ಮೋದಿ ಮೆಗಾ ರೋಡ್ ಶೋ: ಮೂರು ದಿನ ರಾಜ್ಯದಲ್ಲಿ ಪ್ರಧಾನಿ ಮತಬೇಟೆ

ಬೆಂಗಳೂರು : ಶತಾಯ ಗತಾಯ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಡಳಿತಕ್ಕೆ ತರಲು ನಿರ್ಧರಿಸಿರುವ ಬಿಜೆಪಿ ಹೈಕಮಾಂಡ್ ತನ್ನ ದೃಷ್ಟಿಯನ್ನು ರಾಜ್ಯದತ್ತ ನೆಟ್ಟಿದೆ.‌ಇದರ ಫಲವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಆರಂಭಿಸಿ ಪ್ರಧಾನಿ ಮೋದಿಯವರ ತನಕ ಎಲ್ಲರೂ ಮತ್ತೆ ಮತ್ತೆ ರಾಜ್ಯ ಪ್ರವಾಸ ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮೇ 5 ರಿಂದ ಬರೋಬ್ಬರಿ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಮೇಗಾ ಟೂರ್ (Narendra Modi Road Show) ನಡೆಸಲಿದ್ದಾರೆ.

ಹೌದು ಈ ಚುನಾವಣೆ ಪ್ರಚಾರದ ಕೊನೆಯ ತ್ರೀ ಡೇ ಮೋದಿ ಕರ್ನಾಟಕ ಮೆಗಾ ಟೂರ್ ಗೆ ರಾಜ್ಯ ಸಿದ್ಧವಾಗಿದೆ. ಮೇ 5 ರಿಂದ ಮೇ 7 ರವರೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಮೋದಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಮೇ 5 ರಂದು ರಾಜ್ಯಕ್ಕೆ ಮೋದಿ ಮೂರನೇ ಬಾರಿ‌ ಎಂಟ್ರಿ ಕೊಡ್ತಿದ್ದು, ಈಗಾಗಲೇ ಸಿಂಧನೂರು,ಬಳ್ಳಾರಿ, ಉತ್ತರ ಕನ್ನಡ, ಮಂಗಳೂರು ಜಿಲ್ಲೆಗಳಲ್ಲಿ ಪ್ರಚಾರ ನಡೆಸಿರುವ ಮೋದಿ ಮೇ 5 ರಂದು ಬಳ್ಳಾರಿ ಮತ್ತು ತುಮಕೂರುಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ.

ಮೇ 5 ರಂದು ರಾತ್ರಿ‌ ಬೆಂಗಳೂರಿನಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದು, ಮೇ 06 ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಮೆಗಾ ರೋಡ್ ಶೋ (Narendra Modi Road Show) ನಡೆಸಲಿದ್ದಾರೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿ ವಿ ರಾಮನ್ ನಗರ ಕ್ಷೇತ್ರದಿಂದ‌ ಬ್ರಿಗೇಡ್ ರಸ್ತೆವರೆಗೆ ಮೊದಲ ಮೆಗಾ ರೋಡ್ ಶೋ ನಡೆಯಲಿದ್ದು, ಬಳಿಕ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರ ತನಕ ಎರಡನೇ ಮೆಗಾ ರೋಡ್ ಶೋ ನಡೆಯಲಿದೆ. ಎರಡನೇ ಮೆಗಾ ರೋಡ್ ಶೋ ಕೋಣನಕುಂಟೆ ಬಳಿಯ ಬ್ರಿಗೇಡ್ ಮಿಲೆನಿಯಂನಿಂದ ಸ್ಯಾಂಕಿ ಕೆರೆ ವರೆಗೆ 29.4 ಕಿ.ಮೀ ವರೆಗೆ ನಡೆಯಲಿದ್ದು, ಎರಡನೇ ದಿನವೂ ಮೋದಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಮೇ 07 ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮೀಣ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ಮೋದಿ ಕಾರ್ಯಕ್ರಮವಿದ್ದು, ಈ ನಾಲ್ಕೂ ಕ್ಷೇತ್ರಗಳಲ್ಲಿ ಸಾರ್ವಜನಿಕ ಬೃಹತ್ ಸಭೆಗಳಲ್ಲಿ ಮೋದಿ ಭಾಷಣವಿದೆ. ಬಳಿಕ ಮೇ 7 ರಂದು ಸಂಜೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಮೋದಿ ದೆಹಲಿಗೆ ವಾಪಸ್ಸಾಗಲಿದ್ದಾರೆ.

ಇದನ್ನೂ ಓದಿ : ಫ್ಯಾನ್ ಹಾಕುವಂತಿಲ್ಲ : ಕಸ ಗುಡಿಸುವಂತಿಲ್ಲ: ಎಲೆಕ್ಷನ್ ಕಮೀಷನ್ ರೂಲ್ಸ್ ತಂದ ಸಂಕಷ್ಟ

ಇದನ್ನೂ ಓದಿ : ಎನ್‌ಪಿಎಸ್‌ ರದ್ದು, ಹಳೆ ಪಿಂಚಣಿ ಯೋಜನೆ ಜಾರಿ

Comments are closed.