Mohammed Shami: ವೇಶ್ಯೆಯರೊಂದಿಗೆ ಸಂಬಂಧ ಆರೋಪ, ಟೀಮ್ ಇಂಡಿಯಾ ವೇಗಿ ಶಮಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪತ್ನಿ

ದೆಹಲಿ: ಐಪಿಎಲ್-2023 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಅಮೋಘ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಹೊಸ ಸಂಕಷ್ಟ ಎದುರಾಗಿದೆ. ಶಮಿ ವಿರುದ್ಧ ವಿವಾಹೇತರ ಸಂಬಂಧದ ಆರೋಪ ಮಾಡಿರುವ ಪತ್ನಿ ಹಸಿನ್ ಜಹಾನ್ (Mohammed Shami – Hasin Jahan) ಪತಿಯ ವಿರುದ್ಧವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ 4 ವರ್ಷಗಳಿಂದ ಪತ್ನಿಯಿಂದ ದೂರವಾಗಿರುವ ಮೊಹಮ್ಮದ್ ಶಮಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಮೊಹಮ್ಮದ್ ಶಮಿ ವಿರುದ್ಧ ಈ ಹಿಂದೆಯೇ ಅನೈತಿಕ ಸಂಬಂಧದ ಆರೋಪ ಮಾಡಿ ಶಮಿ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದ ಪತ್ನಿ ಹಸಿನ್ ಜಹಾನ್ (Mohammed Shami – Hasin Jahan) , ಇದೀಗ ಮತ್ತೊಂದು ಆರೋಪ ಮಾಡಿದ್ದಾರೆ. ಮೊಹಮ್ಮದ್ ಶಮಿ ವೇಶ್ಯೆಯರೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್’ನಲ್ಲಿ ವಿಶೇಷ ಅರ್ಜಿ ದಾಖಲಿಸಿದ್ದಾರೆ. ಭಾರತ ತಂಡದ ವಿದೇಶ ಪ್ರವಾಸಗಳಲ್ಲಿದ್ದಾಗಲೂ ಶಮಿ ವೈಶ್ಯೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವಾಗಿ ಹಸಿನ್ ಜಹಾನ್ ಆರೋಪಿಸಿದ್ದಾರೆ.

ತಮ್ಮ ವಿರುದ್ಧ ಪತ್ನಿ ಇದುವರೆಗೆ ಮಾಡಿರುವ ಎಲ್ಲಾ ಆರೋಪಗಳನ್ನು ಮೊಹಮ್ಮದ್ ಶಮಿ ತಳ್ಳಿ ಹಾಕುತ್ತಾ ಬಂದಿದ್ದಾರೆ. ಆದರೆ 2018ರಲ್ಲಿ ಪತ್ನಿಯ ಆರೋಪದ ಹಿನ್ನೆಲೆಯಲ್ಲಿ ಕೋಲ್ಕತಾ ಪೊಲೀಸರು ಮೊಹಮ್ಮದ್ ಶಮಿ ಅವರ ವಿಚಾರಣೆ ನಡೆಸಿದ್ದರು. ಅಷ್ಟೇ ಅಲ್ಲ, ಶಮಿ ವಿರುದ್ಧ ಅಲಿಪುರ ಕೋರ್ಟ್’ನಿಂದ ಅರೆಸ್ಟ್ ವಾರೆಂಟ್ ಕೂಡ ಜಾರಿಯಾಗಿತ್ತು.

ಐಪಿಎಲ್-2023ರಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ 33 ವರ್ಷದ ಬಲಗೈ ವೇಗಿ ಮೊಹಮ್ಮದ್ ಶಮಿ ಆಡಿರುವ 9 ಪಂದ್ಯಗಳಿಂದ 7.05ರ ಅಮೋಘ ಎಕಾನಮಿಯಲ್ಲಿ 17 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮಂಗಳವಾರ ಅಹ್ಮದಾಬಾದ್’ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶಮಿ 11 ರನ್ನಿಗೆ 4 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 5 ರನ್’ಗಳ ಸೋಲು ಕಂಡಿತ್ತು.

ಇದನ್ನೂ ಓದಿ : 13 ಮಂದಿ ಆಟಗಾರರೊಂದಿಗೆ ಆಡುವ ಮುಂಬೈ ಇಂಡಿಯನ್ಸ್, ಐಪಿಎಲ್‌ನಲ್ಲಿ ಏನಿದು ಹೊಸ ಕಥೆ?

ಇದನ್ನೂ ಓದಿ : ಅಜಿಂಕ್ಯ ರಹಾನೆಗೆ ಟೀಮ್ ಇಂಡಿಯಾ ಟಿಕೆಟ್ ಕೊಡಿಸಿತು ಧೋನಿ ಜೊತೆಗಿನ ಅದೊಂದು ಫೋನ್ ಕಾಲ್

ಇದನ್ನೂ ಓದಿ : ಮಹಿಳಾ ಕ್ರಿಕೆಟ್ ತಂಡದ ಕಾಂಟ್ರಾಕ್ಟ್ ಲಿಸ್ಟ್ ಪ್ರಕಟಿಸಿದ ಬಿಸಿಸಿಐ, ಯಾರಿಗೆಷ್ಟು ಲಕ್ಷ? ಪಟ್ಟಿಯಲ್ಲಿ ಕರ್ನಾಟಕದ ಆಟಗಾರ್ತಿಯರೆಷ್ಟು?

Comments are closed.