DK Shivakumar:ನಿಖಿಲ್‌ ಕುಮಾರ್‌ ಸ್ವಾಮಿ, ಡಿಕೆ ಶಿವಕುಮಾರ್‌ ಮತ್ತು ಚೆಲುವರಾಯಸ್ವಾಮಿರವರ ಮುಖಾಮುಖಿ

ಮಂಡ್ಯ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar)ಹಾಗೂ ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಅವರು ಮುಖಾಮುಖಿಯಾಗಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ನಿಖಿಲ್‌ ಕುಮಾರಸ್ವಾಮಿ(Nikhil Kumar Swamy)ಅವರಿಗೆ ಹಸ್ತಲಾಘವ ಮಾಡುವ ಜೊತೆಗೆ ಭುಜ ತಟ್ಟಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.

(Nikhil Kumar Swamy)ಮಂಡ್ಯದ ಬಂದೀಗೌಡ ಬಡಾವಳಿಯಲ್ಲಿ ಮಾಜಿ ಶಾಸಕ ಕೆ.ವಿ.ಶಂಕರಗೌಡ ಅವರ ಪತ್ನಿ ವಿಧಿವಶರಾಗಿದ್ದು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ಶಂಕರೇಗೌಡ ಅವರ ಮನೆಗೆ ಆಗಮಿಸಿ ಸಾಂತ್ವಾನ ಹೇಳುತ್ತಿದ್ದಾರೆ. ನಿಖಿಲ್‌ ಕುಮಾರ್‌ ಸ್ವಾಮಿ(Nikhil Kumar Swamy) ಅವರು ಸಾಂತ್ವಾನ ಹೇಳಿ ಹೊರಡುವ ಸಮಯದಲ್ಲಿ ಆಗ ತಾನೇ ಕಾಂಗ್ರೆಸ್‌ ನಾಯಕರ ಆಗಮನವಾಗಿದೆ. ರಾಜಕೀಯ ಬದ್ದ ವೈರಿಗಳು ಮುಖಾಮುಖಿಯಾಗಿ ಕೈಕುಲುಕಿರುವುದು ಅಪರೂಪದ ಘಟನೆಯಾಗಿದ್ದು, ರಾಜಕೀಯ ಮುಖಂಡರು ಈ ಘಟನೆಗೆ ಸಾಕ್ಷಿಯಾಗಿದ್ದಾರೆ.

ಆರಂಭದಲ್ಲಿ ಚಲುವರಾಯಸ್ವಾಮಿಯನ್ನು ಕಂಡ ನಿಖಿಲ್‌ರವರು ನಮಸ್ಕಾರ ಚೆಲುವಣ್ಣ ಎಂದು ಹೇಳಿ ಪರಸ್ಪರ ಕೈ ಕುಲುಕಿದ್ದಾರೆ. ಅಲ್ಲದೇ ಸ್ವಲ್ಪ ಸಮಯ ಉಭಯ ಕುಶಲೋಪಚಾರದ ವಿಚಾರಣೆ ನೆಡೆಸಿದ್ದರು. ನಂತರ ಆಗಮಿಸಿದ ಡಿಕೆ ಶಿವಕುಮಾರ್‌ರವರು ನಿಖಿಲ್‌ರವರ ಎದೆ ಮತ್ತು ಭುಜಕ್ಕೆ ಪ್ರೀತಿಯಿಂದ ಗುದ್ದಿ ಮಾತನಾಡಿಸಿದ್ದಾರೆ.

