Rohini Sindoori : ದಕ್ಷ ಆಡಳಿತ ಹಾಗೂ ಸ್ನಿಗ್ಧ ಸೌಂದರ್ಯದ ಮೂಲಕ ಗಮನ ಸೆಳೆದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ‌

ಮೈಸೂರು : ಕಳೆದ‌ ಕೆಲ ತಿಂಗಳಿನಿಂದ ಒಂದಿಲ್ಲೊಂದು ಕಾರಣಕ್ಕೆ ಮೈಸೂರಿನ ಎಮ್ ಎಲ್ ಎ ಹಾಗೂ ಎಂಪಿ ಕೆಂಗಣ್ಣಿಗೆ ಗುರಿಯಾಗು ತ್ತಲೇ ಇರುವ ರೋಹಿಣಿ ಸಿಂಧೂರಿ ಡೋಂಟ್ ಕ್ಯಾರ್ ಪ್ರವೃತ್ತಿಯಿಂದ ದಕ್ಷ ಆಡಳಿತ ನೀಡುತ್ತ ಬಂದಿದ್ದಾರೆ.

ಮೂಲತಃ ನೆರೆಯ ಆಂಧ್ರಪ್ರದೇಶದವರಾದ ರೋಹಿಣಿ ಸಿಂಧೂರಿ ತೆಲಂಗಾಣದಲ್ಲಿ 1984 ರಲ್ಲಿ ಜನಿಸಿದರು. ಕೆಮಿಕಲ್ ಇಂಜಿನೀಯ ರಿಂಗ್ ಪದವಿ ಪಡೆದ ರೋಹಿಣಿ ಸಿವಿಲ್ ಸರ್ವಿಸ್ ನಲ್ಲಿ ಹೆಸರು ಪಡೆದಿದ್ದಾರೆ.

2009 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ರೋಹಿಣಿ, ಮೊದಲು ತುಮಕೂರಿನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಸೇವೆ ಆರಂಭಿಸಿದರು‌.

https://kannada.newsnext.live/meghanaraj-special-gift-chiranjeevi-sarja/

ಸೇವೆ ಆರಂಭಿಸಿದಾಗಿನಿಂದಲೂ ಜನಪರ ಕಾಳಜಿ ಹಾಗೂ ಗ್ರಾಮೀಣ ಭಾಗಕ್ಕೆ ಉತ್ತಮ ಸೇವೆ ನೀಡುವ ಮೂಲಕ ಗುರುತಿಸಿಕೊಂಡ ರೋಹಿಣಿ, ಮಂಡ್ಯದಲ್ಲಿ ಕೈಗೊಂಡ ಗ್ರಾಮೀಣ ನೈರ್ಮಲ್ಯ ಯೋಜನೆ, ಶೌಚಾಲಯ ನಿರ್ಮಾಣ ದೇಶದ ಗಮನ ಸೆಳೆದಿತ್ತು. ಸ್ವತಃ ಪ್ರಧಾನಿ ಮೋದಿಯವರು ರೋಹಿಣಿಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದರು.

ಸಾಫ್ಟವೇರ್ ಇಂಜೀನಿಯರ್ ಸುಧೀರ್ ಎಂಬುವವರನ್ನು ವರಿಸಿರುವ ರೋಹಿಣಿಯವರಿಗೆ ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು ಮಗು ವಿದೆ‌. ಪೋಷಕರೊಂದಿಗೆ ಮೈಸೂರಿನಲ್ಲಿ ವಾಸವಾಗಿರುವ ರೋಹಿಣಿ ತಮ್ಮ ಕಾರ್ಯದಕ್ಷತೆಯಿಂದ ಹೆಸರು ಗಳಿಸಿದ್ದಷ್ಟೇ ವಿವಾದಕ್ಕೂ ಗುರಿಯಾಗುತ್ತಲೇ ಇದ್ದಾರೆ‌.

ಇತ್ತೀಚಿಗೆ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದ ವೇಳೆಯೂ ಆಕ್ಸಿಜನ್ ಪೊರೈಕೆ ಮಾಡಲು ಅವಕಾಶ ನೀಡುವ ವಿಚಾರದಲ್ಲಿ ರೋಹಿಣಿ ಹೆಸರು ಕೇಳಿಬಂದಿತ್ತು.

ಅಲ್ಲದೇ‌ ಮೈಸೂರಿನ ಬಹುತೇಕ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ರೋಹಿಣಿ ಯಾವುದಕ್ಕೂ ಅಂಜದೇ ಅಳುಕದೇ ತಮ್ಮ ಕರ್ತವ್ಯ ನಿಭಾಯಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ.

https://kannada.newsnext.live/karnataka-chief-minister-change-ashwath-narayana-new-cm/

Comments are closed.