Dr. Vishnuvardhan:ಸಾಹಸಸಿಂಹ ಡಾ.ವಿಷ್ಣುವರ್ಧನ್‌ 72ನೇ ಹುಟ್ಟುಹಬ್ಬ : ಅಭಿಮಾನಿಗಳಿಂದ ಸಂಭ್ರಮಾಚರಣೆ

ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ನಟ (Dr. Vishnuvardhan)ಡಾ.ವಿಷ್ಣುವರ್ಧನರವರ 72ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ನೆಡೆಯುತ್ತಿದೆ. ಡಿಸೆಂಬರ್ 30 2009 ರಂದು ಅವರು ಬಾರದ ಲೋಕಕ್ಕೆ ಪಯಣಿಸಿದ್ದರೂ ಕೂಡ ಅವರು ಅಭಿಮಾನಿಗಳ ಎದೆಯಲ್ಲಿ ಇಂದಿಗೂ ಅಚ್ಚಳಿಯದೇ ಉಳಿದುಕೊಂಡಿದ್ದಾರೆ. ವಿಷ್ಣುವರ್ಧನ್‌ ಅವರ ಸಮಾಧಿ ಇರುವ ಅಭಿಮಾನ್‌ ಸ್ಟೂಡಿಯೋದ ಹೊರ ಬಾಗದಲ್ಲಿ ಸಾಹಸ ಸಿಂಹನ ಬೃಹತ್‌ 50 ಕಟೌಟ್‌ಗಳನ್ನು ಹಾಕಲಾಗಿದೆ. ಜೊತೆಗೆ ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಮಾಜಿಕ ಕಾರ್ಯವನ್ನು ಕೈಗೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಟ ವಿಷ್ಣುವರ್ಧನ್‌(Dr. Vishnuvardhan)ಅವರು 1950ರ ಸೆಪ್ಟೆಂಬರ್‌ 18 ರಂದು ಮೈಸೂರಿನಲ್ಲಿ ಹೆಚ್.ಎಲ್‌.ನಾರಾಯಣ ರಾವ್‌ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳ 6 ಜನ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ಹಾಗೆ ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್‌ ಕಾಲೇಜಿನಲ್ಲಿ ಪಡೆದುಕೊಂಡರು. ನಂತರದ ದಿನಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯಾದ ಭಾರತಿಯನ್ನು ಮದುವೆಯಾದರು. ಇವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಹಾಗೆ ಚಿತ್ರರಂಗದಲ್ಲೂ ಅನೇಕ ಸೇಹ್ನಿತರನ್ನು ಹೊಂದಿದ್ದರು. ಅದರಲ್ಲಿ ನಟ ಅಂಬರೀಶ್‌ ನಡುವಿನ ಸೇಹ್ನಮಯ ಒಡನಾಟವಂತೂ ಎಲ್ಲರಿಗೂ ಮಾದರಿಯಾಗಿದೆ.

ಸಂಪತ್‌ ಕುಮಾರ್‌ ವಿಷ್ಣುವರ್ಧನ್‌ ಅವರ ಮೂಲ ಹೆಸರಾಗಿದೆ. ಸಾಹಸಸಿಂಹ ವಿಷ್ಣುವರ್ಧನ್‌ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಒಟ್ಟು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್‌ ಅವರ ನಾಗರಹಾವು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್‌ ಕುಮಾರ್‌ನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಾಮಚಾರಿಗೆ “ವಿಷ್ಣುವರ್ಧನ್‌” ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್‌. ನಾಗರಹಾವು ಸಿನಿಮಾವು ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನೂರು ದಿನ ಪೂರೈಸಿದ ಸಿನಿಮಾವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಸಿನಿಮಾದ ಮೂಲಕ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ : ಹಾಟ್ ಅವತಾರದಲ್ಲಿ ಅಮೃತ ವರ್ಷಿಣಿ ಹುಡುಗಿ : ರಜಿನಿ ಪೊಟೋಶೂಟ್ ನೋಡೋಕೆ ಮರಿಬೇಡಿ

ಇದನ್ನೂ ಓದಿ : ”ಬಿಗ್‌ ಬಾಸ್‌ ಕನ್ನಡ ಓಟಿಟಿ ಸೀಸನ್‌ 1″ರ ವಿನ್ನರ್ ರೂಪೇಶ್‌ ಶೆಟ್ಟಿ: ಅಭಿಮಾನಿಗಳ ಸಂಭ್ರಮಾಚರಣೆ

ಇದನ್ನೂ ಓದಿ : ‘ಗಜರಾಮ’ನಾದ ಮ್ಯಾಸಿವ್ ಸ್ಟಾರ್ ರಾಜವರ್ಧನ್…ಡಿಂಗ್ರಿ ನಾಗರಾಜ್ ಪುತ್ರನ ಹೊಸ ಕನಸು ಇದು

ಡಾ.ವಿಷ್ಣುವರ್ಧನ್‌ ಕೇವಲ ನಟರಾಗಿ ಮಾತ್ರವಲ್ಲ ಅವರೊಬ್ಬರ ಗಾಯಕ ಕೂಡ ಹೌದು. ಕಿಲಾಡಿಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಹಾಗೂ ಮೊದಲಾದ ಹಲವು ಸಿನಿಮಾದಲ್ಲಿ ಹಿನ್ನಲೆ ಗಾಯಕರಾಗಿಯೂ ಖ್ಯಾತಿಯನ್ನು ಪಡೆದುಕೊಂಡಿದ್ದರು. ಕನ್ನಡ ಸಿನಿಮಾಗಳಲ್ಲಿಯೇ ದ್ವಿಪಾತ್ರದಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ನಟ ಅನ್ನೋ ಖ್ಯಾತಿಗೂ ಸಾಹಸಸಿಂಹ ಪಾತ್ರರಾಗಿದ್ದಾರೆ.

Dr. Vishnuvardhan’s 72nd birthday: Celebration by fans

Comments are closed.