ಹೀಗೆ ನಿಖಿಲ್‌ ಕುಮಾರಸ್ವಾಮಿಯವರು (DK Shivakumar) ಡಿಕೆಶಿ, ಚೆಲುವರಾಯಸ್ವಾಮಿ(Cheluvarayaswamy) ಹಾಗೂ ಇತರ ಕಾಂಗ್ರೆಸ್ಸಿನರ ಕೈ ಕುಲುಕಿ ಮಾತುಕತೆ ನಡೆಸಿದರು. ‌ಚಲುವರಾಯಸ್ವಾಮಿ(Cheluvarayaswamy) ಅವರು ಈ ಹಿಂದೆ ನಿಖಿಲ್‌ ಕುಮಾರಸ್ವಾಮಿಯವರ ಸೋಲಿಗೆ ನೇರ ಕಾರಣರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ಚಲುವರಾಯಸ್ವಾಮಿರವರ ಜೊತೆ ನಿಖಿಲ್‌ ನೇರ ಮಾತುಕತೆಯನ್ನು ನೆಡೆಸಿದ್ದಾರೆ. ಮಂಡ್ಯದಲ್ಲಿ ನಡೆದ ಚಲುವರಾಯಸ್ವಾಮಿ (Cheluvarayaswamy)ಮತ್ತು ನಿಖಿಲ್‌ರವರ ಮಾತುಕತೆ ತೀವ್ರ ಪ್ರಮಾಣದ ಚರ್ಚೆಗೆ ಒಳಗಾಗಿದೆ. ಮಂಡ್ಯದ ಮತೃರ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರೆಳಿದ ಉಭಯ ನಾಯಕರ ಮುಖಾಮುಖಿಯು ರಾಜಕೀಯ ರಂಗದಲ್ಲಿಯೂ ಬಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : ಮೇಕೆದಾಟು ಬಳಿಕ ಕೃಷ್ಣೆಗಾಗಿ ‘ಕೈ’ ಪಾದಯಾತ್ರೆ: ಸುಳಿವು ಕೊಟ್ಟ ಡಿ.ಕೆ.ಶಿವಕುಮಾರ್

ಇದನ್ನೂ ಓದಿ : ಆರೋಪ ಮುಕ್ತನಾಗುತ್ತಿದ್ದಂತೆಯೇ ಸಚಿವ ಸ್ಥಾನ ಮರಳಿ ಕೊಡ್ತೀನಿ ಅಂದಿದ್ರು : ಮಾಜಿ ಸಚಿವ ಈಶ್ವರಪ್ಪ ಅಸಮಾಧಾನ

ಇದನ್ನೂ ಓದಿ : ದಮ್ಮು ಕಟ್ಟುತ್ತದೆ ಎಂದ ಬಂಟ್ವಾಳ್‌, ಇಲ್ಲ ಎಂದ ಕಾಂಗ್ರೆಸ್‌ : ರಮಾನಾಥ ರೈ ಹಾಗೂ ಹರಿಕೃಷ್ಣ ಬಂಟ್ವಾಳ್‌ ಮಾತಿನ ಸಮರ

ಭೇಟಿಯ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ಡಿಕೆಶಿಯನ್ನು ಕುರಿತು ಒಬ್ಬ ಅನುಭವಿ ರಾಜಕಾರಣಿ. ಇದು ಕೇವಲ ಆಕಸ್ಮಿಕ ಬೇಟಿಯಷ್ಟೇ. ರಾಜಕೀಯ ವಿಚಾರದಲ್ಲಿ ಏನೇ ಇದ್ದರೂ ಅದನ್ನು ನಾವು ರಾಜಕೀಯವಾಗಿಯೇ ಉತ್ತರವನ್ನು ಕೊಡುತ್ತೇವೆ ಹೊರತು ವೈಯಕ್ತಿಕವಾಗಿ ನಮ್ಮಲ್ಲಿ ಏನೂ ದ್ವೇಷವಿರುವುದಿಲ್ಲ.ಹಾಗಾಗಿ ಯಾರೇ ಸಿಕ್ಕಿದ್ದರೂ ಉಭಯ ಕುಶಲೋಪಚಾರ ಮಾತುಕತೆ ನೆಡೆಯುವುದು ಸಹಜವೆಂದು ನಿಖಿಲ್‌ ಹೇಳಿದ್ದರು. ಹಾಗಾಗಿ ಅದಕ್ಕೆಲ್ಲ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಂಡ್ಯದಲ್ಲಿ ಹೇಳಿದರು.

Nikhil Kumar Swamy, DK Sivakumar and Cheluvarayaswamy face off

Comments are closed.