40 Elephants coffee Estate : ಸಕಲೇಶಪುರದಲ್ಲಿ ಕಾಡಾನೆಗಳ ಹಾವಳಿ : ಆತಂಕದಲ್ಲಿ ಕಾಫಿ ಬೆಳೆಗಾರರು

ಹಾಸನ : (40 Elephants coffee Estate) ಮಲೆನಾಡಿನ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಇದೀಗ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಳೆಕೆರೆ ಗ್ರಾಮದ ಗೀತಾಂಜಲಿ ಕಾಫಿ ಎಸ್ಟೇಟ್ ನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಸುಮಾರು ನಲವತ್ತಕ್ಕೂ ಅಧಿಕ ಕಾಡಾನೆಗಳು ಕಾಫಿತೋಟಕ್ಕೆ ಲಗ್ಗೆ ಇಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಸಕಲೇಶಪುರ ತಾಲೂಕಿನ ಬಹುತೇಕ ಕಡೆಗಳಲ್ಲಿ ಕಾಡಾನೆಗಳ ಹಾವಳಿ ಸರ್ವೆ ಸಾಮಾನ್ಯ. ಆದ್ರೆ ಇಂದು ಆನೆಗಳು ಹಿಂಡು ಹಿಂಡಾಗಿ ಕಾಫಿತೋಟದಲ್ಲಿ ಓಡಾಡುತ್ತಿವುದು ಆತಂಕ ಮೂಡಿಸಿದೆ. 40 ಕ್ಕೂ ಅಧಿಕ ಕಾಡಾನೆಗಳು ರಸ್ತೆಯ ಮೂಲಕ ಕಾಫಿತೋಟಕ್ಕೆ ಎಂಟ್ರಿ ಕೊಡುತ್ತಿರುವ ದೃಶ್ಯವನ್ನು ಮೊಬೈಲ್‌ ಮೂಲಕ ಸೆರೆ ಹಿಡಿಯಲಾಗಿದೆ.

ಮೊಬೈಲ್‌ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಲೇ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾಫಿ ಎಸ್ಟೇಟ್‌ ಒಳಗೆ ಕಾಡಾನೆಗಳು ಎಂಟ್ರಿ ಕೊಟ್ಟಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ. ಇನ್ನು ಕಾಡಾನೆಗಳ ಜೊತೆಗೆ ಆನೆಯ ಮರಿಗಳು ಕೂಡ ಕಂಡು ಬಂದಿವೆ.

ಇತ್ತೀಚಿನ ದಿನಗಳಲ್ಲಿ ಹಳೆಕೆರೆ ಗ್ರಾಮದ ಒಂದಿಲ್ಲೊಂದು ಕಡೆಗಳಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಇಷ್ಟು ದಿನ ಒಂದೆರಡು ಕಾಡಾನೆಗಳು ಕಾಣ ಸಿಗುತ್ತಿದ್ದವು. ಆದ್ರೀಗ ಹಿಂಡು ಹಿಂಡು ಕಾಡಾನೆಗಳು ಪ್ರತ್ಯಕ್ಷವಾಗಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Cheetah’s big challenge: ಚೀತಾಗಳೇನೋ ಬಂದ್ವು, ಈಗ ಚಿಂತೆ ಶುರು

ಇದನ್ನೂ ಓದಿ : stole gold jewellery :ಎರಡು ಪ್ರತ್ಯೇಕ‌ ಘಟನೆಯಲ್ಲಿ ಖತರ್ನಾಕ್ ಐಡಿಯಾ ರೂಪಿಸಿ ಚಿನ್ನಾಭರಣ ದೂಚಿದ ಖದೀಮರು

40 Elephants entering coffee Estate in sakaleshpura Coffee growers are worried

Comments are closed.