Cabinet expansion : ಸಚಿವ ಸಂಪುಟ ವಿಸ್ತರಣೆಗೆ ಮುಗಿಯದ ಕಂಟಕ : ಈಗ ಬಿಬಿಎಂಪಿ ಎಲೆಕ್ಷನ್ ಅಡ್ಡಿ

ಬೆಂಗಳೂರು : ಸದ್ಯ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಈಗ ಬಿಬಿಎಂಪಿ ಚುನಾವಣೆ ಸವಾಲು ಎದುರಾಗಿದೆ. ಹೀಗಾಗಿ ಸದ್ಯ ರಾಜ್ಯದಲ್ಲಿ 224 ಕ್ಷೇತ್ರ ಗೆಲ್ಲೋ ಕನಸಿನಲ್ಲಿದ್ದ ಸರ್ಕಾರ ಸದ್ಯ ಬಿಬಿಎಂಪಿಯ ೧೯೮ ವಾರ್ಡ್ ಮೇಲೆ ಗಮನ ಹರಿಸಲು ಮುಂದಾಗಿದ್ದು ಈ ಹೊತ್ತಿನಲ್ಲಿ ಸಂಪುಟ ವಿಸ್ತರಣೆಯೆಂಬ ಜೇನುಗೂಡಿಗೆ ಕಲ್ಲೆಸೆಯುವ ಸಾಹಸವನ್ನು ಬಿಜೆಪಿ ಹಾಗೂ ಬೊಮ್ಮಾಯಿ ಮಾಡೋದು ಅನುಮಾನ ಎನ್ನಲಾಗ್ತಿದೆ. ಹೀಗಾಗಿ ಈ ಭಾರಿಯೂ ಸಂಪುಟ ವಿಸ್ತರಣೆ (Cabinet expansion) ಅನುಮಾನ ಎನ್ನಲಾಗ್ತಿದೆ.

ಹೌದು, ಕಳೆದ ಒಂದು ವರ್ಷದಿಂದ ಇವತ್ತು ನಾಳೆ ಮುಂದಿನ ವಾರ,ಮುಂದಿನ ತಿಂಗಳು ಎಂದು ಮುಂದೂಡಿಕೆಯಾಗುತ್ತಲೇ ಇತ್ತು ಸಚಿವ ಸಂಪುಟ ವಿಸ್ತರಣೆ. ಇನ್ನೇನು ಮೇ 10 ರಂದು ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆಯ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆದೇ ಹಿಂತಿರುಗುತ್ತಾರೆ ಎಂದು ನೀರಿಕ್ಷಿಸಲಾಗಿತ್ತು. ಆದರೆ ಈ ಸಚಿವ ಸಂಪುಟ ವಿಸ್ತರಣೆಯ ನೀರಿಕ್ಷೆಯಲ್ಲಿದ್ದ ಬಿಜೆಪಿ ನಾಯಕರಿಗೆ ಸುಪ್ರೀಂ ಕೋರ್ಟ್ ಅನಿರೀಕ್ಷಿತವಾಗಿ ಶಾಕ್ ನೀಡಿದ್ದು ಬಿಬಿಎಂಪಿ ಚುನಾವಣೆ ನಡೆಸುವಂತೆ ಸೂಚಿಸಿದೆ. ಸದ್ಯದ ಮಟ್ಟಿಗೆ ಬಿಜೆಪಿ ಪಾಲಿಗೆ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುವಷ್ಟೇ ಮಹತ್ವದ್ದು ಬಿಬಿಎಂಪಿಯಲ್ಲೂ ಅಧಿಕಾರದ ಗದ್ದುಗೆ ಏರೋದು.‌ಹೀಗಾಗಿ ಸದ್ಯಕ್ಕೆ ಬಿಜೆಪಿಯ ಮೊದಲ ಆದ್ಯತೆ ಬಿಬಿಎಂಪಿ ಚುನಾವಣೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಈಗ ಸಿಎಂ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಪಕ್ಕಕ್ಕಿಟ್ಟು ಬಿಬಿಎಂಪಿ ಚುನಾವಣೆಯ ಮೇಲೆ ಗಮನ ಹರಿಸಲಿದ್ದಾರಂತೆ.

