Kannada Bigg Boss Season 9:ಟಿವಿಯಲ್ಲಿ ಪ್ರಸಾರವಾಗಲಿದೆ ಕನ್ನಡದ ಬಿಗ್‌ ಬಾಸ್‌ ಸೀಸನ್‌ 9

(Kannada Bigg Boss Season 9)ಕನ್ನಡ ಕಿರುತೆರೆಯಲ್ಲಿ ಸಂಚಲನ ಮೂಡಿಸಿರುವ (Bigg Boss OTT Season 1) ಬಿಗ್‌ಬಾಸ್‌ ಓಟಿಟಿ ಸೀಸನ್‌ 1 ಅಂತಿಮ ಹಂತವನ್ನು ತಲುಪಿದೆ. ಈಗಾಗಲೇ ಅಂತಿಮ ಹಂತದಲ್ಲಿ ಒಟ್ಟು 9 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ನಡುವಲ್ಲೇ ಬಿಗ್‌ ಬಾಸ್‌ ಸೀಸನ್‌ 9 ರ ಪ್ರೋಮೋ ವನ್ನು ಬಿಡುಗಡೆ ಮಾಡಿದೆ ಕಲರ್ಸ್‌ ಕನ್ನಡ ವಾಹಿನಿ. ಇನ್ನು ಪ್ರೋಮೋ ನೋಡಿದ ಬಿಗ್‌ಬಾಸ್‌ ಪ್ರೇಮಿಗಳು ಖುಷಿಪಟ್ಟಿದ್ದಾರೆ. ಜೊತೆಗೆ ಬಿಗ್‌ಬಾಸ್‌ ಶೋವನ್ನು ಟಿವಿಯಲ್ಲಿ ಪ್ರಸಾರ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

ಬಿಗ್‌ ಬಾಸ್‌ ರಿಯಾಲಿಟಿ ಶೋ ರಿಯಾಲಿಟಿ ಶೋಗೆ ಬಿಗ್‌ ಬಾಸ್‌ ಆಗಿದೆ. ಇನ್ನೂ ಕನ್ನಡದ ಬಿಗ್‌ ಬಾಸ್‌ ಸೀಸನ್‌ 9 ಶೋ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸಲದ ಪ್ರೋಮೋದಲ್ಲಿ ಬಿಗ್‌ ಬಾಸ್‌ ಕಣ್ಣಿನ ಚಿಹ್ನೆ ಬದಲಾಗಿರುವುದು ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಬಿಗ್‌ ಬಾಸ್‌ ಓಟಿಟಿ ಸೀಸನ್‌ ನ್ನು ಮುಕ್ತಯಾಗೊಳಿಸಿದ ಬೆನ್ನಲ್ಲೇ ಟಿವಿ ಬಿಗ್‌ ಬಾಸ್‌ ಒಂಬತ್ತನೇ ಆವೃತ್ತಿ ಆರಂಭವಾಗಲಿದೆ. ಇದು ಬಿಗ್ ಬಾಸ್‌ ಫ್ಯಾನ್‌ ಗಳಿಗೆ ಖುಷಿ ಕೊಟ್ಟಿದೆ. ಈ ಸಲದ ಟಿವಿ ಬಿಗ್‌ ಬಾಸ್‌ ಶೋನಲ್ಲಿ ಬಿಗ್‌ ಬಾಸ್‌ ಓಟಿಟಿ ಸೀಸನ್‌ ನಲ್ಲಿ ಭಾಗವಹಿಸುತ್ತಿರುವ ಕೆಲವು ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ (Bigg Boss OTT Season 1)ಬಿಗ್‌ ಬಾಸ್‌ ಓಟಿಟಿಯಿಂದ ಯಾರೆಲ್ಲಾ ಟಿವಿ ಬಿಗ್‌ ಬಾಸ್‌ ಸೀಸನ್‌ ಗೆ ಬರುತ್ತಾರೆ ಎನ್ನುವುದು ಕೂತುಹಲಕ್ಕೆ ದಾರಿ ಮಾಡಿಕೊಟ್ಟಿದೆ. ಹಾಗೆಯೇ ಕನ್ನಡದ ಬಿಗ್‌ ಬಾಸ್‌ ಸೀಸನ್‌ 9 ಟಿವಿಯಲ್ಲಿ ಯಾವಾಗ ಪ್ರಸಾರವಗುವುದೆಂದು ಇನ್ನೂ ಬಹಿರಂಗಪಡಿಸಲಿಲ್ಲ.

