KS Eshwarappa : ಮುಸಲ್ಮಾನರು ಎಲ್ಲಿರ್ತಾರೋ ಅಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ತಾರೆ : ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ : KS Eshwarappa Siddaramaiah : 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಭರ್ಜರಿ ಸಿದ್ಧತೆಯನ್ನೇ ನಡೆಸುತ್ತಿದೆ. ವಿರೋಧ ಪಕ್ಷಗಳಿಗೆ ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸುವ ಸಲುವಾಗಿ ಸಿದ್ದರಾಮೋತ್ಸವವನ್ನೂ ಮಾಡಲಾಗ್ತಿದೆ. ಆಗಸ್ಟ್​ 3ರಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಪ್ರಯುಕ್ತ ದಾವಣಗೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದನ್ನು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಟೀಕೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯರ ಜನ್ಮ ದಿನೋತ್ಸವಕ್ಕೆ 75 ಕೋಟಿ ಖರ್ಚು ಮಾಡುವ ಬದಲು ಆ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿ ಎಂದು ಕಿವಿಮಾತುಗಳನ್ನು ಹೇಳಿದ್ದಾರೆ .

ಚುನಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ ನೀಡ್ತಾರೆ. ಕಳೆದ ವರ್ಷ ಕೂಡ ಇದೇ ಸಿದ್ದರಾಮಯ್ಯ ನನ್ನದು ಇದೇ ಕೊನೆ ಚುನಾವಣೆ ಅಂದಿದ್ದರು. ಅಲ್ಲದೇ ಬಾದಾಮಿ ಕ್ಷೇತ್ರ ಬಿಟ್ಟು ಮತ್ತೆಲ್ಲೂ ಹೋಗಲ್ಲ ಎಂದಿದ್ರು. ಆದರೆ ಈಗ ಕೋಲಾರ, ಕೊಪ್ಪಳ, ವರುಣ ಹೀಗೆ ಬೇರೆ ಕ್ಷೇತ್ರಗಳ ಹೆಸರೇ ಅವರ ಬಾಯಲ್ಲಿ ಬರ್ತಿದೆ. ಎಲ್ಲಿ ಸಾಬರ ಸಂಖ್ಯೆ ಜಾಸ್ತಿ ಇರುತ್ತೋ ಅಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ತಾರೆ. ರಾಹುಲ್​ ಗಾಂಧಿ ಕೂಡ ಕೇರಳದ ವಯನಾಡಿನಲ್ಲಿ ಸ್ಪರ್ಧೆ ಮಾಡಿಲ್ವೇ..? ಕಾಂಗ್ರೆಸ್ಸಿಗರು ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಎಲ್ಲಿ ಅತೀ ಹೆಚ್ಚು ಸಂಖ್ಯೆಯ ಮುಸ್ಲಿಮರು ಇರ್ತಾರೋ ಅಲ್ಲಿ ಹೋಗಿ ಚುನಾವಣೆ ಎದುರಿಸ್ತಾರೆ ಎಂದು ವ್ಯಂಗ್ಯವಾಡಿದರು.

ಜಿಎಸ್​ಟಿ ವಿರುದ್ಧ ವಿಪಕ್ಷಗಳ ಆಕ್ರೋಶ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಈಶ್ವರಪ್ಪ, ಜಿಎಸ್​ಟಿ ಬಿಜೆಪಿ ನಿರ್ಧಾರವಲ್ಲ. ರಾಜಸ್ಥಾನ ಹಾಗೂ ಜಾರ್ಖಂಡ್​ನಲ್ಲಿ ಕಾಂಗ್ರೆಸ್​ ಸರ್ಕಾರವಿದೆ. ಅಲ್ಲಿ ಜಿಎಸ್​ಟಿ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಮಾತ್ರ ನಿಮ್ಮ ರಾಜಕೀಯ. ಇದೀಗ ಸಿದ್ದರಾಮೋತ್ಸವ ಎಂಬ ನಾಟಕ ಶುರುವಾಗಿದೆ. 75 ಕೋಟಿ ಖರ್ಚು ಮಾಡಿ ಸಿದ್ದರಾಮೋತ್ಸವ ಆಚರಿಸುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ .

ಇದನ್ನು ಓದಿ : woman kills husband : ಜೀನ್ಸ್​ ಪ್ಯಾಂಟ್​ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

ಇದನ್ನೂ ಓದಿ : Mani Ratnam : ಖ್ಯಾತ ನಿರ್ದೇಶಕ, ನಿರ್ಮಾಪಕ ಮಣಿರತ್ನಂಗೆ ಕೊರೊನಾ ಸೋಂಕು : ಆಸ್ಪತ್ರೆಗೆ ದಾಖಲು

KS Eshwarappa expressed anger against Siddaramaiah

Comments are closed.