ಇದು ಬೊಮ್ಮಾಯಿ ನಾಯಕತ್ವದಲ್ಲಿ ನಡೆಯೋ ಮೊದಲ ಚುನಾವಣೆ. ಈ ಚುನಾವಣೆಯನ್ನು ಬಿಜೆಪಿ ಗೆದ್ದರೇ, ಬೊಮ್ಮಾಯಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಂತಾಗಲಿದೆ. ಅಲ್ಲದೇ ಆ ಫಲಿತಾಂಶ ರಾಜ್ಯದ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಹೀಗಾಗಿ ಸದ್ಯ ಬೊಮ್ಮಾಯಿ ಸಂಪುಟ ವಿಸ್ತರಣೆಯ ರಾಮಾಯಣವನ್ನು ಬಿಟ್ಟು ಬಿಬಿಎಂಪಿ ಚುನಾವಣೆಯತ್ತ ಗಮನ ಹರಿಸಲಿದ್ದು, ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ಬೆಂಗಳೂರಿನ ಶಾಸಕರು,ಸಂಸದರು ಹಾಗೂ ಮಾಜಿ ಕಾರ್ಪೋರೇಟರ್ ಗಳ ಜೊತೆ ಸಭೆ ನಡೆಸಲಿದ್ದಾರಂತೆ.

ಈಗ ಸಂಪುಟ ವಿಸ್ತರಣೆಗೆ ಕೈಇಟ್ಟು ಒಂದೊಮ್ಮೆ ಬೆಂಗಳೂರಿನ ಶಾಸಕರು ಮುನಿಸಿಕೊಂಡರೇ ಮತ್ತೆ ಬಿಬಿಎಂಪಿ ಎಲೆಕ್ಷನ್ ಮೇಲೆ ಇದರ ಪ್ರಭಾವವಾಗುತ್ತೆ. ಹೀಗಾಗಿ ಈಗ ಸಂಪುಟ ವಿಸ್ತರಣೆಯ‌ಸಹವಾಸವೇ ಬೇಡ ಎಂದು ಬಿಜೆಪಿ ಹೈಕಮಾಂಡ್ ಕೂಡ ನಿರ್ಧರಿಸಿದೆಯಂತೆ. ಹೀಗಾಗಿ ಈ ಸರ್ಕಾರದ ಅವಧಿಯಲ್ಲಿ ಸಚಿವರಾಗೋ ಶಾಸಕರು ಕನಸು ಕೇವಲ ಕನಸಾಗಿಯೇ ಉಳಿಯಲಿದೆ ಎನ್ನಲಾಗ್ತಿದ್ದು, ಮತ್ತೊಮ್ಮೆ ಸಂಪುಟ ಸರ್ಕಸ್ ಗೆ ವಿಘ್ನ ಎದುರಾಗಿದೆ.

ಇದನ್ನೂ ಓದಿ : School Reopen : ಮೇ 16 ರಿಂದ ಶಾಲೆಗಳು ಆರಂಭವಾಗುತ್ತಾ ? ಖಾಸಗಿ ಒತ್ತಡಕ್ಕೆ ಮಣಿಯುತ್ತಾ ಸರಕಾರ

ಇದನ್ನೂ ಓದಿ : MLC Election : ಎಂಎಲ್​ಸಿ ಚುನಾವಣೆಗೆ ಮುಹೂರ್ತ ಫಿಕ್ಸ್​ : ಜೂ.3ರಂದು ಚುನಾವಣೆ, ಅಂದೇ ಫಲಿತಾಂಶ

Karnataka Cabinet expansion is now disrupting the BBMP election

Comments are closed.