KL Rahul out : ಎಲ್‌ಎಸ್‌ಜಿ ಬಿಗ್ ಶಾಕ್, ಸಿಎಸ್‌ಕೆ ವಿರುದ್ಧದ ಪಂದ್ಯದಿಂದ ಕ್ಯಾಪ್ಟನ್ ರಾಹುಲ್ ಔಟ್

ಲಕ್ನೋ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings – CSK) ವಿರುದ್ಧದ ಪಂದ್ಯಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants – LSG) ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಸಿಎಸ್’ಕೆ ವಿರುದ್ಧದ ಪಂದ್ಯದಿಂದ ಲಕ್ನೋ ನಾಯಕ ಕೆ.ಎಲ್ ರಾಹುಲ್ (KL Rahul out) ಹೊರ ಬಿದ್ದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ಕಳೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಕೆ.ಎಲ್ ರಾಹುಲ್ ಬಲ ತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಹೀಗಾಗಿ ಪಂದ್ಯದಲ್ಲಿ ರಾಹುಲ್ 11ನೇ ಕ್ರಮಾಂಕದ ಆಟಗಾರನಾಗಿ ಕ್ರೀಸ್’ಗಿಳಿದಿದ್ದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಆ ಪಂದ್ಯದಲ್ಲಿ ಆರ್’ಸಿಬಿ ತಂಡ ಎಲ್ಎಸ್’ಜಿ ಪಡೆಯನ್ನು 18 ರನ್’ಗಳಿಂದ ಸೋಲಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ರಾಹುಲ್ ಅವರ ಸ್ನಾಯು ಸೆಳೆತದ ಗಾಯದ ಪ್ರಮಾಣ ಎಷ್ಟು ಗಂಭೀರ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆರ್’ಸಿಬಿ ವಿರುದ್ಧದದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದರಿಂದ ರಾಹುಲ್ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಮೂಲಗಳ ಪ್ರಕಾರ ರಾಹುಲ್ ಚೆನ್ನೈ ವಿರುದ್ಧದ ಪಂದ್ಯದಿಂದಷ್ಟೇ ಅಲ್ಲ, ಐಪಿಎಲ್’ನ ಉಳಿದೆಲ್ಲಾ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ರಾಹುಲ್ (KL Rahul out) ಅನುಪಸ್ಥಿತಿಯಲ್ಲಿ ಆಲ್ರೌಂಡರ್ ಕೃಣಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ಆಡಲಿರುವ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿದ್ದಾರೆ. ಆದರೆ ಇದೀಗ ಸ್ನಾಯು ಸೆಳೆತದ ಗಾಯಕ್ಕೊಳಗಾಗಿರುವ ಕಾರಣ, WTC ಫೈನಲ್’ನಲ್ಲಿ ರಾಹುಲ್ ಆಡುವ ಬಗ್ಗೆ ಅನುಮಾನಗಳಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್-2023ರಲ್ಲಿ ರಾಹುಲ್ ನಾಯಕತ್ವದಲ್ಲಿ ಆಡಿರುವ 9 ಪಂದ್ಯಗಳಿಂದ 5 ಗೆಲುವು ಹಾಗೂ 4 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : Virat Kohli Vs Shubman Gill : ಮ್ಯಾಚ್, ರನ್, ಸರಾಸರಿ, ಸ್ಟ್ರೈಕ್‌ರೇಟ್ ಎಲ್ಲವೂ ಸೇಮ್ ಟು ಸೇಮ್, ಇದು ಕಿಂಗ್-ಪ್ರಿನ್ಸ್ ಮ್ಯಾಜಿಕ್

ಇದನ್ನೂ ಓದಿ : ಕೆಎಲ್ ರಾಹುಲ್, ಜಯದೇವ್ ಉನದ್ಕತ್ ಗೆ ಗಾಯ : ಟೀಂ ಇಂಡಿಯಾಕ್ಕೆ ಹೊಸ ತಲೆನೋವು

Comments are closed.