರ ಮಾಡುತ್ತಿದ್ದ ಪ್ರವೀಣ್ ನನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿದ್ದು,ಈ ಪ್ರಕರಣದ ತನಿಖೆಯನ್ನು ಇದೀಗ ಎನ್ ಐಎ ನಡೆಸುತ್ತಿದೆ.ಹತ್ಯೆ ನಡೆದ ಸಂದರ್ಭದಲ್ಲಿ ಸರ್ಕಾರ ಹಾಗೂ ಸಂಘಟನೆಯ ವಿರುದ್ಧ ತಿರುಗಿಬಿದ್ದ ಪ್ರವೀಣ್ ಕುಟುಂಬಿಕರು‌ ಹಾಗೂ ಸ್ಥಳೀಯರು ಅಂದೇ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲು ಆಗ್ರಹಿಸಿದ್ದರು.ಇದೀಗ ಒಂದೂವರೆ ತಿಂಗಳ ಬಳಿಕ ಇಂದು ದೊಡ್ಡಬಳ್ಳಾಪುರದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಪ್ರವೀಣ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುತ್ತೇನೆ,ತನ್ನ ಕಚೇರಿಯಲ್ಲೇ ಕೆಲಸ ನಿರ್ವಹಿಸಲು ವ್ಯವಸ್ಥೆ ಮಾಡ್ತೇನೆ ಎಂದಿದ್ದಾರೆ.

ಪ್ರವೀಣ್ ನೆಟ್ಟಾರು ತನ್ನ ಇಳಿ ವಯಸ್ಸಿನ‌ ತಂದೆ ತಾಯಿ ಹಾಗೂ ಪತ್ನಿಯ ಜೊತೆ ಸಣ್ಣ ಮನೆಯಲ್ಲಿ‌ ವಾಸವಾಗಿದ್ದು ಪ್ರವೀಣ್ ಅವರೇ ಮನೆಗೆ ಆಧಾರ ಸ್ತಂಭವಾಗಿದ್ದರು.ಅವರ ಹತ್ಯೆಯ ದಿನ‌ ಹಾಗೂ ಅಂತ್ಯಸಂಸ್ಕಾರದ ವೇಳೆಯೂ ಬಿಜೆಪಿ ಸರ್ಕಾರ ಹಾಗೂ ಸಂಘಟನೆಯ ವಿರುದ್ದ ಜನ ತಿರುಗಿ ಬಿದ್ದಿದ್ದರು.ಬಿಜೆಪಿ ನಾಯಕರಿಗೆ ಅಂದೇ ಘೆರಾವು ಹಾಕಲಾಗಿದ್ದು.ಹತ್ಯೆಯ ಮಾರನೇ ದಿನವೇ ಸಿಎಂ‌ಬಸವರಾಜ್ ಬೊಮ್ಮಾಯಿ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ‌ ಹೇಳಿ ಸರ್ಕಾರ ಹಾಗೂ ಪಕ್ಷದ ವತಿಯಿಂದ ಒಟ್ಟು 50 ಲಕ್ಷ ಪರಿಹಾರ ಧನ ನೀಡಿದ್ದರು.ಈ ವೇಳೆ ಸಿಎಂಗೆ ಘೇರಾವು ಹಾಕಿದ್ದ ಸ್ಥಳೀಯರು ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದ್ದು ,ಸಿಎಂ ಅಂದು ಭರವಸೆಯನ್ನೂ‌ ನೀಡಿದ್ದರು.ಹೇಳಿದ ಮಾತಿನಂತೆ ಇಂದು ಸಿಎಂ ಅವರೇ ಅಧಿಕೃತವಾಗಿ ಪ್ರವೀಣ್ ಅವರ ಪತ್ನಿ ನೂತನ ಅವರಿಗೆ ಸರ್ಕಾರಿ ಉದ್ಯೋಗ ನೀಡುವ‌ ಘೋಷಣೆ ಮಾಡಿದ್ದಾರೆ.

ಹಿಂದುತ್ವ ಹಾಗೂ ಬಿಜೆಪಿ ಪಕ್ಷಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯುವಕ ಪ್ರವೀಣ್ ನೆಟ್ಟಾರ್ ನನ್ನು ಬಿಜೆಪಿ ಸರ್ಕಾರ ಕಡೆಗಣಿಸಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೆ ಪ್ರವೀಣ್ ಹತ್ಯೆಯಾದ ಒಂದೇ ದಿನದಲ್ಲಿ ಸ್ವತಃ ಸಿಎಂ ಬೇರ್ಯಾವುದೇ ಕಾರ್ಯಕ್ರಮವಿಲ್ಲದೆ ಪ್ರವೀಣ್ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದ್ದಾರೆ.ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಬಳಿಕ ಪ್ರಕರಣವನ್ನು ಎನ್ ಐಎಗೆ ಹಸ್ತಾಂತರಿಸಿದ್ದಾರೆ.ಇದೀಗ ಜನ ಸ್ಪಂದನ ಕಾರ್ಯಕ್ರಮದಲ್ಲಿ ದೊಡ್ಡಮಟ್ಟದ ನಾಯಕನಲ್ಲದಿದ್ರೂ ಪ್ರವೀಣ್ ನೆಟ್ಟಾರ್ ಫೋಟೊ ಇರಿಸಿ ಗೌರವ ಸಲ್ಲಿಸಲಾಗಿದೆ. ಜೊತೆಗೆ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಿ ನಾವು ಪ್ರವೀಣ್ ಸಾವನ್ನು ಕಡೆಗಣಿಸಿಲ್ಲ ಎಂದು ಬಿಜೆಪಿ ತೋರಿಸಿಕೊಟ್ಟಿದೆ.ಒಟ್ಟಿನಲ್ಲಿ ಬಿಜೆಪಿ ಹೇಳಿದ ಮಾತನ್ನು ಉಳಿಸಿಕೊಂಡಿದೆ.

ಇದನ್ನು ಓದಿ : ಹೊಯ್ಸಳ ಕ್ಕೆ ಬಂದ್ರು ಮೇಘನಾ ಸರ್ಜಾ: ಡಾಲಿ ಅಡ್ಡಾದಿಂದ ಹೊರಬಿತ್ತು ಅಪ್ಡೇಟ್

ಇದನ್ನೂ ಓದಿ : janaspandana program :ಲಂಚದ ಹಣ ಬಳಸಿ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ : ಸಿದ್ದರಾಮಯ್ಯ ಗಂಭೀರ ಆರೋಪ

Government job for Praveen Nettar’s wife: CM Bommai promises

Comments are closed.