ಕಲರ್ಸ್‌ ಕನ್ನಡವು ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಪ್ರೋಮೊವನ್ನು ನೋಡಿ ಕಾಮೆಂಟ್‌ ಮಾಡಿದ ಕೆಲವೊಂದು ಪ್ರೇಕ್ಷಕರು ಕಾಫಿನಾಡು ಚಂದುವನ್ನು ಟಿವಿ ಸೀಸನ್ ನ ಸ್ಪರ್ಧಿಯಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಕೋರಿಕೊಂಡಿದ್ದಾರೆ. ತನ್ನದೇ ವಿಭಿನ್ನ ರೀತಿಯ ಹುಟ್ಟು ಹಬ್ಬದ ಶುಭಾಶಯವನ್ನು ಕೋರುವ ಹಾಡನ್ನು ಮಾಡುವುದರ ಮೂಲಕ ವೈರಲ್‌ ಆದ ಕಾಫಿನಾಡು ಚಂದುವನ್ನು ಬಿಗ್‌ ಬಾಸ್‌ ಅಲ್ಲಿ ನೋಡಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಈ ಹಿಂದೆ ಓಟಿಟಿ ಸೀಸನ್‌ ಗೆ ಆಯ್ಕೆ ಮಾಡಿಕೊಳ್ಳದ ಕಾರಣ ಟಿವಿ ಬಿಗ್‌ ಬಾಸ್‌ ಸೀಸನ್‌ ಅಲ್ಲಿ ಸ್ಪರ್ಧಿಯಾಗಿಸಿಕೊಳ್ಳುವಂತೆ ಪ್ರೇಕ್ಷಕರು ಕಲರ್ಸ್‌ ಕನ್ನಡಕ್ಕೆ ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಪುಷ್ಪ2 ಸಿನಿಮಾದಲ್ಲಿ ಸಾಯಿ ಪಲ್ಲವಿ

ಇದನ್ನೂ ಓದಿ: ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ಗುಂಡಮ್ಮ: ಹಿರೋಯಿನ್ ಸ್ಥಾನಕ್ಕೆ ಭಡ್ತಿ ಪಡೆದ ಗೀತಾ ಭಟ್

ಇದನ್ನೂ ಓದಿ: ತಂದೆಯ ಸಿನಿಮಾವನ್ನು ರಿಕ್ರಿಯೇಟ್​ ಮಾಡಲು ಬಯಸಿದ್ದರಂತೆ ಪುನೀತ್​ ರಾಜ್​ಕುಮಾರ್​​

ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಸ್ಪರ್ಧಿಗಳಾಗಿ ಯಾರೆಲ್ಲಾ ಇರಲಿದ್ದಾರೆ ಅನ್ನೋ ಕುತೂಹಲ ಸೃಷ್ಟಿಯಾಗುತ್ತಿದೆ. ಈಗಾಗಲೇ ಒಟಿಟಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ ಸೆಲೆಬ್ರಿಟಿಗಳನ್ನೇ ಸೆಲಕ್ಟ್‌ ಮಾಡಲಾಗಿತ್ತು. ಇದೀಗ ಮುಂದಿನ ಆವೃತ್ತಿ ಹೇಗಿರಲಿದೆ ಅನ್ನೋ ಗುಟ್ಟನ್ನ ಬಿಗ್‌ ಬಾಸ್‌ ಬಿಟ್ಟುಕೊಟ್ಟಿಲ್ಲ.

Kannada Bigg Boss Season 9

Comments are closed.