Mallikarjun Kharge Next CM : ಕರ್ನಾಟಕದಲ್ಲಿ ಬಾರಿ ಅತಂತ್ರ ವಿಧಾನಸಭೆ : ಜೆಡಿಎಸ್‌ ಜೊತೆ ಸಂಘರ್ಷ ಬೇಡ ಎಂದ ಹೈಕಮಾಂಡ್, ಖರ್ಗೆ ಸಿಎಂ ?

ಬೆಂಗಳೂರು : (Mallikarjun Kharge Next CM) ರಾಜ್ಯದಲ್ಲಿ ಸದ್ದಿಲ್ಲದೇ 2023 ರ ವಿಧಾನಸಭಾ ಚುನಾವಣೆಯ (Karnataka Assembly election 2023) ಸಿದ್ಧತೆ ನಡೆದಿದೆ. ರಾಜ್ಯದಲ್ಲಿ ಪ್ರಭಲವಾಗಿರೋ ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯೋ ಕನಸಿನಲ್ಲಿದೆ. ಈ ಮಧ್ಯೆ ಈಗಾಗಲೇ ತೆರೆ ಮರೆಯಲ್ಲೇ ಚುನಾವಣೆಗೆ ಸಮೀಕ್ಷೆ ನಡೆಸಿರೋ ಹಲವು ಸಮೀಕ್ಷಾ ತಂಡಗಳು ಮುಂದಿನ ವಿಧಾನ ಸಭಾ ಚುನಾವಣೆಯಲ್ಲೂ ಅತಂತ್ರ ಸರ್ಕಾರದ ಎಚ್ಚರಿಕೆ‌ ನೀಡಿದ್ದಾರೆ.

ಇನ್ನೂ ಸಮೀಕ್ಷಾ ತಂಡಗಳು ನೀಡಿದ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಹೈ ಅಲರ್ಟ್ ಆಗಿದ್ದು, ಆಂತರಿಕ ಕಲಹಗಳನ್ನು ಬದಿಗೊತ್ತಿ ಮುಂದಿನ‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವತ್ತ ತನ್ನ ಗಮನ ಹರಿಸಿದೆ. ಮಾತ್ರವಲ್ಲ. ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ಕೂಡ ಎಚ್ಚರಿಕೆಯನ್ನು ನೀಡಿದ್ದು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಇನ್ನೂ ತನ್ನ ಪ್ರಭಾವ ಉಳಿಸಿಕೊಂಡಿರೋ ಜೆಡಿಎಸ್ ಜೊತೆ ಕಹಲಕ್ಕೆ ಆಸ್ಪದ ಕೊಡದಂತೆ ರಾಜಕೀಯ ಮಾಡಿಕೊಂಡು ಹೋಗಲು ಸೂಚಿಸಿದೆ ಎನ್ನಲಾಗ್ತಿದೆ.

ಇದಕ್ಕೆ ಕಾರಣವೇ ಆಂತರಿಕ ಸಮೀಕ್ಷೆ. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಮತ್ತೆ ಅತಂತ್ರ ವಿಧಾನಸಭೆ ರಚನೆಯಾಗಲಿದೆ. ಈ ವೇಳೆ ಮತ್ತೆ ಅಲ್ಪಸ್ವಲ್ಪ ಶಾಸಕರ ಜೊತೆ ಗೆದ್ದು ಬರುವ ಮಾಜಿಸಿಎಂ ಕುಮಾರಸ್ವಾಮಿ ಮತ್ತೆ ಕಿಂಗ್ ಮೇಕರ್ ಆಗುತ್ತಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಜೆಡಿಎಸ್ ಜೊತೆ ಮೃದುವಾಗಿ ನಡೆದುಕೊಳ್ಳುವಂತೆ ಹೈಕಮಾಂಡ್ ನಿಂದ ಸೂಚನೆ ಬಂದಿದೆಯಂತೆ. ಇನ್ನೊಂದು ಮೂಲಗಳ ಪ್ರಕಾರ ರಾಜ್ಯದಲ್ಲಿ 2023 ರಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರವೇ ರಚನೆಯಾಗಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಅಗತ್ಯ ಬಿದ್ದರೇ ಒಂದಾಗಿ ಸರ್ಕಾರ ನಡೆಸೋ ಲೆಕ್ಕಾಚಾರದಲ್ಲಿದ್ದು, ಒಂದೊಮ್ಮೆ ಹೀಗೆ ಮತ್ತೊಮ್ಮೆ ಸರ್ಕಾರ ರಚನೆಯಾದರೇ ಸಿದ್ಧರಾಮಯ್ಯನವರನ್ನು ಮೂಲೆಗುಂಪು ಮಾಡಿ ದಲಿತ ಸಿಎಂ ಬೇಡಿಕೆಯನ್ನು ಈಡೇರಿಸಲು ಮಲ್ಲಿಕಾರ್ಜುನ್ ಖರ್ಗೆಯವರನ್ನು ಸಿಎಂ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿದೆ.

ಹಿಂದಿನ‌ ಭಾರಿ ರಚನೆಯಾದ ಸಮ್ಮಿಶ್ತ ಸರ್ಕಾರ ಪತನಕ್ಕೆ ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯನವರ ನಡುವಿವ ಹೊಂದಾಣಿಕೆಯ ಕೊರತೆಯೇ ಕಾರಣವಾಗಿತ್ತು. ಅಲ್ಲದೇ ಒಂದು ಹಂತದಲ್ಲಿ ಸರ್ಕಾರ ಪತನಕ್ಕೂ ಸಿದ್ಧು ಕಾರಣವಾದ್ರು ಅನ್ನೋ ಮಾತಿದೆ. ಹೀಗಾಗಿ ಈ ಭಾರಿ ಅಂತಹ ಯಾವುದೇ ಸಮಸ್ಯೆಗಳಿಗೆ ಆಸ್ಪದ ಕೊಡದಂತೆ ಖರ್ಗೆ ನಾಯಕತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರ ಪಡೆಯುವ ರಣತಂತ್ರ ಹೂಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲೂ ಚುನಾವಣೋತ್ತರ ಸಮೀಕ್ಷೆಗಳೇ ಬಹುತೇಕ ನಿಜವಾಗಿದ್ದವು. ಹೀಗಾಗಿ ಈ ಭಾರಿಯೂ ಚುನಾವಣೋತ್ತರ ಸಮೀಕ್ಷೆಗಳು ಬಲ ಪಡೆದುಕೊಂಡಿದ್ದು, ಕಾಂಗ್ರೆಸ್ ಸಮೀಕ್ಷೆ ಆಧರಿಸಿ ತನ್ನ ರಣತಂತ್ರ ಹೂಡಲು ಸಿದ್ಧತೆ ಮಾಡಿ ಕೊಳ್ಳುತ್ತಿದೆ. ಹೀಗಾಗಿ ಈ ಭಾರಿಯೂ ಎರಡು ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯ ಎಂಬ ಸಂಗತಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ : Donkey Milk: ಕ್ಷೀರ ಕ್ರಾಂತಿಯತ್ತ ಕತ್ತೆ ಹಾಲು!!

ಇದನ್ನೂ ಓದಿ : Red orange Alert : ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ: ರೆಡ್,ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

Karnataka Assembly election 2023, High command Direction about JDS, Mallikarjun Kharge Next CM

Comments are closed.