EPPO DigiLoker : ನಿವೃತ ಯೋಧರಿಗೆ ಸಿಹಿ ಸುದ್ದಿಕೊಟ್ಟ ಕೇಂದ್ರ ಸರಕಾರ

ನವದೆಹಲಿ : ಮಾಜಿ ಯೋಧರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ರಕ್ಷಣಾ ಇಲಾಖೆಯ ಪಿಂಚಣಿದಾರರ ಅನುಕೂಲಕ್ಕೆಂದು ಪಿಂಚಣಿ ಪಾವತಿ ವ್ಯವಸ್ಥೆಗೆ (ಇಪಿಪಿಓ) ಡಿಜಿಲಾಕರ್‌ಅನ್ನು ಜೋಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದಾಗಿ ಮಹತ್ವದ ದಾಖಲೆಗಳನ್ನು ಸುರಕ್ಷಿತವಾಗಿಡಲು ಈ ಡಿಜಿ ಲಾಕರ್‌ ನೆರವಾಗಲಿದೆ.

ರಕ್ಷಣಾ ಸಚಿವಾಲಯದ ಮಾಜಿ ಯೋಧರ ಕಲ್ಯಾಣ ಇಲಾಖೆಯು ರಕ್ಷಣಾ ಖಾತೆಗಳ ಪ್ರಧಾನ ನಿಯಂತ್ರಕರಿಂದ ಸೃಷ್ಟಿಸಲ್ಪಟ್ಟ ಇಪಿಪಿಓಅನ್ನು ಡಿಜಿಲಾಕರ್‌ನೊಂದಿಗೆ ಸಮಗ್ರಗೊಳಿಸಿದೆ. ಈ ಕ್ರಮದಿಂದಾಗಿ ದೇಶಾದ್ಯಂತ ಇರುವ 23 ಲಕ್ಷದಷ್ಟು ಪಿಂಚಣಿದಾರರಿಗೆ ಅನುಕೂಲವಾಗಲಿದ್ದು, ಡಿಜಿಲಾಕರ್‌ ಅಪ್ಲಿಕೇಶನ್ ಮೂಲಕ ಪಿಪಿಓನ ಪ್ರತಿಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಸರಕಾರಿ ಹುದ್ದೆ ನೇಮಕಾತಿಗೆ ಅನುಕಂಪ ಬೇಡ, ಸಮಾನತೆ ಕೊಡಿ: ಸುಪ್ರೀಂ ಕೋರ್ಟ್

ಪಿಪಿಓನ ಎಲ್ಲ ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುವುದು, ಇದೀಗ ಪಿಂಚಣಿದಾರರು ಪಿಪಿಓನ ದೈಹಿಕ ಪ್ರತಿ ಪಡೆಯಲು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಅಲಹಬಾದ್‌ನ ಪಿಸಿಡಿಎಅನ್ನು ಇಪಿಪಿಓಗಳಿಗೆ ಸೇವೆ ಒದಗಿಸಲು ನೇಮಿಸಲಾಗಿದೆ. ಇಪಿಪಿಓ ದಾಖಲೆಗಳನ್ನು ಎಲ್ಲಿಂದ ಬೇಕಾದರೂ ಪಿಂಚಣಿದಾರರು ಈಗ ಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ: Corona Death : ಕೊರೊನಾದಿಂದ ಮೃತಪಟ್ಟವರಿಗೆ 30 ದಿನದಲ್ಲಿ ಪರಿಹಾರ ನೀಡಿ : ಸುಪ್ರೀಂ ಕೋರ್ಟ್‌

(Central government to give sweet news to retired warriors)

Comments are closed.