Rajasthan earthquake : ರಾಜಸ್ಥಾನದಲ್ಲಿ ಭೂಕಂಪನ ಭೀತಿ..!

ಜೈಪುರ : ರಾಜಸ್ಥಾನದಲ್ಲಿ ತಡರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪನ ಸಂಭವಿಸಿದೆ  (rajasthan earthquake). ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ.

ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ವಾಯವ್ಯ ಭಾಗದಲ್ಲಿ ಈ ಭೂ ಕಂಪನ ಸಂಭವಿಸಿದೆ. ಸೋಮವಾರ ಬೆಳಗಿನ ಜಾವ 2 ಗಂಟೆ 1 ನಿಮಿಷಕ್ಕೆ ಭೂ ಕಂಪನ ಸಂಭವಿಸಿದೆ. ಬಿಕಾನೇರ್ ನಿಂದ ವಾಯವ್ಯ ಭಾಗದ ಕಡೆ 236 ಕಿಲೋ ಮೀಟರ್ ದೂರದಲ್ಲಿ ಭೂ ಕಂಪನದ ಕೇಂದ್ರ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.

ಎರಡು ದಿನದ ಹಿಂದಷ್ಟೇ ಉತ್ತರ ಪ್ರದೇಶದ ರಾಜಧಾನಿ ಲಖನೌ ಸೇರಿದಂತೆ ಹಲವಡೆ ಭೂ ಕಂಪನದ ತೀವ್ರತೆ ದಾಖಲಾಗಿತ್ತು. ಶನಿವಾರ ರಾತ್ರಿ ಲಖನೌದ ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ 139 ಕಿಲೋ ಮೀಟರ್ ದೂರದ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಭೂ ಕಂಪನದ ಕೇಂದ್ರ ದಾಖಲಾಗಿತ್ತು. ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು. ರಾತ್ರಿವೇಳೆ ಭೂಮಿ ಕಂಪಿಸಿದ ಅನುಭವ ವಾಗ್ತಿದ್ದಂತೆ, ಮನೆಯಲ್ಲಿ ಮಲಗಿದ್ದವರು ಹೊರಗೆ ಓಡಿ ಬಂದಿದ್ರು. ಆತಂಕದಲ್ಲೇ ಕಾಲ ಕಳೆದಿದ್ರು. ಉತ್ತರ ಪ್ರದೇಶ ಮಾತ್ರವಲ್ಲದೇ ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲೂ ಶನಿವಾರ ಭೂಮಿ ಕಂಪನ ಸಂಭವಿಸಿತ್ತು. ಆದ್ರೆ ಯಾವುದೇ ಹಾನಿ ಆಗಿರಲಿಲ್ಲ.. ಇದೀಗ ಮತ್ತೆ ರಾಜಸ್ಥಾನ ಸೇರಿ ದೇಶದ ಹಲವೆಡೆ ಭೂಮಿ ಕಂಪಿಸಿದ ಅನುಭವ ವಾಗಿದೆ. ರಿಕ್ಟರ್ ಮಾಪಕದಲ್ಲಿ 4.1ರಷ್ಟು ತೀವ್ರತೆಯೂ ದಾಖಲಾಗಿದೆ. ಹೀಗಾಗಿ ಜನರ ಆತಂಕ ಇಮ್ಮಡಿ ಗೊಂಡಿದೆ.

ಉತ್ತರ ಪ್ರದೇಶದಲ್ಲೂ ನಡುಗಿತ್ತು ಭೂಮಿ

ಲಖನೌ : ಕಳೆದ ಎರಡು ದಿನಗಳ ಹಿಂದೆಯಷ್ಟೆ ಉತ್ತರ ಪ್ರದೇಶದ ರಾಜಧಾನಿ ಲಖನೌ ಸೇರಿದಂತೆ ಹಲವಡೆ ಭೂ ಕಂಪನ ಸಂಭವಿಸಿದೆ. (UP Earthquake) ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿತ್ತು.ಕಳೆದ ಶನಿವಾರ ರಾತ್ರಿ 1 ಗಂಟೆ 12 ನಿಮಿಷಕ್ಕೆ ಲಖನೌದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾತ್ರಿವೇಳೆ ಭೂಮಿ ಕಂಪಿಸಿದ ಅನುಭವ ವಾಗ್ತಿದ್ದಂತೆ, ಮನೆಯಲ್ಲಿ ಮಲಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಕೆಲವೆಡೆ ಜನರು ಮೈದಾನಗಳಲ್ಲೇ ರಾತ್ರಿಯಿಡಿ ಆತಂಕದಲ್ಲೇ ಕಾಲ ಕಳೆದಿದ್ದಾರೆ ಅಂತಾ ಗೊತ್ತಾಗಿದೆ.

ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ 139 ಕಿಲೋ ಮೀಟರ್ ದೂರದ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಭೂ ಕಂಪನದ ಕೇಂದ್ರ ದಾಖಲಾಗಿದೆ. ಹೀಗೆಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ National Center for Seismology ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಭೂಕಂಪನ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದ್ರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲಿ, ಆಸ್ತಿ ನಾಶವಾಗಲಿ ಆಗಿಲ್ಲ ಎಂದು ಭೂಕಂಪನ ಶಾಸ್ತ್ರದ ಕೇಂದ್ರ ತಿಳಿಸಿದೆ.

ಇದನ್ನೂ ಓದಿ : Siddaramaiah Private Security : ಮೊಟ್ಟೆ ಪ್ರಕರಣದ ಬಳಿಕ ಫುಲ್ ಅಲರ್ಟ್: ಖಾಸಗಿ ಭದ್ರತೆ ಪಡೆಯಲು ಸಿದ್ದರಾಮಯ್ಯ ಪ್ಲ್ಯಾನ್

ಇದನ್ನೂ ಓದಿ : RCB coach Sridharan Sriram : ಆರ್‌ಸಿಬಿ ಮಾಜಿ ಕೋಚ್ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸೇರ್ಪಡೆ

rajasthan earthquake fear Rajasthan National Center for Seismology

Comments are closed.