Actors outrage : ಥಿಯೇಟರ್ ಗೆ ಇನ್ನೂ ಸಿಕ್ಕಿಲ್ಲ ರಿಲೀಫ್ : ಸರ್ಕಾರದ ನಿರ್ಣಯಕ್ಕೆ ನಟ-ನಟಿಯರ ಆಕ್ರೋಶ

ಬೆಂಗಳೂರು : ರಾಜ್ಯದಲ್ಲಿ ನಿಧಾನಕ್ಕೆ ಕರೋನಾ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ ಸರ್ಕಾರ ಒಂದೊಂದಾಗಿ ಕಠಿಣ ನಿಯಮಗಳಲ್ಲಿ ಸಡಿಲಿಕೆ‌ ಮಾಡುತ್ತಿದೆ. ಆದರೆ ಇನ್ನೂ ಥಿಯೇಟರ್, ಸಿಮ್ಮಿಂಗ್ ಪೂಲ್ ಹಾಗೂ ಹಲವೆಡೆ ಶೇಕಡಾ 50 ರಷ್ಟು ಜನರಿಗೆ ಮಾತ್ರ ಪ್ರವೇಶಾವಕಾಶ ನೀಡುವ ತೀರ್ಮಾನವನ್ನು ಸರಕಾರ ಮುಂದುವರೆಸಿದೆ. ಆದರೆ ಥಿಯೇಟರ್ ಗಳ‌ ಮೇಲಿನ‌ ನಿರ್ಬಂಧಕ್ಕೆ ನಟ-ನಟಿಯರು ಆಕ್ರೋಶ (actors outrage) ವ್ಯಕ್ತಪಡಿಸಿದ್ದು, ಹೀಗಾದ್ರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಜಾರಿಗೆ ತಂದಿರೋ 50:50 ರೂಲ್ಸ್ ಗೆ ನಟ ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಮಾತನಾಡಿರೋ ವಿನೋದ್ ರಾಜ್, ನಮಸ್ಕಾರ ಚಿತ್ರಮಂದಿರಗಳಿಗೆ ಶೇ 50 ರಷ್ಟು ಮಾತ್ರ ಅವಕಾಶ ನೀಡಿರೋ ಸಂಗತಿ ಕೇಳಿ ನನಗೆ ಶಾಕ್ ಆಗಿದೆ. ಸಿನಿಮಾದವರಿಗೆ ಎಲ್ಲಾ ಸಂದರ್ಭದಲ್ಲೂ ಅನ್ಯಾಯವಾಗಿದೆ. ನಾವು ಭೂಮಿ ಮೇಲೆ ಬಂಡವಾಳ ಹಾಕುತ್ತಿಲ್ಲ. ಇದು ಕಲೆ ಮೇಲೆ ಹಾಕುವ ಬಂಡವಾಳ. ಅಡುಗೆ ಬಿಸಿ ಬಿಸಿಯಾಗಿ ಮಾಡಿ ತಿಂದರೇ ರುಚಿ.‌ ಸಿನಿಮಾಗಳು ಹಾಗೇ . ಆದರೆ ಈ ವರ್ಷಗಳಿಂದ ಬಿಗ್ ಬಜೆಟ್ ಸಿನಿಮಾಗಳು ಶೂಟಿಂಗ್ ಮುಗಿಸಿ ರಿಲೀಸ್ ಗೆ ಸಿದ್ಧವಾಗಿದ್ದರೂ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ.

ಈಗ ಸಿನಿಮಾ ರಿಲೀಸ್ ಆದರೂ ಕೂಡ ಶೇಕಡಾ 50 ರಷ್ಟು ಜನರು ಮಾತ್ರ ನೋಡ್ತಾರೆ. ಸಿನಿಮಾದ ಮೊದಲ 10 ದಿನದ ಕಲೆಕ್ಷನ್ ನಲ್ಲಿ ನಿರ್ಮಾಪಕರ ಖರ್ಚು ಒಂದು ಹಂತಕ್ಕೆ ಸರಿಯಾಗುತ್ತೆ. ಆದರೆ ಈಗ 50 ಶೇಕಡಾ ಜನರು ಸಿನಿಮಾ ನೋಡಿದ್ರೇ ಇದು ಸಾಧ್ಯ ಆಗಲ್ಲ. ಹೀಗಾಗಿ ಸಿನಿಮಾದವರಿಗೆ ನಷ್ಟವಾಗಲಿದೆ ಎಂದು ವಿನೋದ್‌ ರಾಜ್ ಬೇಸರ ತೋಡಿಕೊಂಡಿದ್ದಾರೆ. ಇನ್ನು ಸರ್ಕಾರದ ಈ ನಿಯಮದಿಂದ ಏನು ಮಾಡಬೇಕು ಎಂದೇ ಅರ್ಥವಾಗುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದ ನಟ ಡಾರ್ಲಿಂಗ್ ಕೃಷ್ಣ, ನಾನು ಫೆ.11 ಕ್ಕೆ ಲವ್ ಮಾಕ್ಟೆಲ್ 2 ರಿಲೀಸ್ ಮಾಡಬೇಕೆಂದಿದ್ದೆ. ಈಗ ಏನು ಮಾಡಬೇಕೆಂದೇ ಅರ್ಥವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಟಿ ಮಿಲನಾ ನಾಗರಾಜ್ ಕೂಡ ಸರ್ಕಾರದ ಈ ನಿಯಮದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸಿಎಂ ಭೇಟಿ ಮಾಡಿದ್ದು ಸಿಎಂ ಸೋಮವಾರ ವಿಸ್ತ್ರ ವರದಿ ಸಲ್ಲಿಸಲು ಹೇಳಿದೆ ಎಂದು ಉಮೇಶ್ ಬಣಕಾರ್ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಇಂಡಸ್ಟ್ರಿ ತಮ್ಮ ಥಿಯೇಟರ್ ಗಳ ಮೇಲಿನ ನಿರ್ಬಂಧ ರಿಲೀಸ್ ಮಾಡಿಸಲು ಸರ್ಕಸ್ ಆರಂಭಿಸಿದೆ.

ಇದನ್ನೂ ಓದಿ : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್

ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮತ್ತೇರಿಸಿದ ಮಾಳವಿಕಾ : ಬೋಲ್ಡ್ ಬಿಕನಿ‌ ವಿಡಿಯೋ ವೈರಲ್

( Karnataka actors outrage of the government decision, not get relief Covid-19 relaxation)

Comments are closed.