Janaspandana program :ಸಾಕಷ್ಟು ವಿಘ್ನಗಳ ಬಳಿಕ ನಾಳೆ ನೆರವೇರಲಿದೆ ಬಿಜೆಪಿಯ ‘ಜನಸ್ಪಂದನ’ ಕಾರ್ಯಕ್ರಮ

ದೊಡ್ಡಬಳ್ಳಾಪುರ : Janaspandana program : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಏಳೆಂಟು ತಿಂಗಳಷ್ಟೇ ಬಾಕಿಯಿದೆ. ಉಭಯ ಪಕ್ಷಗಳು ಸಮಾವೇಶಗಳನ್ನು ಆಯೋಜಿಸುವ ಮೂಲಕ ಪಕ್ಷ ಬಲವರ್ಧನೆಯ ಕೆಲಸವನ್ನು ಮಾಡುತ್ತಿದೆ.‌ ಬಿ.ಜೆ.ಪಿ ಯಲ್ಲಿ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ‌ಕಡಲನಗರಿ ಮಂಗಳೂರಿಗೆ ಆಗಮಿಸಿ ಅಧಿಕೃತ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆಗೆ ಕಾರ್ಯಕರ್ತರಲ್ಲಿ ಹುರುಪನ್ನು ಮೂಡಿಸಿದ್ದರು. ರಾಜ್ಯ ಕೋರ್ ಕಮಿಟಿ ನಾಯಕರ ಜೊತೆ ಅನೌಪಚಾರಿಕ ಸಭೆ ನಡೆಸುವ ಮೂಲಕ‌ ಚುನಾವಣೆಗೆ ಸಿದ್ದರಾಗಿ ಎಂಬ ಸಂದೇಶ ನೀಡಿದ್ದಾರೆ‌. ಇದರ ಬೆನ್ನಲ್ಲೇ ಇದೀಗ ನಾಳೆ ದೊಡ್ಡಬಳ್ಳಾಪುರದಲ್ಲಿ ಬಿ.ಜೆ.ಪಿ ಜನಸ್ಪಂದನ‌ ಸಮಾವೇಶ ನಡೆಸಲಿದೆ.

ರಾಜ್ಯ ಬಿ.ಜೆ.ಪಿ ಸರ್ಕಾರದ ಮೂರು ವರ್ಷದ ಸಾಧನೆಗಳನ್ನು ಜನತೆಯ ಮುಂದಿಡುವ ಜನಸ್ಪಂದನ ಸಮಾವೇಶ ಇದಾಗಿದ್ದು ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವನ್ನು ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉದ್ಘಾಟಿಸಲಿದ್ದಾರೆ. ರಾಜ್ಯ ಬಿ.ಜೆ.ಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಅರುಣಾ, ಸಿ.ಎಂ ಬಸವರಾಜ್ ಬೊಮ್ಮಾಯಿ, ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಸೇರಿದಂತೆ ಹಲವು ಸಚಿವರು, ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಲು ಕರೆ ನೀಡಿದ್ದಾರೆ. ಹೀಗಾಗಿ ರಾಜ್ಯ ಬಿ.ಜೆ.ಪಿ ಮಿಷನ್-150 ಗುರಿ‌ ಸಾಧನೆಗೆ ಪೂರಕವಾಗಿ ಆರು ಕಡೆ ಜನಸ್ಪಂದನ ಸಮಾವೇಶ ಹಮ್ಮಿಕೊಳ್ಳುತ್ತಿದೆ.

ಒಟ್ಟು ಮೂರು ತಿಂಗಳಲ್ಲಿ ಬಿ.ಜೆ.ಪಿ ಪರ ವಾತಾವರಣ ಸೃಷ್ಟಿಸುವ ಲೆಕ್ಕಾಚಾರದಲ್ಲಿ ಬಿ.ಜೆ.ಪಿ ಈ ಜನಸ್ಪಂದನಾ ಸಮಾವೇಶ ಆಯೋಜನೆ ಮಾಡುತ್ತಿದೆ. ಈ ಸಮಾವೇಶದ ಮೂಲಕ ಯಾವ ರೀತಿಯ ಸಂದೇಶ ರವಾನೆಯಾಗಲಿದೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನು ಓದಿ : rain damage in Bangalore: ರಾಜ್ಯ ರಾಜಧಾನಿಯಲ್ಲಿ ನೆರೆ ಹಾನಿ ಅಭಿಪ್ರಾಯ ಸಂಗ್ರಹಕ್ಕೆ ಕಾಂಗ್ರೆಸ್​ನಿಂದ ಸಮಿತಿ ರಚನೆ

ಇದನ್ನೂ ಓದಿ : Kannada Bigg Boss Season 9:ಟಿವಿಯಲ್ಲಿ ಪ್ರಸಾರವಾಗಲಿದೆ ಕನ್ನಡದ ಬಿಗ್‌ ಬಾಸ್‌ ಸೀಸನ್‌ 9

Janaspandana program will be held in Doddaballapur tomorrow

Comments are closed.