ನಾನು ಯಾರ ಬಣವೂ ಅಲ್ಲ, ವಿರೋಧವೂ ಇಲ್ಲ : ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ : ಎಚ್.ವಿಶ್ವನಾಥ್

ಬೆಂಗಳೂರು : ನಾನು ಯಾರ ಬಣವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಜೊತೆಗೆ ಸ್ಪಿರಿಟ್ ಕೂಡ ಇಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರಲ್ಲಿಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಸ್ತುಸ್ಥಿತಿಯನ್ನು ಹೇಳಿದ್ದೇನೆ. ಆದರೆ ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲಬೆಂಭ ಬೇಸರವಿಲ್ಲ. ಯಡಿಯೂರಪ್ಪ ಅವರು ಮಾಡಿದ ಕೆಲಸಗಳ ಮೇಲೆ ಗೌರವವಿದೆ. ಅವರಿಗೆ ವಯಸ್ಸಾಗಿದೆ. ಹೈಕಮಾಂಡ್ ರಾಜೀನಾಮೆ ನೀಡಿ ಅಂದ್ರೆ ನೀಡೋದಾಗಿ ಖುದ್ದಿ ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ಅವರು ರಾಜೀನಾಮೆಯನ್ನು ನೀಡಿ ಮಾರ್ಗದರ್ಶಕರಾಗಿ ಮುಂದುವರಿಯಲಿ ಎಂದಿದ್ದಾರೆ.

ಇನ್ನು ವೀರಶೈವ ಲಿಂಗಾಯಿತ ಸಮುದಾಯದ ಮತ್ತೊಬ್ಬ ನಾಯಕನಿಗೆ ಸಿಎಂ ಆಗಲು ಅವಕಾಶ ಕಲ್ಪಿಸಿಕೊಡಿ. ಇಲ್ಲಾ ಪಂಚಮಸಾಲಿ ಲಿಂಗಾಯಿತರನ್ನು ಮುಖ್ಯಮಂತ್ರಿ ಮಾಡಲಿ. ಪಂಚಮಸಾಲಿ ಸಮುದಾಯದಿಂದ ಮುರುಗೇಶ್ ನಿರಾಣಿ, ಬಸವನ ಗೌಡ ಪಾಟೀಲ ಯತ್ನಾಳ್ ಹಾಗೂ ಬೆಲ್ಲದ್ ಇದ್ದಾರೆ. ಯುವಕರನ್ನು ಮಾಡೋದಾದ್ರೆ ಬೆಲ್ಲದ್ ಅವರಿಗೆ ಅವಕಾಶ ನೀಡಿ, ಇಲ್ಲವಾದ್ರೆ ಮಧ್ಯವಯಸ್ಕರು ಬೇಕಾದ್ರೆ ನಿರಾಣಿ ಹಾಗೂ ಎಲ್ಲದಕ್ಕೂ ಬೇಕಾದ್ರೆ ಯತ್ನಾಳ್ ಅವರನ್ನೇ ಸಿಎಂ ಮಾಡಿ ಎಂದಿದ್ದಾರೆ.

ಕೆಲವು ವಿಚಾರದ ಹಿನ್ನೆಲೆಯಲ್ಲಿ ನಾನು ಜೆಡಿಎಸ್ ಗೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಆದರೆ ಬಿಜೆಪಿಯಲ್ಲಿನ ಹಲವು ವಿಚಾರಗಳಿಗೂ ವಿರೋಧವಿದೆ. ಬಿಜೆಪಿಯಲ್ಲಿಯೂ ರಾಕ್ಷಸ ರಾಜಕಾರಣ, ಕುಟುಂಬ ರಾಜಕಾರಣ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

Comments are closed.